AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನ ವಿಶ್ವಾಸ ವಿಧೇಯಕ 2026: ಸಣ್ಣ ತಪ್ಪುಗಳಿಗೆ ಶಿಕ್ಷೆಯಿಲ್ಲ, ದಂಡವಷ್ಟೇ

India's Jan Vishwas Amendment Bill 2026: ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026 ಸಣ್ಣಪುಟ್ಟ ತಾಂತ್ರಿಕ ಪ್ರಮಾದಗಳಿಗೆ ಜೈಲು ಶಿಕ್ಷೆ ಬದಲು ದಂಡ ವಿಧಿಸಿ, ಉದ್ಯಮಸ್ನೇಹಿ ವಾತಾವರಣ ನಿರ್ಮಿಸುತ್ತದೆ. 80 ಕೇಂದ್ರೀಯ ಕಾನೂನುಗಳ 784 ನಿಬಂಧನೆಗಳನ್ನು ಸುಧಾರಿಸಿದ್ದು, 700ಕ್ಕೂ ಹೆಚ್ಚು ಅಪರಾಧಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಿದೆ. ಇದು 'ಮೇಕ್ ಇನ್ ಇಂಡಿಯಾ' ಮತ್ತು 'ಸ್ಟಾರ್ಟಪ್ ಇಂಡಿಯಾ'ಗೆ ಉತ್ತೇಜನ ನೀಡಿ, ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ.

ಜನ ವಿಶ್ವಾಸ ವಿಧೇಯಕ 2026: ಸಣ್ಣ ತಪ್ಪುಗಳಿಗೆ ಶಿಕ್ಷೆಯಿಲ್ಲ, ದಂಡವಷ್ಟೇ
ಸಂಸತ್ತುImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 05, 2026 | 8:00 PM

Share

ಲೋಕಸಭೆಯಲ್ಲಿ 2026ರ ಮಾರ್ಚ್‌ 27ರಂದು ಮಂಡನೆಯಾದ ಮಹತ್ವದ ‘ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026’ (Jan Vishwas Amendment Bill) ಏಪ್ರಿಲ್‌ 1ರಂದು ಅಂಗೀಕಾರಗೊಂಡಿತು. ಮರುದಿನವೇ ರಾಜ್ಯಸಭೆಯಲ್ಲೂ ಇದಕ್ಕೆ ಅನುಮೋದನೆ ದೊರೆಯಿತು. ಸಣ್ಣಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ಕೇವಲ ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ವಾತಾವರಣ (Ease of Doing Business) ನಿರ್ಮಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಇದು ಏಕರೂಪದ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ.

24 ಸದಸ್ಯರ ಆಯ್ಕೆ ಸಮಿತಿಯು 49 ಸಭೆಗಳನ್ನು ನಡೆಸಿ, ನಾನಾ ಸಚಿವಾಲಯಗಳು, ತಜ್ಞರು ಹಾಗೂ ಉದ್ಯಮ ವಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ವಿಧೇಯಕಕ್ಕೆ ಅಂತಿಮ ರೂಪ ನೀಡಲಾಗಿದೆ. ಈ ಸುಧಾರಣಾ ವಿಧೇಯಕವು 80 ಕೇಂದ್ರೀಯ ಕಾನೂನುಗಳ 784 ನಿಬಂಧನೆಗಳನ್ನು ಬದಲಾಯಿಸಿದೆ. 42 ಕೇಂದ್ರೀಯ ಕಾನೂನುಗಳಲ್ಲಿದ್ದ 183 ಕ್ರಿಮಿನಲ್‌ ದಂಡನೆಗಳನ್ನು ರದ್ದುಪಡಿಸಲಾಗಿದೆ. ಒಟ್ಟಾರೆ 717 ನಿಬಂಧನೆಗಳನ್ನು ಕ್ರಿಮಿನಲ್‌ ದಂಡನೆಯಿಂದ ಮುಕ್ತಗೊಳಿಸಲಾಗಿದ್ದು, ಉಳಿದ 67 ನಿಬಂಧನೆಗಳನ್ನು ಜನಜೀವನವನ್ನು ಸುಗಮಗೊಳಿಸುವ ಗುರಿಯೊಂದಿಗೆ ಮಾರ್ಪಡಿಸಲಾಗಿದೆ.

ವಿವಿಧ ವಲಯಗಳಲ್ಲಿನ ಪ್ರಮುಖ ಸುಧಾರಣೆಗಳು

ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ (1940): ರಿಟರ್ನ್‌ ಸಲ್ಲಿಸದಿರುವುದು, ದಾಖಲೆಗಳನ್ನು ಇಟ್ಟುಕೊಳ್ಳದಿರುವುದು ಮುಂತಾದ ಸಣ್ಣಪುಟ್ಟ ಪ್ರಮಾದಗಳನ್ನು ಇನ್ನು ಮುಂದೆ ಕ್ರಿಮಿನಲ್‌ ಅಪರಾಧಗಳೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಔಷಧ ತಯಾರಕ ಕಂಪನಿಗಳ ವಿರುದ್ಧದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

ಇದನ್ನೂ ಓದಿ: ಇರಾನ್​ನ ಅಣು ವಿದ್ಯುತ್ ಸ್ಥಾವರಕ್ಕೆ ಹಾನಿ; ವಿಕಿರಣ ಸೋರಿಕೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಸರ್ವನಾಶ?

ಮೋಟಾರು ವಾಹನಗಳ ಕಾಯಿದೆ (1988): ಸಣ್ಣ ಉಲ್ಲಂಘನೆಗಳು ಮತ್ತು ಗಂಭೀರ ಅಪರಾಧಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲಾಗಿದೆ. ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ಬದಲು ಹಣಕಾಸಿನ ದಂಡ ವಿಧಿಸಲಾಗುತ್ತದೆ. ಆದರೆ, ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ಕಲ್ಯಾಣಕ್ಕೆ ಧಕ್ಕೆಯಾಗಬಲ್ಲ ಅಪರಾಧಗಳಿಗೆ ಕ್ರಿಮಿನಲ್‌ ದಂಡನೆ ಮುಂದುವರಿಯಲಿದೆ. ಇದು ರಾಜ್ಯವ್ಯಾಪಿ ನೋಂದಣಿ (Registration) ಪ್ರಕ್ರಿಯೆಯನ್ನೂ ಸುಗಮಗೊಳಿಸಿದೆ.

ಕಾನೂನು ಮಾಪನ ಕಾಯಿದೆ: ಪ್ಯಾಕೇಜಿಂಗ್‌ ಅಥವಾ ಲೇಬಲಿಂಗ್‌ನಲ್ಲಿನ ಸಣ್ಣ ತಪ್ಪುಗಳನ್ನು ಕ್ರಿಮಿನಲ್‌ ಅಪರಾಧಗಳಿಂದ ಮುಕ್ತಗೊಳಿಸಲಾಗಿದೆ. ಈ ಹಿಂದೆ ಇಂತಹ ತಪ್ಪುಗಳಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಇರುತ್ತಿತ್ತು.

ಮೂಲಸೌಕರ್ಯ ಮತ್ತು ಇತರೆ ಕಾಯ್ದೆಗಳು: ದಿಲ್ಲಿ ಅಭಿವೃದ್ಧಿ ಕಾಯಿದೆ (1957), ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ ಕಾಯಿದೆ (1994) ಅಡಿಯಲ್ಲಿನ ಸಣ್ಣಪುಟ್ಟ ನಾಗರಿಕ ಉಲ್ಲಂಘನೆಗಳಿಗೆ ಜೈಲು ಶಿಕ್ಷೆಯನ್ನು ರದ್ದುಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಯಿದೆ (1956)ಯನ್ನು ಸುಧಾರಿಸಲಾಗಿದ್ದು, ಲಾಜಿಸ್ಟಿಕ್ಸ್‌ ವಲಯದಲ್ಲಿ ದಂಡಗಳನ್ನು ಸರಳಗೊಳಿಸಲಾಗಿದೆ.

ಉದ್ಯಮಶೀಲತೆಗೆ ಉತ್ತೇಜನ ಮತ್ತು ನ್ಯಾಯಾಲಯಗಳಿಗೆ ರಿಲೀಫ್

ಜನ ವಿಶ್ವಾಸ ವಿಧೇಯಕವು ‘ಮೇಕ್‌ ಇನ್‌ ಇಂಡಿಯಾ’ ಮತ್ತು ‘ಸ್ಟಾರ್ಟಪ್‌ ಇಂಡಿಯಾ’ ಅಭಿಯಾನಗಳಿಗೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ. ಭಾರತದಲ್ಲಿರುವ 2.12 ಲಕ್ಷ ಡಿಪಿಐಐಟಿ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳಿಗೆ ಮುಂದಿನ ಹಂತದ ಬೆಳವಣಿಗೆಗೆ ಇದು ವರದಾನವಾಗಲಿದೆ. ಸುದೀರ್ಘ ಕಾನೂನು ಹೋರಾಟಗಳನ್ನು ಎದುರಿಸುವ ಬದಲು, ಸಣ್ಣಪುಟ್ಟ ಪ್ರಮಾದಗಳನ್ನು ತಾವೇ ಸರಿಪಡಿಸಿಕೊಳ್ಳಲು ಉದ್ಯಮಿಗಳಿಗೆ ಅವಕಾಶ ಸಿಗಲಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿದ್ದ ಸಂಕೀರ್ಣ ಲೈಸೆನ್ಸ್‌-ಕೋಟಾ ವ್ಯವಸ್ಥೆ ಹಾಗೂ 2012ರ ಪೂರ್ವಾನ್ವಯ ತೆರಿಗೆ (Retrospective tax) ತಿದ್ದುಪಡಿಯಿಂದಾಗಿ ಜಾಗತಿಕ ಹೂಡಿಕೆದಾರರಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಿತ್ತು. ಆದರೆ, ಕಳೆದೊಂದು ದಶಕದಲ್ಲಿ ಮೋದಿ ಸರ್ಕಾರವು ಕಾನೂನುಗಳನ್ನು ಸರಳಗೊಳಿಸುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಳಿಸಿದೆ. ಇದರ ಪರಿಣಾಮವಾಗಿ ಭಾರತವು ವಿಶ್ವಬ್ಯಾಂಕ್‌ನ “ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌” ರ‍್ಯಾಂಕಿಂಗ್‌ನಲ್ಲಿ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದ್ದು, 2025-26ರಲ್ಲಿ $790.86 ಶತಕೋಟಿ ಡಾಲರ್‌ ರಫ್ತು ವಹಿವಾಟು ನಡೆಸಿದೆ.

ಈ ವಿಧೇಯಕವು 700ಕ್ಕೂ ಹೆಚ್ಚು ಸಣ್ಣಪುಟ್ಟ ಕ್ರಿಮಿನಲ್‌ ಅಪರಾಧಗಳನ್ನು ರದ್ದುಪಡಿಸಿರುವುದರಿಂದ, ನ್ಯಾಯಾಲಯಗಳ ಮೇಲಿನ ಒತ್ತಡ ಶೇ. 25-30ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ನ್ಯಾಯಾಲಯಗಳಲ್ಲಿ 4.8 ಕೋಟಿ ಪ್ರಕರಣಗಳು ಬಾಕಿ ಇದ್ದು, ಇನ್ನು ಮುಂದೆ ಸಣ್ಣ ತಪ್ಪುಗಳಿಗೆ ಕೋರ್ಟ್ ಬದಲು ಸಂಬಂಧಪಟ್ಟ ಅಧಿಕಾರಿಗಳೇ ತೀರ್ಪು ನೀಡಲಿದ್ದಾರೆ.

ಒಟ್ಟಾರೆಯಾಗಿ, ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026ರ ಮೂಲಕ ಸರ್ಕಾರವು “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” (Minimum Government, Maximum Governance) ಎಂಬ ಆಶಯವನ್ನು ಸಾಕಾರಗೊಳಿಸಿದೆ. ದಂಡ ಆಧಾರಿತ ವ್ಯವಸ್ಥೆಯಿಂದ ವಿಶ್ವಾಸ ಆಧಾರಿತ ಆಡಳಿತ ಮಾದರಿಗೆ ಬದಲಾಗುವ ಮೂಲಕ ಇದು ಭಾರತದ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ರೂಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿ-ಕಾರ್ತಿಕ್​ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?
ಪೃಥ್ವಿ-ಕಾರ್ತಿಕ್​ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?
1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆಯಲ್ಲಿ ಜಮೀರ್ ಅಚ್ಚರಿ ಮಾತು!
1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆಯಲ್ಲಿ ಜಮೀರ್ ಅಚ್ಚರಿ ಮಾತು!
ಕಿಶನ್ ವಿಕೆಟ್ ಬಿದ್ದ ಕೂಡಲೇ ದೇವರಿಗೆ ಕೈಮುಗಿದ ಲಕ್ನೋ ಮಾಲೀಕ
ಕಿಶನ್ ವಿಕೆಟ್ ಬಿದ್ದ ಕೂಡಲೇ ದೇವರಿಗೆ ಕೈಮುಗಿದ ಲಕ್ನೋ ಮಾಲೀಕ
ಏಕವಚನದಲ್ಲಿ ಬೈದಿದ್ದ ಸಚಿವ ಮಲ್ಲಿಕಾರ್ಜುರನ್ನು ಕ್ಷಮಿಸಿದ ಜಮೀರ್
ಏಕವಚನದಲ್ಲಿ ಬೈದಿದ್ದ ಸಚಿವ ಮಲ್ಲಿಕಾರ್ಜುರನ್ನು ಕ್ಷಮಿಸಿದ ಜಮೀರ್
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ
ದೆಹಲಿಯಲ್ಲಿ ನಕಲಿ ಔಷಧಿಗಳ ತಯಾರಿಸುವ ದಂಧೆ
ದೆಹಲಿಯಲ್ಲಿ ನಕಲಿ ಔಷಧಿಗಳ ತಯಾರಿಸುವ ದಂಧೆ
ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ
ಈ ವಾರ ಈ ರಾಶಿಗೆ ಆದಾಯದಲ್ಲಿ ಏರಿಕೆ ಮತ್ತು ಅದೃಷ್ಟ ಕೂಡಿಬರಲಿದೆ
ಈ ವಾರ ಈ ರಾಶಿಗೆ ಆದಾಯದಲ್ಲಿ ಏರಿಕೆ ಮತ್ತು ಅದೃಷ್ಟ ಕೂಡಿಬರಲಿದೆ
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್
47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್
47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್