ಮಹಿಳಾ ದಿನಾಚರಣೆಯಂದು ಗುಜರಾತ್‌ಗೆ ಮೋದಿ: ‘ಲಖ್‌ಪತಿ ದೀದಿ’ ಕಾರ್ಯಕ್ರಮದಲ್ಲಿ ಭಾಗಿ

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಗುಜರಾತಿನಲ್ಲಿ "ಲಖ್​ಪತಿ ದೀದಿ" ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಈ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆ ಮತ್ತು ಜವಾಬ್ದಾರಿ ಮಹಿಳಾ ಪೊಲೀಸರು ನಿರ್ವಹಿಸುತ್ತಿರುವುದು ವಿಶೇಷ.

ಮಹಿಳಾ ದಿನಾಚರಣೆಯಂದು ಗುಜರಾತ್‌ಗೆ ಮೋದಿ: ಲಖ್‌ಪತಿ ದೀದಿ ಕಾರ್ಯಕ್ರಮದಲ್ಲಿ ಭಾಗಿ
ಮಹಿಳಾ ದಿನಾಚರಣೆಯಂದು ಗುಜರಾತ್‌ಗೆ ಮೋದಿ: 'ಲಖ್‌ಪತಿ ದೀದಿ' ಕಾರ್ಯಕ್ರಮದಲ್ಲಿ ಭಾಗಿ
Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2025 | 10:53 PM

ಗುಜರಾತ್​​, ಮಾರ್ಚ್​ 06: ಮಾ.8ಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನ (International Women’s Day) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ನವಸಾರಿ ಜಿಲ್ಲೆಯ ವಾನ್ಸಿ-ಬೋರ್ಸಿಯಲ್ಲಿ ಲಖ್​ಪತಿ ದೀದಿ (Lakhpati Didi) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಲಖ್​ಪತಿ ದೀದಿ ಕಾರ್ಯಕ್ರಮದಲ್ಲಿ ಸುಮಾರು 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸೇರುವ ನಿರೀಕ್ಷೆಯಿದೆ. ದೇಶಾದ್ಯಂತ ಕನಿಷ್ಠ ಎರಡು ಕೋಟಿ ಮಹಿಳೆಯರನ್ನು ಲಖ್​ಪತಿಗಳನ್ನಾಗಿ ಮಾಡುವ ಗುರಿಯನ್ನು ಈ ಲಖ್​ಪತಿ ದೀದಿ ಯೋಜನೆ ಉದ್ದೇಶವಾಗಿದೆ.

ಪ್ರಧಾನಿ ಮೋದಿ ಅವರ ಭಾಗವಹಿಸುತ್ತಿರುವ ಈ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಗಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರ್ವಹಿಸುತ್ತಿರುವುದು ವಿಶೇಷ. ಹಾಗಾಗಿ ಈ ಕಾರ್ಯಕ್ರಮವು ಪೊಲೀಸ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಲಂಡನ್​ನಲ್ಲಿ ಜೈಶಂಕರ್​ ಮೇಲೆ ದಾಳಿಗೆ ಉಗ್ರರ ಯತ್ನ, ಭದ್ರತಾ ವೈಫಲ್ಯ ಖಂಡಿಸಿದ ಭಾರತ

ಇದನ್ನೂ ಓದಿ
ಮಹಿಳೆಯರ ದಿನಕ್ಕೆ ಶುಭಕೋರಲು ಅರ್ಥಪೂರ್ಣ ಸಂದೇಶಗಳು ಇಲ್ಲಿದೆ
2030ದೊಳಗೆ ಮಹಾರಾಷ್ಟ್ರ ಟ್ರಿಲಿಯನ್ ಡಾಲರ್ ಆರ್ಥಿಕತೆ: ಫಡ್ನವಿಸ್
ಆಫೀಸಿನಲ್ಲಿ ಮಹಿಳಾ ದಿನವನ್ನು ಹೇಗೆಲ್ಲಾ ಆಚರಿಸಬಹುದು?
ಉದ್ಯೋಗಸ್ಥ ಮಹಿಳೆಯರ ಹಣಕಾಸಿನ ನಿರ್ವಹಣೆ ಹೇಗಿರಬೇಕು?

ಒಟ್ಟು 2,165 ಮಹಿಳಾ ಕಾನ್‌ಸ್ಟೇಬಲ್‌ಗಳು, 187 ಮಹಿಳಾ ಪಿಐಗಳು, 61 ಮಹಿಳಾ ಪಿಎಸ್ಐಗಳು, 19 ಮಹಿಳಾ ಡಿವೈಎಸ್​​ಪಿಗಳು, 5 ಮಹಿಳಾ ಡಿಎಸ್​​ಪಿಗಳು, 1 ಮಹಿಳಾ ಐಜಿಪಿ ಮತ್ತು 1 ಮಹಿಳಾ ಎಡಿಜಿಪಿ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ

ಇನ್ನು ಪ್ರತಿ ವರ್ಷದಂತೆ ವಿಶ್ವವು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಿದೆ. ಈ ದಿನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಕೊಡುಗೆಗಳನ್ನು ಗೌರವಿಸಲಾಗುತ್ತದೆ. ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಬಲೀಕರಣ ಮಹತ್ವ ನೀಡಲಾಗುತ್ತಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನ ಇದು ಪ್ರಪಂಚದಾದ್ಯಂತ ಅವರ ಹಕ್ಕುಗಳಿಗಾಗಿ ಒತ್ತಾಯಿಸುತ್ತದೆ. ಶಿಕ್ಷಣ, ಆರೋಗ್ಯ ರಕ್ಷಣೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಉತ್ತೇಜಿಸುವ ಉಪಕ್ರಮಗಳ ಮೂಲಕ ಮಹಿಳಾ ಸಬಲೀಕರಣದಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ನಾರಿ ಶಕ್ತಿ ಸೆ ವಿಕಾಸ್ ಭಾರತ್ ಸಮ್ಮೇಳನ

ಮಹಿಳಾ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ ಮಹಿಳಾ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವ ಕೇಂದ್ರ ಸರ್ಕಾರವು ತನ್ನ ಸಾಮಾಜಿಕ-ಆರ್ಥಿಕ ಪ್ರಗತಿಯ ಕೇಂದ್ರದಲ್ಲಿ ಮಹಿಳೆಯರಿಗೆ ಸ್ಥಾನ ನೀಡಿದೆ. ಶನಿವಾರ, ಮಾರ್ಚ್ 8 ರಂದು, ಭಾರತ ಸರ್ಕಾರವು ನವದೆಹಲಿಯ ವಿಜ್ಞಾನ ಭವನದಲ್ಲಿ ‘ನಾರಿ ಶಕ್ತಿ ಸೆ ವಿಕಾಸ್ ಭಾರತ್’ ಎಂಬ ವಿಶೇಷ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿದೆ.

ಕಾರ್ಯಕ್ರಮವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ, ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಬಹಳ ಬೇಗ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಲಿದೆ: ಸಿಎಂ ದೇವೇಂದ್ರ ಫಡ್ನವಿಸ್

ಯುನಿಸೆಫ್ ಮತ್ತು ಯುಎನ್ ವುಮೆನ್ ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ವಿವಿಧ ಪ್ರಮುಖ ವಲಯಗಳ ಮಹಿಳೆಯರು ಸಹ ಭಾಗವಹಿಸಲಿದ್ದಾರೆ. ಇನ್ನು ಈ ವೇಳೆ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆಯನ್ನು ಗೌರವಿಸುವ ಉದ್ದೇಶ ಹಿನ್ನೆಲೆ #SheBuildsBharat ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.