ಹೈದರಾಬಾದ್ ಮಾರ್ಚ್ 14: ಜನ ಸೇನಾ ಪಕ್ಷದ (Jana Sena Party) ಮುಖ್ಯಸ್ಥ ಮತ್ತು ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) , ಈ ವರ್ಷ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Andhra Pradesh assembly election) ಪಿಠಾಪುರಂನಿಂದ (Pithapuram) ಸ್ಪರ್ಧಿಸುವುದಾಗಿ ಗುರುವಾರ ಘೋಷಿಸಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಮತ್ತು ಕೇಂದ್ರದಲ್ಲಿ ಬಿಜೆಪಿಯೊಂದಿಗೆ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಪವನ್ ಕಲ್ಯಾಣ್ ಅವರು ರಾಜ್ಯದಿಂದ ಸ್ಪರ್ಧಿಸಲು ಬಯಸುವುದಾಗಿ ಘೋಷಿಸಿದರು. 2019 ರಲ್ಲಿ, ಪವನ್ ಕಲ್ಯಾಣ್ ಗಜುವಾಕ ಮತ್ತು ಭೀಮಾವರಂ ಎಂಬ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದು, ವೈಎಸ್‌ಆರ್‌ಸಿ ಅಭ್ಯರ್ಥಿಗಳ ವಿರುದ್ಧ ಪರಾಭವಗೊಂಡಿದ್ದರು.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದದಲ್ಲಿ, ಆಂಧ್ರಪ್ರದೇಶದಲ್ಲಿ ಬಿಜೆಪಿ 6 ಲೋಕಸಭಾ ಸ್ಥಾನಗಳು ಮತ್ತು 10 ವಿಧಾನಸಭಾ ಸ್ಥಾನಗಳನ್ನು ಪಡೆಯುತ್ತದೆ. ಟಿಡಿಪಿ 17 ಲೋಕಸಭಾ ಸೀಟು ಮತ್ತು 144 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.ಪವನ್ ಕಲ್ಯಾಣ್ ಅವರ ಪಕ್ಷವು ಎರಡು ಲೋಕಸಭೆ ಮತ್ತು 21 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ. ಆಂಧ್ರಪ್ರದೇಶವು 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ.
ಸೀಟು ಹಂಚಿಕೆ ಒಪ್ಪಂದದ ನಂತರ, ಮೂರು ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ನಂಬಿಕೆ ಇರಿಸುವ ಜಂಟಿ ಹೇಳಿಕೆಯನ್ನು ನೀಡಿವೆ. “ನರೇಂದ್ರ ಮೋದಿ ಜಿ ಕಳೆದ 10 ವರ್ಷಗಳಿಂದ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಮತ್ತು ಟಿಡಿಪಿ ಮತ್ತು ಜೆಎಸ್‌ಪಿ ಜೊತೆಗೂಡುವುದರಿಂದ ಆಂಧ್ರಪ್ರದೇಶದ ಜನರ ಆಶೋತ್ತರಗಳನ್ನು ತಲುಪಲು ಸಹಾಯ ಮಾಡುತ್ತದೆ. ಬಿಜೆಪಿ ಮತ್ತು ಟಿಡಿಪಿ ನಡುವಿನ ಸಂಬಂಧ ಹಳೇದು. 1996 ರಲ್ಲಿ ಟಿಡಿಪಿ ಎನ್‌ಡಿಎಗೆ ಸೇರ್ಪಡೆಗೊಂಡಿತು. ಇದು ಅಟಲ್ ಜಿ ಮತ್ತು ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದೆ. 2014 ರಲ್ಲಿ ಟಿಡಿಪಿ ಮತ್ತು ಬಿಜೆಪಿ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದವು. ಆಂಧ್ರಪ್ರದೇಶದಲ್ಲಿ 2014 ರ ಸಾರ್ವತ್ರಿಕ ಜಾಹೀರಾತು ವಿಧಾನಸಭೆ ಚುನಾವಣೆಗೆ ಜೆಎಸ್‌ಪಿ ಬೆಂಬಲ ನೀಡಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
The fundamental purpose of this historic alliance of BJP-TDP-JSP is to give hope, stability and prosperity to people of AP.
Under dynamic, daring, & visionary leadership of Hon. PM Shri @narendramodi ji , We all will be working as responsible stakeholders who will put our best… pic.twitter.com/Jw6kE54klh— Pawan Kalyan (@PawanKalyan) March 9, 2024
ಪಿಠಾಪುರಂ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಅಡಿಯಲ್ಲಿ ಬರುತ್ತದೆ. ಇದನ್ನು ಪ್ರಸ್ತುತ ವೈಎಸ್‌ಆರ್‌ಸಿ ಪ್ರತಿನಿಧಿಸುತ್ತದೆ.
ಇದನ್ನೂ ಓದಿ: ಶರದ್ ಪವಾರ್ ಹೆಸರು, ಚಿತ್ರ ಬಳಸಿದ್ದಕ್ಕೆ ಅಜಿತ್ ಪವಾರ್ ಬಣವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್
ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ್ 2008 ರಲ್ಲಿ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ರಾಜಕೀಯಕ್ಕೆ ಪ್ರವೇಶಿಸಿದರು. 2014 ರಲ್ಲಿ, ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ರಚಿಸಿದ್ದು, ಆ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. 2019 ರಲ್ಲಿ, ಜನಸೇನಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಒಂದು ಸ್ಥಾನವನ್ನು ಗೆದ್ದಿತು. ಪವನ್ ಕಲ್ಯಾಣ್ ಅವರು ಸ್ಪರ್ಧಿಸಿದ್ದ ಎರಡೂ ಸ್ಥಾನಗಳನ್ನು ಕಳೆದುಕೊಂಡರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ