ಆಂಧ್ರದಲ್ಲಿ ಕಮಲ ಹಿಡಿದ ಪವನ್ ಕಲ್ಯಾಣ್!

ಹೈದರಾಬಾದ್​: ನೆರೆ ರಾಜ್ಯ ಆಂಧ್ರಪ್ರದೇಶದ ರಾಜ್ಯಕೀಯ ಅಂದ್ರೆ ಕಲರ್‌ಫುಲ್. ಅಲ್ಲಿನ ರಾಜಕೀಯದಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋದು ಊಹಿಸಲು ಅಸಾಧ್ಯ. ಅದರಲ್ಲೂ ಜಗನ್‌ ಮೋಹನ್ ರೆಡ್ಡಿ ಸಿಎಂ ಆದ ಮೇಲೆ ಅಲ್ಲಿನ ರಾಜಕೀಯ ಫುಲ್ ಬದಲಾಗಿ ಹೋಗಿದೆ. ಹೀಗೆ ನಾನಾ ಕಾರಣಗಳಿಂದ ಗಮನ ಸೆಳೆದೆ ಆಂಧ್ರ ರಾಜಕೀಯ ಮತ್ತೆ ಸದ್ದು ಮಾಡುತ್ತಿದೆ. 2024 ರಲ್ಲಿ ಆಂಧ್ರದ ಗದ್ದುಗೆ ಹಿಡಿಯಲು ಪ್ಲ್ಯಾನ್: ಆಂಧ್ರಪ್ರದೇಶದ 2024ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಎರಡೂ ಪಕ್ಷಗಳು ಈಗಲೇ ಮೈತ್ರಿ ಮಾಡಿಕೊಂಡಿವೆ. ಆಂಧ್ರಪ್ರದೇಶದಲ್ಲಿ […]

ಆಂಧ್ರದಲ್ಲಿ ಕಮಲ ಹಿಡಿದ ಪವನ್ ಕಲ್ಯಾಣ್!
Follow us
ಸಾಧು ಶ್ರೀನಾಥ್​
|

Updated on:Jan 17, 2020 | 11:54 AM

ಹೈದರಾಬಾದ್​: ನೆರೆ ರಾಜ್ಯ ಆಂಧ್ರಪ್ರದೇಶದ ರಾಜ್ಯಕೀಯ ಅಂದ್ರೆ ಕಲರ್‌ಫುಲ್. ಅಲ್ಲಿನ ರಾಜಕೀಯದಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋದು ಊಹಿಸಲು ಅಸಾಧ್ಯ. ಅದರಲ್ಲೂ ಜಗನ್‌ ಮೋಹನ್ ರೆಡ್ಡಿ ಸಿಎಂ ಆದ ಮೇಲೆ ಅಲ್ಲಿನ ರಾಜಕೀಯ ಫುಲ್ ಬದಲಾಗಿ ಹೋಗಿದೆ. ಹೀಗೆ ನಾನಾ ಕಾರಣಗಳಿಂದ ಗಮನ ಸೆಳೆದೆ ಆಂಧ್ರ ರಾಜಕೀಯ ಮತ್ತೆ ಸದ್ದು ಮಾಡುತ್ತಿದೆ.

2024 ರಲ್ಲಿ ಆಂಧ್ರದ ಗದ್ದುಗೆ ಹಿಡಿಯಲು ಪ್ಲ್ಯಾನ್: ಆಂಧ್ರಪ್ರದೇಶದ 2024ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಎರಡೂ ಪಕ್ಷಗಳು ಈಗಲೇ ಮೈತ್ರಿ ಮಾಡಿಕೊಂಡಿವೆ. ಆಂಧ್ರಪ್ರದೇಶದಲ್ಲಿ ಬಿಜೆಪಿ ಹಾಗೂ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿದೆ. ನಿನ್ನೆ ವಿಜಯವಾಡದಲ್ಲಿ ಸಭೆ ನಡೆಸಿದ ಬಳಿಕ ಬಿಜೆಪಿ-ಜನಸೇನಾ ಪಕ್ಷಗಳು ತಮ್ಮ ನಡುವಿನ ರಾಜಕೀಯ ಮೈತ್ರಿಯನ್ನು ಘೋಷಿಸಿವೆ. ಕಳೆದ ವಾರವೇ ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾರನ್ನ ಭೇಟಿಯಾಗಿದ್ದರು. ಆಗಲೇ ಎರಡು ಪಕ್ಷಗಳ ನಡುವಿನ ಮೈತ್ರಿಯ ಸುಳಿವು ಸಿಕ್ಕಿತ್ತು. ಈಗ ಅದು ಅಧಿಕೃತವಾಗಿದೆ.

ಬಿಜೆಪಿ ಜೊತೆ ಜನಸೇನಾ ಮೈತ್ರಿ: ಅಂದಹಾಗೇ ಕಳೆದ ವರ್ಷ ನಡೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ ಯಶಸ್ಸು ಸಿಕ್ಕಿಲ್ಲ. ಒಂದು ಕ್ಷೇತ್ರದಲ್ಲಿ ಮಾತ್ರ ಜನಸೇನಾ ಪಕ್ಷ ಗೆಲುವು ಸಾಧಿಸಿತ್ತು. ಆದರೆ, ಶೇಕಡಾ 7ರಷ್ಟು ವೋಟ್ ಪಡೆದಿತ್ತು. 2024ರ ಆಂಧ್ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟಿಸಿದರೇ, ಯಶಸ್ಸು ಸಿಗಬಹುದು. ಜೊತೆಗೆ ಬಿಜೆಪಿ ಜೊತೆ ಮೈತ್ರಿ ಇದ್ದರೇ ಮತ್ತಷ್ಟು ಅನುಕೂಲವಾಗಲಿದೆ ಅನ್ನೋ ಲೆಕ್ಕಾಚಾರವನ್ನು ಪವನ್ ಕಲ್ಯಾಣ್ ಹಾಕಿದ್ದಾರೆ. ಹೀಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.

ಒಟ್ನಲ್ಲಿ ಮೋದಿ ಅಲೆಯ ಮೇಲೆ ನಂಬಿಕೆ ಇಟ್ಟಿರುವ ಪವನ್ ಕಲ್ಯಾಣ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು 2024ರ ವಿಧಾನಸಭೆ ಚುನಾವಣೆ ಎದುರಿಸಿ, ಸಿಎಂ ಹುದ್ದೆಗೇರಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಆಂಧ್ರದಲ್ಲಿ ಸಿಎಂ ಜಗನ್ ಮುಂದೆ ಬಿಜೆಪಿ ಮತ್ತು ಜನಸೇನಾ ಮೈತ್ರಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 8:20 am, Fri, 17 January 20

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?