Covid cases in India: ದೇಶದಲ್ಲಿ 41,506 ಹೊಸ ಕೊವಿಡ್ ಪ್ರಕರಣಗಳು ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 4.54 ಲಕ್ಷಕ್ಕೆ ಇಳಿಕೆ
Covid 19: ಕೇರಳದಲ್ಲಿ 14,087 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 4.54 ಲಕ್ಷಕ್ಕೆ ಇಳಿದಿವೆ. ಮಹಾರಾಷ್ಟ್ರ ಮತ್ತು ಕೇರಳ ಎರಡರಲ್ಲೂ ಹಿಂದಿನ ದಿನಕ್ಕಿಂತ ಸಕ್ರಿಯ ಸೋಂಕು ಹೆಚ್ಚಾಗಿದೆ. ಚೇತರಿಕೆ ದರ ಶೇಕಡಾ 97.20 ಕ್ಕೆ ಏರಿದೆ.

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,506 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು 895 ಮಂದಿ ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 14,087 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 4.54 ಲಕ್ಷಕ್ಕೆ ಇಳಿದಿವೆ. ಮಹಾರಾಷ್ಟ್ರ ಮತ್ತು ಕೇರಳ ಎರಡರಲ್ಲೂ ಹಿಂದಿನ ದಿನಕ್ಕಿಂತ ಸಕ್ರಿಯ ಸೋಂಕು ಹೆಚ್ಚಾಗಿದೆ. ಚೇತರಿಕೆ ದರ ಶೇಕಡಾ 97.20 ಕ್ಕೆ ಏರಿದೆ.
ಕಳೆದ ಎರಡು ತಿಂಗಳುಗಳಲ್ಲಿ ಕೊವಿಡ್ ಪ್ರಕರಣಗಳು ಇಳಿಮುಖವಾಗಲು ಪ್ರಾರಂಭಿಸಿದ ನಂತರ ಹಲವಾರು ರಾಜ್ಯಗಳು ಪ್ರಯಾಣ ಮತ್ತು ಸಾರ್ವಜನಿಕ ಚಟುವಟಿಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸಿವೆ. ಆದಾಗ್ಯೂ, ಜನಸಂದಣಿಯ ವಿರುದ್ಧ ಕೇಂದ್ರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
ಗೃಹ ಸಚಿವಾಲಯವು ಶನಿವಾರ ಎಂಟು ರಾಜ್ಯಗಳೊಂದಿಗೆ ಸಭೆ ನಡೆಸಿದ್ದು“ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಇತರವುಗಳಿಗೆ ಸಂಬಂಧಿಸಿದಂತೆ ಕೊವಿಡ್ ಪ್ರೊಟೊಕಾಲ್ ಪಾಲಿಸುವಂತೆ ಜನರಿಗೆ ಮನವಿ ಮಾಡಿದೆ.
ಭಾನುವಾರದ ಪ್ರಕರಣದ ಅಂಕಿ ಅಂಶಗಳು ಶನಿವಾರದ ಪ್ರಮಾಣಕ್ಕಿಂತ 1,260 ಕಡಿಮೆ ಆಗಿಗೆ . ಮತ್ತೊಂದೆಡೆ, ಭಾನುವಾರ ಸಾವಿನ ಸಂಖ್ಯೆಯೂ ಶನಿವಾರದಕ್ಕಿಂತ 311 ಕಡಿಮೆ ಆಗಿದೆ.
COVID19 | India reports 41,506 new cases, 895 deaths and 41,526 recoveries today, as per Union Health Ministry
Total active cases: 4,54,118 Total discharges: 2,99,75,064 Death toll: 4,08,040
Total Vaccination : 37,60,32,586 pic.twitter.com/Ccur2VhC4T
— ANI (@ANI) July 11, 2021
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ ಕೊವಿಡ್ -19 ಪತ್ತೆಗಾಗಿ ಒಟ್ಟು 430,885,470 ಮಾದರಿಗಳನ್ನು ಪರೀಕ್ಷಿಸಲಾಗಿದೆ,. ಅದರಲ್ಲಿ 1,843,500 ಪರೀಕ್ಷೆಗಳನ್ನು ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಜನರು ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಅನುಸರಿಸದೆ ಗಿರಿಧಾಮಗಳು ಮತ್ತು ಇತರ ಪ್ರವಾಸಿ ತಾಣಗಳಿಗೆ ಸೇರುತ್ತಿರುವುದರಿಂದ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಶನಿವಾರ ಸಾಂಕ್ರಾಮಿಕ ರೋಗದ ಎರಡನೇ ಅಲೆ ಇನ್ನೂ ಮುಗಿದಿಲ್ಲ ಮತ್ತು ರಾಜ್ಯಗಳು ಮತ್ತು ಕೇಂದ್ರೀಯ ಪ್ರದೇಶಗಳು (ಯುಟಿಗಳು) ಮಾಸ್ಕ್ ಧರಿಸುವುದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶನಿವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಭಲ್ಲಾ, ಗಿರಿಧಾಮಗಳು ಮತ್ತು ಪ್ರವಾಸಿ ತಾಣಗಳಲ್ಲಿ ಕೊವಿಡ್ -19 ಸೂಕ್ತ ನಡವಳಿಕೆಯನ್ನು ನಿರ್ಲಕ್ಷಿಸಿರುವುದರ ವಿರುದ್ಧ ಎಚ್ಚರಿಕೆಯ ಸೂಚನೆ ನೀಡಿದರು. ಸಭೆಯಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಟ್ ಐದು ಪಟ್ಟು ತಂತ್ರವನ್ನು ಅನುಸರಿಸಲು ತಿಳಿಸಲಾಯಿತು,.ಇದನ್ನು ಜೂನ್ 29 ರಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಏತನ್ಮಧ್ಯೆ, ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ 37.57 ಕೋಟಿ ಮೀರಿದೆ ಮತ್ತು ಶನಿವಾರ ಸಂಜೆ 7 ಗಂಟೆಯವರೆಗೆ 34 ಲಕ್ಷ ಡೋಸ್ ಗಳನ್ನು ನೀಡಲಾಯಿತು. ಒಟ್ಟು ಪ್ರಮಾಣದಲ್ಲಿ 302,928,648 ಮಂದಿ ಮೊದಲ ಡೋಸ್ ಪಡೆದಿದ್ದಾರೆ ಮತ್ತು ಉಳಿದ 72,781,525 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Divya Spandana: ಭಾರತದ ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದ ನಟಿ ರಮ್ಯಾ
(India reportes 41,506 new coronavirus cases 895 deaths in the last 24 hours active cases declines)
Published On - 10:41 am, Sun, 11 July 21




