ತಾನು ಭಾಷಣ ಮಾಡುವಾಗ ಅಖಿಲೇಶ್ ಜೊತೆ ಹರಟುತ್ತಿದ್ದ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದರು ಎಸ್ಪಿಯ ರಾಮ್ಜಿಲಾಲ್ ಸುಮನ್!!
ತಮ್ಮ ಭಾಷಣ ನಡೆಯುತ್ತಿರುವಾಗ ವರ್ಮಾ ಮತ್ತು ಅಖಿಲೇಶ್ ಮಾತಿನಲ್ಲಿ ತೊಡಗಿದ್ದು ಸುಮನ್ ಅವರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಅಖಿಲೇಶ್ ಅವರಿಗೆ ಗದರುವುದು ಸಾಧ್ಯವಿಲ್ಲವಲ್ಲ! ಹಾಗಾಗೇ ಪಾಪದ ಜೀವಿ ವರ್ಮಾ ಕೆನ್ನೆಗೆ ಬಾರಿಸುವ ಪ್ರಯತ್ನ ಮಾಡುತ್ತಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ (electioneering) ಒಂದು ಪಕ್ಷದವರು ಇನ್ನೊಂದು ಪಕ್ಷದವರ ವಿರುದ್ಧ ಅರಚುವುದು ಕಿರುಚುವುದನ್ನು ನಾವು ನೋಡಿದ್ದೇವೆ. ಅದರೆ ವಿಧಾನ ಸಭೆ ಚುನಾವಣೆಯ (Assembly Polls) ಕಾವಿನಲ್ಲಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಸೋಜಿಗದ ಸಂಗತಿಯೊಂದು ಸಂಭವಿಸಿರುವುದನ್ನು ನಾವಿಲ್ಲಿ ತೋರಿಸುತ್ತಿದ್ದೇವೆ. ಇದು ನಡೆದಿರುವುದು ರಾಜ್ಯದ ಬಾಹ್ ವಿಧಾನ ಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ (Samajwadi Party) ಚುನಾವಣಾ ಪ್ರಚಾರ ಸಾರ್ವಜನಿಕ ಸಭೆಯಲ್ಲಿ. ಸದರಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಗಿರುವ ರಾಮ್ಜಿಲಾಲ್ ಸುಮನ್ ಅವರು ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷರಾದ ಜಿತೆಂದ್ರ ವರ್ಮಾ ಅವರ ಕೆನ್ನೆಗೆ ಬಾರಿಸಲು ಮುಂದಾಗುತ್ತಿರುವ ಸ್ವಾರಸ್ಯಕರ ದೃಶ್ಯ ವಿಡಿಯೋನಲ್ಲಿ ನಿಮಗೆ ಕಾಣುತ್ತದೆ. ವೇದಿಕೆಯ ಮೇಲೆ ವರ್ಮಾ ಅವರು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಗಹನವಾದ ಚರ್ಚೆ ನಡೆಸುವಾಗ ಸುಮನ್ ಕಪಾಳ ಮೋಕ್ಷ ಮಾಡಲು ಮುಂದಾಗುತ್ತಾರೆ! ನೆರೆದಿದ್ದ ಜನರಲ್ಲಿ ಗಾಬರಿ.
ಸುಮನ್ ವರ್ತನೆ ವರ್ಮಾ ಅವರಲ್ಲಿ ದಗ್ಭ್ರಮೆ ಮೂಡಿಸಿದರೆ ಅಖಿಲೇಶ್ ಅವರಿಗೆ ವಿನೋದಮಯವಾಗಿ ಕಾಣುತ್ತದೆ ಮತ್ತು ಅವರು ಜೋರಾಗಿ ನಗಲಾರಂಭಿಸುತ್ತಾರೆ.
ನೀವೊಮ್ಮೆ ವೀಕ್ಷಿಸಿ.
आगराः बाह विधानसभा क्षेत्र में सभा के दौरान सपा के राष्ट्रीय महासचिव और पूर्व सांसद रामजीलाल सुमन ने पार्टी जिलाध्यक्ष जितेन्द्र वर्मा को तमाचा दिखा दिया, जिससे वह सहम गए, यह देखकर अखिलेश यादव हंस पड़े और माहौल को हल्का करने का प्रयास किया pic.twitter.com/hWOrrf9EpV
— gyanendra shukla (@gyanu999) February 7, 2022
ಸುಮನ್ ಅವರು ರವಿವಾವರದಂದು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಘಟನೆ ಜರುಗಿದೆ. ವರ್ಮಾ ಅವರು ಅಖಿಲೇಶ್ ಅವರೊಂದಿಗೆ ಮಾತಾಡುತ್ತಿದ್ದಾಗ ಸುಮನ್ ತಮ್ಮ ಭಾಷಣ ನಿಲ್ಲಿಸಿ ಅವರತ್ತ ಕೆನ್ನೆಗೆ ಬಾರಿಸುವವರ ಹಾಗೆ ನುಗ್ಗುತ್ತಾರೆ.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ತಮ್ಮ ಭಾಷಣ ನಡೆಯುತ್ತಿರುವಾಗ ವರ್ಮಾ ಮತ್ತು ಅಖಿಲೇಶ್ ಮಾತಿನಲ್ಲಿ ತೊಡಗಿದ್ದು ಸುಮನ್ ಅವರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಅಖಿಲೇಶ್ ಅವರಿಗೆ ಗದರುವುದು ಸಾಧ್ಯವಿಲ್ಲವಲ್ಲ! ಹಾಗಾಗೇ ಪಾಪದ ಜೀವಿ ವರ್ಮಾ ಕೆನ್ನೆಗೆ ಬಾರಿಸುವ ಪ್ರಯತ್ನ ಮಾಡುತ್ತಾರೆ.
ಅದರೆ, ಈ ಘಟನೆ ಒಂದು ಹಾಸ್ಯಮಯ ಸನ್ನಿವೇಶವಾಗಿ ಪರಿವರ್ತನೆಗೊಂಡು ವೇದಿಕೆಯ ಮೇಲಿದ್ದವರೆಲ್ಲ ಮತ್ತು ನೆರೆದಿದ್ದ ಜನ ಜೋರಾಗಿ ನಗಲಾರಂಭಿಸಿದ್ದಾರೆ. ಸುಮನ್ ಅವರ ಬಳಿಕ ಮಾತಾಡಿದ ಆಖಿಲೇಶ್ ಯಾದವ್ ಒಂದು ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಾಹ್ ಅನ್ನು ಜಿಲ್ಲಾ ಕೆಂದ್ರವಾಗಿ ಘೋಷಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ ಮಾಡಿ ಎಂದು ರೈತರಲ್ಲಿ ಒತ್ತಾಯಿಸಿದ ಸಂಯುಕ್ತ ಕಿಸಾನ್ ಮೋರ್ಚಾ
Published On - 11:32 pm, Mon, 7 February 22