AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3 ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳ ಸೇರ್ಪಡೆ

ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ 3 ಸ್ವದೇಶಿ ಯುದ್ಧನೌಕೆಗಳಾದ ಐಎನ್‌ಎಸ್ ದುನಾಗಿರಿ, ಐಎನ್‌ಎಸ್ ಸಂಶೋಖಾಕ್ ಮತ್ತು ಐಎನ್‌ಎಸ್ ಅಗ್ರೇಗಳನ್ನು ಭಾರತೀಯ ನೌಕಾಪಡೆಗೆ ಸಮರ್ಪಿಸಿದ್ದಾರೆ. 'ಆತ್ಮನಿರ್ಭರ ಭಾರತ' ಯೋಜನೆಯಡಿ ನಿರ್ಮಿಸಿದ ಈ ನೌಕೆಗಳು ಭಾರತದ ರಕ್ಷಣಾ ಶಕ್ತಿಯನ್ನು ಹೆಚ್ಚಿಸುತ್ತವೆ. ಸಮುದ್ರದಲ್ಲಿ ಶತ್ರುಗಳಿಗೆ ಬಲವಾದ ಪ್ರತಿಕ್ರಿಯೆ ನೀಡಲು ಹಾಗೂ ಕಡಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಸೇರ್ಪಡೆ ನಿರ್ಣಾಯಕವಾಗಿದೆ.

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ:  3 ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳ ಸೇರ್ಪಡೆ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Jun 21, 2026 | 10:38 AM

Share

ಕೋಲ್ಕತ್ತಾ, ಜೂನ್ 21: ಭಾರತದ ರಕ್ಷಣಾ ವಲಯ ಇಂದು ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾನುವಾರ ಕೋಲ್ಕತ್ತಾದಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಡಿ ನಿರ್ಮಿಸಲಾದ ಮೂರು ಸುಧಾರಿತ ಯುದ್ಧನೌಕೆಗಳಾದ ಐಎನ್‌ಎಸ್ ದುನಾಗಿರಿ, ಐಎನ್‌ಎಸ್ ಸಂಶೋಖಾಕ್ ಮತ್ತು ಐಎನ್‌ಎಸ್ ಅಗ್ರೇಗಳನ್ನು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸಮರ್ಪಿಸಿದ್ದಾರೆ.

ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಕೋಲ್ಕತ್ತಾದ ‘ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್’ (GRSE) ಸಂಸ್ಥೆಯು ಈ ಮೂರು ದೈತ್ಯ ನೌಕೆಗಳನ್ನು ನಿರ್ಮಿಸಿದೆ. ಇವುಗಳ ಸೇರ್ಪಡೆಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಶತ್ರು ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವಂತಹ ಬಲ ಭಾರತಕ್ಕೆ ಸಿಕ್ಕಂತಾಗಿದೆ.

ಐಎನ್ಎಸ್ ದುನಾಗಿರಿ (INS Dunagiri) – ರಹಸ್ಯ ಕ್ಷಿಪಣಿ ಯುದ್ಧನೌಕೆ ಕ್ಷಿಪಣಿ ದಾಳಿ ಸಾಮರ್ಥ್ಯ: ಇದು ಅತ್ಯಾಧುನಿಕ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆಯಾಗಿದ್ದು, ಸಮುದ್ರದಲ್ಲಿ ಚಲಿಸುವಾಗಲೇ ಶತ್ರುಗಳ ಮೇಲೆ ಅಟ್ಯಾಕ್ ಮಾಡಬಲ್ಲದು.

ಮತ್ತಷ್ಟು ಓದಿ: ಅಂತಾರಾಷ್ಟ್ರೀಯ ಯೋಗ ದಿನ :30 ಸಾವಿರ ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ

ಬ್ರಹ್ಮೋಸ್ ಶಕ್ತಿ: ಈ ನೌಕೆಯಲ್ಲಿ ಜಗತ್ತಿನ ಅತ್ಯಂತ ವೇಗದ ‘ಬ್ರಹ್ಮೋಸ್’ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು ಮತ್ತು ‘ಬರಾಕ್-8’ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಏಕಕಾಲದಲ್ಲಿ ವಾಯು ರಕ್ಷಣೆ ಮತ್ತು ಮೇಲ್ಮೈ ಯುದ್ಧಗಳನ್ನು ಮಾಡಬಲ್ಲದು.

ಐಎನ್ಎಸ್ ಅಗ್ರೇ– ಜಲಾಂತರ್ಗಾಮಿಗಳ ಶಿಕಾರಿ ಆಳವಿಲ್ಲದ ಕರಾವಳಿ ತೀರದಲ್ಲಿ ಅಡಗಿಕೊಳ್ಳುವ ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸಲು ಇದನ್ನು ನಿರ್ಮಿಸಲಾಗಿದೆ.

ಇದು ಸುಧಾರಿತ ಸೋನಾರ್ ವ್ಯವಸ್ಥೆ, ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳು, ಟಾರ್ಪಿಡೊಗಳು ಮತ್ತು 30 ಎಂಎಂ ಭಾರಿ ನೌಕಾ ಬಂದೂಕುಗಳನ್ನು ಹೊಂದಿದೆ. ಅಲ್ಲದೆ ಕಡಲಿನಲ್ಲಿ ಮೈನ್‌ಗಳನ್ನು (ಬಾಂಬ್) ಹಾರಿಸುವ ಸಾಮರ್ಥ್ಯವೂ ಇದಕ್ಕಿದೆ.

ವಿಡಿಯೋ

ಐಎನ್ಎಸ್ ಸಂಶೋಖಾಕ್ (INS Samshokhak) – ಸಮುದ್ರದ ಹದ್ದಿನ ಕಣ್ಣು ಇದು ಸಮುದ್ರದಾಳದ ತಳವನ್ನು ಸಂಪೂರ್ಣವಾಗಿ ನಕ್ಷೆ ಮಾಡುವ ಮತ್ತು ಸುರಕ್ಷಿತ ಸಂಚರಣೆ ಮಾರ್ಗಗಳನ್ನು ಗುರುತಿಸುವ ಅತ್ಯಾಧುನಿಕ ಸಮೀಕ್ಷಾ ನೌಕೆಯಾಗಿದೆ. ಯುದ್ಧದ ಹೊರತಾಗಿ ಸಮುದ್ರದಲ್ಲಿ ಯಾವುದೇ ಪ್ರಕೃತಿ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದರೆ, ಈ ನೌಕೆಯು ಬೃಹತ್ ‘ತೇಲುವ ವೈದ್ಯಕೀಯ ಕೇಂದ್ರವಾಗಿ’ ಬದಲಾಗಿ ಜೀವ ಉಳಿಸುವ ಕಾರ್ಯಾಚರಣೆ ನಡೆಸಬಲ್ಲದು.

ಈ ಮೂರು ನೌಕೆಗಳಲ್ಲೇ ಅತ್ಯಂತ ಸುಧಾರಿತ ಶಸ್ತ್ರಾಸ್ತ್ರ ಹಾಗೂ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಸಂಗ್ರಹಿಸಿಡಲು ಬೃಹತ್ ಗೋದಾಮುಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಭಾರತೀಯ ಸೇನೆಯು ವಿದೇಶಿ ಆಮದಿನ ಮೇಲಿನ ಅವಲಂಬನೆ ಮುರಿದು, ಕಡಲ ಗಡಿಯಲ್ಲಿ ಸ್ವಯಂ ಶಕ್ತಿಯೊಂದಿಗೆ ಶತ್ರುಗಳ ವಿರುದ್ಧ ಪ್ರಬಲ ಪ್ರತಿದಾಳಿ ನಡೆಸಲು ಸಂಪೂರ್ಣ ಸಜ್ಜಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us