ಭಾರತದ ಮೊದಲ ‘ಡ್ರೋನ್ ಪೊಲೀಸ್ ಘಟಕ’ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ತಮಿಳುನಾಡು

ಎಲ್ಲಾ ಡ್ರೋನ್ ಘಟಕಗಳು ಬಿಲ್ಟ್ ಇನ್ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಹೊಂದಿದ್ದು, ನೆಲದ ನಿಲ್ದಾಣದಿಂದ 5-10 ಕಿಮೀ ದೂರದವರೆಗೆ ಕಾರ್ಯನಿರ್ವಹಿಸಬಹುದು

ಭಾರತದ ಮೊದಲ 'ಡ್ರೋನ್ ಪೊಲೀಸ್ ಘಟಕ' ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ತಮಿಳುನಾಡು
ಚೆನ್ನೈ ಡ್ರೋನ್ ಪೊಲೀಸ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 29, 2023 | 3:42 PM

ಭಾರತದಲ್ಲಿ ಮೊದಲ ಬಾರಿಗೆ ತಮಿಳುನಾಡು (Tamil Nadu) ಪೊಲೀಸರು  ‘ಚೆನ್ನೈ ಡ್ರೋನ್ ಪೊಲೀಸ್ ಘಟಕ’ವನ್ನು (Chennai drone police unit) ಪ್ರಾರಂಭಿಸಿದ್ದು, ಇದರ ವೆಚ್ಚ 3.6 ಕೋಟಿ ರೂಪಾಯಿ ಆಗಿದೆ. ಪೊಲೀಸ್ ಇಲಾಖೆಗೆ ಹೊಸ ಡ್ರೋನ್ ಘಟಕವನ್ನು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿ ಸೈಲೇಂದ್ರ ಬಾಬು ಮತ್ತು ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು ಗುರುವಾರ ಚೆನ್ನೈನ ಅಡ್ಯಾರ್‌ನ ಬೆಸೆಂಟ್ ನಗರ ಅವೆನ್ಯೂದಲ್ಲಿ ಉದ್ಘಾಟಿಸಿದರು. ಮೂರು ವಿಭಾಗಗಳ ಅಡಿಯಲ್ಲಿ 9 ಡ್ರೋನ್‌ಗಳು ಘಟಕದ ಭಾಗವಾಗಲಿವೆ.

(i) ತ್ವರಿತ ಪ್ರತಿಕ್ರಿಯೆ ಕಣ್ಗಾವಲು ಡ್ರೋನ್ಸ್- 6

(ii) ಹೆವಿ ಲಿಫ್ಟ್ ಮಲ್ಟಿರೋಟರ್ ಡ್ರೋನ್ – 1

(iii) ಲಾಂಗ್ ರೇಂಜ್ ಸರ್ವೆ ವಿಂಗ್ ಪ್ಲೇನ್ – 2

ಎಲ್ಲಾ ಡ್ರೋನ್ ಘಟಕಗಳು ಬಿಲ್ಟ್ ಇನ್ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಹೊಂದಿದ್ದು, ನೆಲದ ನಿಲ್ದಾಣದಿಂದ 5-10 ಕಿಮೀ ದೂರದವರೆಗೆ ಕಾರ್ಯನಿರ್ವಹಿಸಬಹುದು. ಡ್ರೋನ್‌ಗಳು ಹಬ್ಬ ಅಥವಾ ಕೂಟದ ಸಮಯದಲ್ಲಿ ಜನಸಂದಣಿಯನ್ನು ನಿಖರವಾಗಿ ಅಂದಾಜು ಮಾಡಬಹುದು, ಜನಸಂದಣಿ ನಿಯಂತ್ರಣ ತಂತ್ರಗಳನ್ನು ಸರಿಯಾಗಿ ಯೋಜಿಸಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ. ಡ್ರೋನ್‌ಗಳು ಎಎನ್‌ಪಿಆರ್ ಕ್ಯಾಮೆರಾಗಳನ್ನು ಹೊಂದಿದ್ದು, ವಾಹನಗಳ ನೋಂದಣಿ ಡೇಟಾಬೇಸ್ ಮತ್ತು ಶಂಕಿತರನ್ನು ಪತ್ತೆಹಚ್ಚಲು, ಕದ್ದ ವಾಹನಗಳನ್ನು ನೈಜ ಸಮಯದಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Delhi: ದೆಹಲಿಯ ಔರಂಗಜೇಬ್ ರಸ್ತೆಯ​ನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ

ಥರ್ಮಲ್ ಕ್ಯಾಮೆರಾಗಳನ್ನು ಹೊಂದಿರುವ ಹೆವಿ ಲಿಫ್ಟ್ ಕ್ಯಾಮೆರಾಗಳು ರಾತ್ರಿಯ ಸಮಯದಲ್ಲಿಯೂ ಲೈಫ್ ಜಾಕೆಟ್‌ಗಳನ್ನು ನಿಯೋಜಿಸುವ ಮೂಲಕ ಸಮುದ್ರದ ಅಲೆಗಳಲ್ಲಿ ಸಿಲುಕಿದ ಜನರನ್ನು ಪತ್ತೆ ಹಚ್ಚಿ ರಕ್ಷಿಸಬಹುದು.

ಚೆನ್ನೈಗೆ ಡ್ರೋನ್ ಪೊಲೀಸ್ ಘಟಕ ರಚನೆಯಾದ ನಂತರ, ಕೊಯಮತ್ತೂರು ಮತ್ತು ಮಧುರೈ ನಗರ ಪೊಲೀಸ್ ಘಟಕಗಳಿಂದ ಇದೇ ರೀತಿಯ ಬೇಡಿಕೆಗಳು ಹುಟ್ಟಿಕೊಂಡಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ