ಜಮ್ಮು ಮತ್ತು ಕಾಶ್ಮೀರದಲ್ಲಿ 5.5 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ವಾಯುವ್ಯ ಕಾಶ್ಮೀರದ ಕೆಲವು ಭಾಗಗಳಲ್ಲಿ ಸೋಮವಾರ ರಾತ್ರಿ 9:35 ರ ಸುಮಾರಿಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳ 10 ಕಿ.ಮೀ. ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ (ಎನ್‌ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಲಡಾಖ್‌ನ ಕಾರ್ಗಿಲ್‌ನ ವಾಯುವ್ಯಕ್ಕೆ 148 ಕಿಮೀ ದೂರದಲ್ಲಿದೆ. ಕಂಪನದ ಆಳವು ಮೇಲ್ಮೈಯಿಂದ 10 ಕಿಮೀ ಕೆಳಗೆ ದಾಖಲಾಗಿದೆ. ಭೂಕಂಪನದ ಹೊರತಾಗಿಯೂ, ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಶ್ರೀನಗರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ, ಕಂಪನದ ನಂತರ ಆ ಪ್ರದೇಶದಲ್ಲಿ ಭೀತಿ ಆವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಜಮ್ಮು ಭೇಟಿಗೂ ಮುನ್ನ ಭೂಕಂಪ
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 20 ರಂದು ಜಮ್ಮುವಿಗೆ ಭೇಟಿ ನೀಡಲಿದ್ದು, ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಳಗ್ಗೆ 11:30ರ ಸುಮಾರಿಗೆ ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು 30,500 ಕೋಟಿ ರೂ.ಗಳ ಬಹುವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ. ಯೋಜನೆಗಳು ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿವೆ.
ಮತ್ತಷ್ಟು ಓದಿ: Jammu and Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ 3.6 ತೀವ್ರತೆಯ ಭೂಕಂಪ
ಕಾರ್ಯಕ್ರಮದಲ್ಲಿ, ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಹೊಸ ಸರ್ಕಾರಿ ನೇಮಕಾತಿಗಳಿಗೆ ಪ್ರಧಾನಿ ಮೋದಿ ನೇಮಕಾತಿ ಆದೇಶಗಳನ್ನು ವಿತರಿಸಲಿದ್ದಾರೆ.
ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಲ್ಲಿ, ಪ್ರಧಾನಿಯವರು ಸುಮಾರು 13,375 ಕೋಟಿ ರೂಪಾಯಿ ಮೌಲ್ಯದ ಹಲವಾರು ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಅಡಿಪಾಯ ಹಾಕಲಿದ್ದಾರೆ.
ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತ್ತು
ಜಮ್ಮು ಮತ್ತು ಕಾಶ್ಮೀರದಲ್ಲಿ 3.6 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ಜಮ್ಮು ಕಾಶ್ಮೀರದ ಕಿಶ್ತ್ವಾರದಲ್ಲಿ ಬೆಳಗ್ಗೆ 8.43ರ ಸುಮಾರಿಗೆ ಕಂಪನ ಸಂಭವಿಸಿದೆ. ಈ ಭೂಕಂಪದಲ್ಲಿ ಇದುವರೆಗೆ ಯಾವುದೇ ಆಸ್ತಿಪಾಸ್ತಿ ನಷ್ಟವಾಗಿಲ್ಲ, ಆದರೆ, ಭೂಕಂಪನದಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿರುವುದು ಕಂಡು ಬಂದಿದೆ.
ಈ ಭೂಕಂಪದ ಆಳವನ್ನು 5 ಕಿಲೋಮೀಟರ್ ಎಂದು ಅಳೆಯಲಾಗಿದೆ. ಚೀನಾದ ಜಿಜಾಂಗ್ ಪ್ರಾಂತ್ಯದಲ್ಲೂ ಬೆಳಗ್ಗೆ ಏಳು ಗಂಟೆಗೆ ಭೂಕಂಪನದ ಅನುಭವವಾಗಿದೆ. ಆ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.7 ಎಂದು ಅಳೆಯಲಾಗಿದೆ. ಸೋಮವಾರ ಸಂಜೆ ಅಸ್ಸಾಂನಲ್ಲಿ 3.6 ತೀವ್ರತೆಯ ಭೂಕಂಪನದ ಅನುಭವವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ