Covid 19 ಭಾರತದಲ್ಲಿ ಕೊರೊನಾವೈರಸ್​​ನ BA.4 ಮತ್ತು BA.5 ಉಪತಳಿ ಪ್ರಕರಣ ಪತ್ತೆ: ಐಎನ್‌ಎಸ್‌ಎಸಿಒಜಿ

| Updated By: ರಶ್ಮಿ ಕಲ್ಲಕಟ್ಟ

Updated on: May 22, 2022 | 10:18 PM

ಮುಂಜಾಗ್ರತಾ ಕ್ರಮವಾಗಿ BA.4 ಮತ್ತು BA.5 ರೂಪಾಂತರಿಯಿಂದ ಬಾಧಿತರಾಗಿರುವ ರೋಗಿಗಳ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಂಸ್ಥೆ ತಿಳಿಸಿದೆ. ಇದಕ್ಕೂ ಮೊದಲು, ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ದಕ್ಷಿಣ ಆಫ್ರಿಕಾದ ಪ್ರಯಾಣಿಕರಿಗೆ...

Covid 19 ಭಾರತದಲ್ಲಿ ಕೊರೊನಾವೈರಸ್​​ನ BA.4 ಮತ್ತು BA.5 ಉಪತಳಿ ಪ್ರಕರಣ ಪತ್ತೆ: ಐಎನ್‌ಎಸ್‌ಎಸಿಒಜಿ
ಪ್ರಾತಿನಿಧಿಕ ಚಿತ್ರ
Follow us on

ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆ ಐಎನ್‌ಎಸ್‌ಎಸಿಒಜಿ (INSACOG)  ಭಾರತದಲ್ಲಿ ಕೊರೊನಾವೈರಸ್ ಕಾಯಿಲೆಯ (COVID-19) BA.4 ಮತ್ತು BA.5 ಉಪತಳಿಗಳ  ಪ್ರಕರಣ ಪತ್ತೆಯಾಗಿದೆ ಎಂದು ಭಾನುವಾರ ದೃಢಪಡಿಸಿದೆ. ಮೊದಲಿನದ್ದು ತಮಿಳುನಾಡಿನಲ್ಲಿಯೂ ಇನ್ನೊಂದು ತೆಲಂಗಾಣದಲ್ಲಿಯೂ ಪತ್ತೆಯಾಗಿದೆ. ಇವೆರಡೂ ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರದ ತಳಿಗಳಾಗಿದ್ದು ಇದು ಈ ವರ್ಷದ ಆರಂಭದಲ್ಲಿ ದೇಶದಲ್ಲಿ ವೈರಸ್‌ನ ಬೃಹತ್ ಹರಡುವಿಕೆಗೆ ಕಾರಣವಾಯಿತು.ಕೇಂದ್ರ ಸರ್ಕಾರವು ಸ್ಥಾಪಿಸಿದ ಜಂಟಿ ಸಂಸ್ಥೆ ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ ತಮಿಳುನಾಡಿನಲ್ಲಿ 19 ವರ್ಷದ ಮಹಿಳೆಯೊಬ್ಬರು BA.4 ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದೆ “ರೋಗಿಯು ಸೌಮ್ಯವಾದ ಕ್ಲಿನಿಕಲ್ ರೋಗಲಕ್ಷಣಗಳನ್ನು ಮಾತ್ರ ತೋರಿಸಿದ್ದು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ . ತೆಲಂಗಾಣದಲ್ಲಿ 80 ವರ್ಷದ ವ್ಯಕ್ತಿಯೊಬ್ಬರು BA.5 ರೂಪಾಂತರಕ್ಕೆ ಧನಾತ್ಮಕ ಪರೀಕ್ಷೆ ನಡೆಸಿದ್ದರು. ಈ ರೋಗಿಯು ಸಹ ಸೌಮ್ಯವಾದ ಕ್ಲಿನಿಕಲ್ ರೋಗಲಕ್ಷಣಗಳನ್ನು ತೋರಿಸಿದ್ದಾರೆ. ಇವರು ಕೂಡಾ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ. ಈ ವ್ಯಕ್ತಿ ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ.

ಮುಂಜಾಗ್ರತಾ ಕ್ರಮವಾಗಿ BA.4 ಮತ್ತು BA.5 ರೂಪಾಂತರಿಯಿಂದ ಬಾಧಿತರಾಗಿರುವ ರೋಗಿಗಳ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಂಸ್ಥೆ ತಿಳಿಸಿದೆ. ಇದಕ್ಕೂ ಮೊದಲು, ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ದಕ್ಷಿಣ ಆಫ್ರಿಕಾದ ಪ್ರಯಾಣಿಕರಿಗೆ BA.4 ರೂಪಾಂತರದ ಸೋಂಕು ಕಂಡುಬಂದಿದೆ.

ಜಾಗತಿಕವಾಗಿ ಚಲಾವಣೆಯಲ್ಲಿರುವ ಒಮಿಕ್ರಾನ್ ರೂಪಾಂತರದ ಎರಡು ಉಪವಿಭಾಗಗಳು ದಕ್ಷಿಣ ಆಫ್ರಿಕಾದಿಂದ ಮೊದಲು ವರದಿಯಾಗಿದೆ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ. ಈ ತಳಿಗಳು ರೋಗದ ತೀವ್ರತೆ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುವುದಕ್ಕೆ ಕಾರಣವಾಗಿಲ್ಲ ಎಂದು ಅದು ಹೇಳಿದೆ.

ಇದನ್ನೂ ಓದಿ
ರಾಜ್ಯದಲ್ಲಿ ಮತ್ತೆ BA.4, BA.5 ಎಂಬ ಒಮಿಕ್ರಾನ್‌ನ ಎರಡು ಉಪತಳಿಗಳು ಪತ್ತೆ
ಹೊಸ ಒಮಿಕ್ರಾನ್ ರೂಪಾಂತರಿ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿ, ಕೊರೊನಾ ಅಲೆಯನ್ನು ಪ್ರಚೋದಿಸಬಹುದು
ಕೊವಿಡ್ 4ನೇ ಅಲೆಯ ಭೀತಿ; ಪಾಟ್ನಾದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ BA.2.12 ಮೊದಲ ಪ್ರಕರಣ ಪತ್ತೆ
Omicron XE Variant: ಹೊಸ ಒಮಿಕ್ರಾನ್ ಎಕ್ಸ್​ಇ ರೂಪಾಂತರದ ಲಕ್ಷಣ, ಪರಿಣಾಮಗಳೇನು?

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 10:17 pm, Sun, 22 May 22