AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ ರೈಲು ಅಪಘಾತದಲ್ಲಿ 3 ರೈಲುಗಳಿಗೆ ಸಂಪೂರ್ಣ ಹಾನಿ: ಒಂದು ಹೊಸ ರೈಲು ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತೆ ಗೊತ್ತೇ?

ಭಾರತೀಯ ರೈಲ್ವೆಯನ್ನು ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಜಾಲ ಎಂದು ಕರೆಯಲಾಗುತ್ತದೆ. ಏಕೆಂದರೆ ದೇಶದ ಮೂಲೆ ಮೂಲೆಗೂ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಭಾರತದಲ್ಲಿ ಓಡುತ್ತಿರುವ ರೈಲುಗಳ ಸಂಖ್ಯೆ 13ವರೆ ಸಾವಿರಕ್ಕೂ ಹೆಚ್ಚಿದೆ.

ಒಡಿಶಾ ರೈಲು ಅಪಘಾತದಲ್ಲಿ 3 ರೈಲುಗಳಿಗೆ ಸಂಪೂರ್ಣ ಹಾನಿ: ಒಂದು ಹೊಸ ರೈಲು ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತೆ ಗೊತ್ತೇ?
ರೈಲು
ನಯನಾ ರಾಜೀವ್
|

Updated on: Jun 09, 2023 | 12:46 PM

Share

ಭಾರತೀಯ ರೈಲ್ವೆಯನ್ನು ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಜಾಲ ಎಂದು ಕರೆಯಲಾಗುತ್ತದೆ. ಏಕೆಂದರೆ ದೇಶದ ಮೂಲೆ ಮೂಲೆಗೂ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಭಾರತದಲ್ಲಿ ಓಡುತ್ತಿರುವ ರೈಲುಗಳ ಸಂಖ್ಯೆ 13ವರೆ ಸಾವಿರಕ್ಕೂ ಹೆಚ್ಚಿದೆ. ಟಿಕೆಟ್​ ಬೆಲೆ ಕಡಿಮೆ ಹಾಗೂ ಆರಾಮದಾಯಕ ಕೂಡ ಹೀಗಾಗಿ ಇಂದಿಗೂ, ಹೆಚ್ಚಿನ ಜನರು ಒಡಿಶಾದ ಬಾಲಸೋರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ಸ್ಥಳವನ್ನು ನೀವೆಲ್ಲರೂ ನೋಡಿರಬಹುದು. ಈ ದುರ್ಘಟನೆಯಲ್ಲಿ 288 ಜನರು ಸಾವನ್ನಪ್ಪಿದ್ದಲ್ಲದೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ ಭಾರತೀಯ ರೈಲ್ವೆಯ 3 ರೈಲುಗಳೂ ಧ್ವಂಸಗೊಂಡಿವೆ.

ರೈಲು ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತದೆ ಗೊತ್ತಾ? ರೈಲಿನ ಇಂಜಿನ್‌ನಿಂದ ರೈಲಿನ ಬೋಗಿಗಳವರೆಗಿನ ಸಂಪೂರ್ಣ ವೆಚ್ಚದ ಬಗ್ಗೆ ತಿಳಿಸಲಿದ್ದೇವೆ.

ರೈಲು ಸಾಮಾನ್ಯ, ಸ್ಲೀಪರ್ ಮತ್ತು ಎಸಿ ಕೋಚ್‌ಗಳನ್ನು ಹೊಂದಿದೆ ಎಂದು ನೀವು ತಿಳಿದಿರಲೇಬೇಕು. ಒಂದು ಕೋಚ್‌ನ ಬೆಲೆ 2 ಕೋಟಿ ರೂ. ಮಾಧ್ಯಮಗಳ ವರದಿಯನ್ನು ನಂಬುವುದಾದರೆ, ಸ್ಲೀಪರ್ ಕೋಚ್ ತಯಾರಿಕೆಯ ವೆಚ್ಚ 1.5 ಕೋಟಿ ರೂ. ಜನರಲ್ ಕೋಚ್ ಸಿದ್ಧಪಡಿಸಲು ಒಂದು ಕೋಟಿ ರೂ. ಮತ್ತೊಂದೆಡೆ, ನಾವು ಎಸಿ ಕೋಚ್ ಬಗ್ಗೆ ಮಾತನಾಡಿದರೆ, ಒಂದು ಎಸಿ ಕೋಚ್ ಅನ್ನು ಸಿದ್ಧಪಡಿಸುವ ಒಟ್ಟು ವೆಚ್ಚ 2 ಕೋಟಿ ರೂ.ಗಳು ವೆಚ್ಚವಾಗಲಿದೆ. ಒಟ್ಟಾರೆಯಾಗಿ, 24 ಬೋಗಿಗಳ ರೈಲು ತಯಾರಿಸಲು 48 ಕೋಟಿ ವೆಚ್ಚವಾಗುತ್ತದೆ. ಕೇವಲ ಒಂದು ಎಂಜಿನ್‌ನ ಬೆಲೆ 18-20 ಕೋಟಿ ರೂ. ಇರುತ್ತದೆ.

ಮತ್ತಷ್ಟು ಓದಿ:Breaking News Today Highlights: ಒಡಿಶಾ ರೈಲು ದುರಂತ: ಬೋಗಿಗಳ ತೆರವು ಕಾರ್ಯಾಚರಣೆಗೆ ಮುಂದಾದ ರೈಲ್ವೆ ಇಲಾಖೆ ಸಿಬ್ಬಂದಿ

ವಂದೇ ಭಾರತ್ ರೈಲು ರೈಲಿನಲ್ಲಿರುವ ಸ್ಲೀಪರ್ ಕೋಚ್‌ಗಳ ಸಂಖ್ಯೆ 10 ಮತ್ತು ಎಸಿ ಕೋಚ್‌ಗಳ ಸಂಖ್ಯೆ 8 ಆಗಿದ್ದರೆ ಮತ್ತು ಅದರೊಂದಿಗೆ 2 ಸಾಮಾನ್ಯ ಕೋಚ್‌ಗಳನ್ನು ಸಹ ತಯಾರಿಸಿದರೆ, ಈ ರೈಲಿನ ಒಟ್ಟು ವೆಚ್ಚ 50 ಕೋಟಿ ರೂ. ಮತ್ತೊಂದೆಡೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ಮಾತನಾಡುವುದಾದರೆ, ಈ ರೈಲನ್ನು ತಯಾರಿಸಲು 110 ರಿಂದ 120 ಕೋಟಿ ವೆಚ್ಚವಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್