AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗ ಒಂದು ದಿನದ ಕಾರ್ಯಕ್ರಮ ಆಗುವುದು ಬೇಡ, 365 ದಿನ ನಿಮ್ಮ ಜೀವನದ ಭಾಗವಾಗಿರಲಿ: ಮೋದಿ

International Yoga Day 2026: ಯೋಗ ಕೇವಲ ಒಂದು ದಿನದ ಕಾರ್ಯಕ್ರಮವಾಗುವುದು ಬೇಡ, 362 ದಿನವೂ ನಿಮ್ಮ ಜೀವನದ ಅಂಗವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಯೋಗವನ್ನು ಅಳವಡಿಸಿಕೊಂಡರೆ ಸಮಾಜ ಸ್ವಸ್ಥವಾಗಿರುತ್ತೆ, ರಾಷ್ಟ್ರವು ಕೂಡ ಅಧಿಕ ಸಕ್ಷಮ ಹಾಗೂ ಸಮೃದ್ಧವಾಗಿರುತ್ತದೆ. 100 ದಿನಗಳ ಆನ್​ಲೈನ್ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, 130 ದೇಶಗಳ 30 ಲಕ್ಷಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯೋಗ ಒಂದು ದಿನದ ಕಾರ್ಯಕ್ರಮ ಆಗುವುದು ಬೇಡ, 365 ದಿನ ನಿಮ್ಮ ಜೀವನದ ಭಾಗವಾಗಿರಲಿ: ಮೋದಿ
ನರೇಂದ್ರ ಮೋದಿ Image Credit source: ANI
ನಯನಾ ರಾಜೀವ್
|

Updated on:Jun 21, 2026 | 8:02 AM

Share

ಕೋಲ್ಕತ್ತಾ, ಜೂನ್ 21: ಯೋಗ(Yoga) ಕೇವಲ ಒಂದು ದಿನದ ಕಾರ್ಯಕ್ರಮವಾಗುವುದು ಬೇಡ, 362 ದಿನವೂ ನಿಮ್ಮ ಜೀವನದ ಅಂಗವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಯೋಗವನ್ನು ಅಳವಡಿಸಿಕೊಂಡರೆ ಸಮಾಜ ಸ್ವಸ್ಥವಾಗಿರುತ್ತೆ, ರಾಷ್ಟ್ರವು ಕೂಡ ಅಧಿಕ ಸಕ್ಷಮ ಹಾಗೂ ಸಮೃದ್ಧವಾಗಿರುತ್ತದೆ. 100 ದಿನಗಳ ಆನ್​ಲೈನ್ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, 130 ದೇಶಗಳ 30 ಲಕ್ಷಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ತಾಣಗಳು ಮತ್ತು ಯೋಗ ಸಂಪ್ರದಾಯಗಳನ್ನು ಸಂಯೋಜಿಸುವ ಸಲುವಾಗಿ ಸಂಸ್ಕೃತಿ ಸಚಿವಾಲಯವು ದೇಶಾದ್ಯಂತ 100 ಪ್ರತಿಷ್ಠಿತ ಸ್ಥಳಗಳಲ್ಲಿ ವಿಶೇಷ ಯೋಗ ಆಚರಣೆಗಳನ್ನು ಆಯೋಜಿಸುತ್ತಿದೆ. ಈ ಉಪಕ್ರಮದಡಿಯಲ್ಲಿ, ನವದೆಹಲಿಯ ಕೆಂಪು ಕೋಟೆ, ಉತ್ತರಾಖಂಡದ ಹರಿದ್ವಾರ, ಒಡಿಶಾದ ಕೊನಾರ್ಕ್, ಕರ್ನಾಟಕದ ಹಂಪಿ, ತಮಿಳುನಾಡಿನ ಮಹಾಬಲಿಪುರಂ, ಮಹಾರಾಷ್ಟ್ರದ ಮುಂಬೈ, ಬಿಹಾರದ ನಳಂದ, ಗುಜರಾತ್‌ನ ಅಹಮದಾಬಾದ್, ಉತ್ತರ ಪ್ರದೇಶದ ಸಾರನಾಥ್, ಲಡಾಖ್‌ನ ಲೇಹ್, ತೆಲಂಗಾಣದ ಹೈದರಾಬಾದ್ ಮತ್ತು ಅಸ್ಸಾಂನ ಸಿಲ್ಚಾರ್ ಸೇರಿದಂತೆ ಹನ್ನೆರಡು ಪ್ರತಿಷ್ಠಿತ ಸ್ಥಳಗಳಲ್ಲಿ ಪ್ರಮುಖ ಆಚರಣೆಗಳು ನಡೆಯಲಿವೆ.

ಯೋಗದ ಸಂಪ್ರದಾಯವನ್ನು ಜಗತ್ತಿಗೆ ಹರಡಿದ ಬಂಗಾಳದ ಸಂತರಾದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮತ್ತು ಲಾಹಿರಿ ಮಹಾಶಯರಂತಹ ಮಹಾನ್ ವ್ಯಕ್ತಿಗಳಿಗೆ ಪ್ರಧಾನಿ ಈ ವೇಳೆ ಗೌರವ ಸಲ್ಲಿಸಿದರು.

ಮತ್ತಷ್ಟು ಓದಿ: International Yoga Day 2026 : ಕೋಲ್ಕತ್ತಾದಲ್ಲಿ ನಮೋ ಯೋಗ!

ದೈನಂದಿನ ದಿನಚರಿಯಾಗಲಿ ಯೋಗ: ಯೋಗವನ್ನು ಕೇವಲ ವರ್ಷದ ಒಂದು ದಿನಕ್ಕೆ ಅಥವಾ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಬಾರದು. ನಾಗರಿಕರು ಯೋಗವನ್ನು ತಮ್ಮ ಮತ್ತು ತಮ್ಮ ಕುಟುಂಬದ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು. ನಿಯಮಿತ ಅಭ್ಯಾಸದಿಂದ ಮಾತ್ರ ಯೋಗದ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ ಎಂದು ಮೋದಿ ಒತ್ತಿ ಹೇಳಿದರು.

ವಯಸ್ಸಾದಂತೆ ಹೆಚ್ಚಾಗಲಿ ಚೈತನ್ಯ: ನಮ್ಮ ಗುರಿ ಹೇಗಿರಬೇಕೆಂದರೆ, ನಮಗೆ 20 ವರ್ಷ ಇದ್ದದ್ದಕ್ಕಿಂತ 40 ವರ್ಷ ವಯಸ್ಸಾದಾಗ ದೇಹ ಹೆಚ್ಚು ಸುಲಭವಾಗಿ ಬಾಗಬೇಕು . 30 ಕ್ಕಿಂತ 50 ನೇ ವಯಸ್ಸಿನಲ್ಲಿ ಹೆಚ್ಚು ಶಕ್ತಿಶಾಲಿಯಾಗಿರಬೇಕು. ಇಂದಿನ ಆಧುನಿಕ ಜೀವನಶೈಲಿ ಕಾಯಿಲೆಗಳ ವಿರುದ್ಧ ಹೋರಾಡಲು ಯೋಗ ನಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ಯೋಗ ಎಲ್ಲರನ್ನೂ ಒಂದುಗೂಡಿಸುತ್ತದೆ ದೇಶಾದ್ಯಂತ ಯೋಗದ ಅಲೆ: ಇಂದು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ, ಪೂರ್ವದಿಂದ ಪಶ್ಚಿಮ ಭಾರತದವರೆಗೆ ಇಡೀ ದೇಶವೇ ಯೋಗದ ಶಕ್ತಿಯಿಂದ ತುಂಬಿ ತುಳುಕುತ್ತಿದೆ. ಯೋಗವು ಗಡಿಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮೀರಿ ಪ್ರಪಂಚದಾದ್ಯಂತದ ಜನರನ್ನು ಪರಸ್ಪರ ಹತ್ತಿರ ತರುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು ಮತ್ತು ಜಗತ್ತಿನಾದ್ಯಂತ ಇರುವ ಯೋಗ ಪ್ರೇಮಿಗಳಿಗೆ ಶುಭಾಶಯನ್ನು ತಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:18 am, Sun, 21 June 26

Follow Us
ಇಂದು ಈ ರಾಶಿಯವರ ಹಣಕಾಸಿನ ತೊಂದರೆಗಳಿಗೆ ಪರಿಹಾರ
ಇಂದು ಈ ರಾಶಿಯವರ ಹಣಕಾಸಿನ ತೊಂದರೆಗಳಿಗೆ ಪರಿಹಾರ
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?