ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ಗೆ 4 ದಿನ ಕಾದರೂ ಸೋನಿಯಾ ಮತ್ತು ರಾಹುಲ್ರ ದರ್ಶನ ಭಾಗ್ಯ ಸಿಗಲಿಲ್ಲ!
ಪ್ರಾದೇಶಿಕ ಪಕ್ಷಗಳ ನಾಯಕರು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗ್ಯೂ ಅವರು ದೆಹಲಿಗೆ ತಮ್ಮನ್ನು ಭೇಟಿಯಾಗಲು ಬಂದಾಗ ಅವರಿಗೆ ಆವಕಾಶ ಕಲ್ಪಿಸದೆ, ವಾಪಸ್ಸು ಕಳಿಸುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕ ರಾಹುಲ ಗಾಂಧಿಯವರ ಉಡಾಫೆ ಧೋರಣೆ ಮುಂದುವರೆದಿದೆ. ಅವರ ಧೊರಣೆಗೆ ಲೇಟೆಸ್ಟ್ ಬಲಿಯಾಗಿರುವವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್. ಪಕ್ಷದ ಹೈಕಮಾಂಡನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದ ಅವರು ನಾಲ್ಕು ದಿನಗಳ ಕಾಲ ಅಲ್ಲಿ ಬೀಡು ಬಿಟ್ಟಿದ್ದರೂ ಸೋನಿಯಾ ಮತ್ತು ಅವರ ಸುಪುತ್ರ ರಾಹುಲ್ ಅವರಲ್ಲಿ ಹೇಮಂತ್ […]
ಪ್ರಾದೇಶಿಕ ಪಕ್ಷಗಳ ನಾಯಕರು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗ್ಯೂ ಅವರು ದೆಹಲಿಗೆ ತಮ್ಮನ್ನು ಭೇಟಿಯಾಗಲು ಬಂದಾಗ ಅವರಿಗೆ ಆವಕಾಶ ಕಲ್ಪಿಸದೆ, ವಾಪಸ್ಸು ಕಳಿಸುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕ ರಾಹುಲ ಗಾಂಧಿಯವರ ಉಡಾಫೆ ಧೋರಣೆ ಮುಂದುವರೆದಿದೆ. ಅವರ ಧೊರಣೆಗೆ ಲೇಟೆಸ್ಟ್ ಬಲಿಯಾಗಿರುವವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್. ಪಕ್ಷದ ಹೈಕಮಾಂಡನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದ ಅವರು ನಾಲ್ಕು ದಿನಗಳ ಕಾಲ ಅಲ್ಲಿ ಬೀಡು ಬಿಟ್ಟಿದ್ದರೂ ಸೋನಿಯಾ ಮತ್ತು ಅವರ ಸುಪುತ್ರ ರಾಹುಲ್ ಅವರಲ್ಲಿ ಹೇಮಂತ್ ಅವರಿಗೆ ಸಮಯ ನೀಡಿ ಮಾತಾಡಿಸುವ ಸೌಜನ್ಯತೆ ಹುಟ್ಟಲಿಲ್ಲ. ಆದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಡಿಎಮ್ಕೆ ಪಕ್ಷದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಎಮ್ ಕೆ ಸ್ಟ್ಯಾಲಿನ್ ಅವರಿಗೆ ಸಮಯ ಒದಗಿಸಿ ಮಾತಾನಾಡಿಸುವ ಸೌಜನ್ಯತೆಯನ್ನು ಗಾಂಧಿಗಳು ಪ್ರದರ್ಶಿಸಿದರು. ಪಂಜಾಬ್ ಮತ್ತು ರಾಜಸ್ತಾನಗಳಲ್ಲಿ ಪಕ್ಷ ಅಧಿಕಾರದಲ್ಲಿದ್ದದರೂ ಅಲ್ಲಿನ ವಿದ್ಯಮಾನಗಳು ಪಕ್ಷದ ಹಿತಾಸಕ್ತಿಗಳಿಗೆ ಪೆಟ್ಟು ನೀಡುವ ಸ್ಥಿತಿ ತಲುಪಿವೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಕಾಣಲು ಬಂದ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡದೆ, ಯಾವ ಸಂದೇಶವನ್ನು ಅವರು ರವಾನಿಸಬೇಕು ಅಂದುಕೊಂಡಿದ್ದಾರೆ ಅನ್ನೋದು ಜನರಿಗೆ ಅರ್ಥವಾಗುತ್ತಿಲ್ಲ.
ಮೂಲಗಳ ಪ್ರಕಾರ, ಹೇಮಂತ್ ಅವರು ಶನಿವಾರದಂದು ರಾಂಚಿಗೆ ವಾಪಸ್ಸು ಹೋದರು. ಸೋನಿಯಾ ಅಥವಾ ರಾಹುಲ್ ಅವರನ್ನು ಸಂಪರ್ಕಿಸುವ ಅವರ ಎಲ್ಲ ಪ್ರಯತ್ನಗಳ ವಿಫಲಗೊಂಡ ನಂತರ ಅವರು ಹಿಂದಕ್ಕೆ ಹೋಗಿದ್ದರು. ಗಾಂಧಿಗಳ ಉಡಾಫೆ ಧೊರಣೆಯಿಂದ ಹೇಮಂತ್ ಬೇಸರಗೊಂಡಿದ್ದಾರೆ. ಅಲ್ಲದೆ ಅವರನ್ನು ಕಾಯಲು ಬಿಟ್ಟು ಸ್ಟ್ಯಾಲಿನ್ ಅವರನ್ನು ಕರೆದು ಮಾತಾಡಿದ್ದು, ಹೇಮಂತ್ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಸಂಪುಟದಲ್ಲಿ ಖಾಲಯಿರುವ ಸ್ಥಾನಗಳನ್ನು ಭರ್ತಿ ಮಾಡುವುದು, ಸಚಿವ ಸಂಪುಟದ ಪುನಾರಚನೆ ಮತ್ತು ನಿಗಮ ಮಂಡಳಿಗಳಿಗೆ ನೇಮಕಾತಿಗಳನ್ನು ಮಾಡುವ ವಿಷಯಗಳನ್ನು ಚರ್ಚಿಸುವುದಕ್ಕಾಗಿ ಹೇಮಂತ್ ದೆಹಲಿಗೆ ಬಂದಿದ್ದರು.
ಪಕ್ಷವೊಂದರ ಜೊತೆ ಮೈತ್ರಿ ಮಾಡಿಕೊಂಡಾಗ ಮತ್ತು ಆ ಮೈತ್ರಿಯ ಎರಡು ಪ್ರಮುಖ ಪಕ್ಷಗಳ ನಡುವೆ ಅವಿಶ್ವಾಸ ತಲೆದೋರಿರುವಾಗ ಇಂಥ ಬೆಳವಣಿಗೆಗಳು ತೀವ್ರ ಸ್ವರೂಪದ ಹಾನಿಯನ್ನುಂಟು ಮಾಡುತ್ತವೆ. ಹೇಮಂತ್ ಅವರ ಜೆಎಮ್ಜೆಮ್ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಡುವ ಬಗ್ಗೆ ವದಂತಿಗಳು ಹರಡುತ್ತಿದ್ದರೂ ಕಾಂಗ್ರೆಸ್ ನಾಯಕರು ಇಂಥ ಧೋರಣೆಯನ್ನು ಪ್ರದರ್ಶಿಸುತ್ತಿರುವುದು ಸೋಜಿಗ ಮೂಡಿಸುತ್ತದೆ.
ಮತ್ತೊಂದು ವದಂತಿಯೆಂದರೆ ಬಿಜೆಪಿಯು ಜೆಎಮ್ಜೆಮ್ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಸರ್ಕಾರ ರಚಿಸುವ ಸಾಧ್ಯತೆಯೂ ಇದೆ. ಹಾಗಾದಲ್ಲಿ, ಬೇರೆ ಕೆಲ ರಾಜ್ಯಗಳಲ್ಲಾದಂತೆ ಇಲ್ಲೂ ಕಾಂಗ್ರೆಸ್ ಅಧಿಕಾರದಿಂದ ವಿಮುಖಗೊಳ್ಳಬೇಕಾಗುತ್ತದೆ, ಎಂದು ಮೂಲಗಳು ತಿಳಿಸಿವೆ
ಆದರೆ, ಎಐಸಿಸಿಯ ನಾಯಕರೊಬ್ಬರು ತ್ಯಾಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ‘ಸೋನಿಯಾ ಅವರು ಪಂಜಾಬ್, ರಾಜಸ್ತಾನ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಾರವಿಡೀ ಬ್ಯೂಸಿಯಾಗಿದ್ದರಿಂದ ಹೇಮಂತ್ ಅವರನ್ನು ಬೇಟಿಯಾಗುವುದು ಸಾಧ್ಯವಾಗಲಿಲ್ಲ, ಜಾರ್ಖಂಡ್ನಲ್ಲಿನ ಮೈತ್ರಿ ಬಗ್ಗೆ ಯಾವುದೇ ಸಮಸ್ಯೆಯಿಲ್ಲ.’ ಎಂದು ಅವರು ಹೇಳಿದರು. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಫೈಲಟ್ ಹಾಗೂ ಪಂಜಾಬ್ನಲ್ಲಿ ಅಮರಿಂದರ್ ಸಿಂಗ್ ಮತ್ತು ನವಜೋತ್ಸಿಂಗ್ ಸಿದ್ಧು ನಡುವೆ ನಡೆಯುತ್ತಿರುವ ತಿಕ್ಕಾಟಗಳು ಕಾಂಗ್ರೆಸ್ ಪಕ್ಷವನ್ನು ಕಂಗಾಲಾಗಿಸಿವೆ,
ಜಾರ್ಖಂಡ್ನಲ್ಲಿ ಕಾಂಗ್ರೆಸ್ ಚೀಫ್ ಮತ್ತು ಹೇಮಂತ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿರುವ ರಾಮೇಶ್ ಒರೋನ್ ಅವರು ಪಕ್ಷದ ವ್ಯವಹಾರ ಮತ್ತು ನಿಗಮ ಮಂಡಳಿಗಳಿಗೆ ನೇಮಕಾತಿ ಕುರಿತು ಚರ್ಚಿಸಲು ದೆಹಲಿಗೆ ಬಂದಿದ್ದರು. ಒರೋನ್ ಮತ್ತು ಹೇಮಂತ್ ಜೊತೆಗೂಡಿ ಹೈಕಮಾಂಡ್ನೊಂದಿಗೆ ಹಲವಾರು ವಿಷಯಗಳನ್ನು ಚರ್ಚಿಸಬಹುದಾಗಿತ್ತು.
ಹೇಮಂತ್ ಸಂಪುಟದಲ್ಲಿ ಖಾಲಿಯಿರುವ 12 ನೇ ಸಚಿವ ಹುದ್ದೆ ಮೇಲೆ ಜೆಎಮ್ಎಮ್ ಮತ್ತು ಕಾಂಗ್ರೆಸ್ ಎರಡೂ ಕಣ್ಣಿಟ್ಟಿವೆ. ಸಂಪುಟದಲ್ಲಿ ಮುಖ್ಯಮಂತ್ರಿಯನ್ನು ಸೇರಿಸಿ ಜೆಎಮ್ಎಮ್ 5 ಸಚಿವರನ್ನು ಹೊಂದಿದ್ದರೆ, ಕಾಂಗ್ರೆಸ್ 4 ಮತ್ತು ಮತ್ತೊಂದು ಮಿತ್ರ ಪಕ್ಷ ಆರ್ಜೆಡಿ ಒಂದು ಸಚಿವನನ್ನು ಹೊಂದಿವೆ,
ತಮ್ಮ ಮತ್ತು ಮೈತ್ರಿ ಪಕ್ಷದ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಿರುವ ಘಟನೆ ಇದೇ ಮೊದಲ ಬಾರಿಯೇನೂ ನಡೆದಿಲ್ಲ. ಹಿಂದೆ ಪಕ್ಷದ ನಾಯಕರಾಗಿದ್ದ ಆದರೆ ಹೈಕಮಾಂಡ್ನ ಧಿಮಾಕನ್ನು ಸಹಿಸಿಕೊಳ್ಳದೆ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿ ಈಶಾನ್ಯ ಭಾರತದಲ್ಲಿ ಸ್ಟಾರ್ ಪರ್ಫಾಮರ್ ಆಗಿ ಆಸ್ಸಾಮ್ನ ಮುಖ್ಯಮಂತ್ರಿಯೂ ಆಗಿರುವ ಹಿಮಂತ ಬಿಸ್ವ ಸರ್ಮ ಅವರನ್ನು ಸಹ ರಾಹುಲ್ ಗಾಂಧಿ ಇದೇ ರೀತಿ ಟ್ರೀಟ್ ಮಾಡಿದ್ದರು.
ಕಾಂಗ್ರೆಸ್ನಲ್ಲಿದ್ದಾಗ ಒಮ್ಮೆ ಸರ್ಮ ಅವರು ರಾಹುಲ್ರನ್ನು ಭೇಟಿಯಾಗಲು ಹೋದಾಗ, ಅವರೊಂದಿಗೆ ಮಾತಾಡುವುದದನ್ನು ಬಿಟ್ಟು ತಮ್ಮ ನಾಯಿಗೆ ಬಿಸ್ಕಟ್ ತಿನ್ನಿಸುತ್ತಿದ್ದರಂತೆ.
2017 ರಲ್ಲಿ ತಮ್ಮ ಒಂದು ಟ್ವೀಟ್ನಲ್ಲಿ ಸರ್ಮ ಅದನ್ನು ಹೇಳಿಕೊಂಡಿದ್ದಾರೆ.
‘ಸರ್ @OfficeOfRG, ಇವರನ್ನು ನನಗಿಂತ ಚೆನ್ನಾಗಿ ಯಾರು ಬಲ್ಲರು? ಅಸ್ಸಾಮಿನ ಸಮಸ್ಯೆಗಳನ್ನು ಚರ್ಚಿಸಲು ಹೋದಾಗ ನಿಮ್ಮ ನಾಯಿಗೆ ಬಿಸ್ಕಟ್ಗಳನ್ನು ತಿನ್ನಿಸುವುದರಲ್ಲಿ ನೀವು ಮಗ್ನರಾಗಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ,’ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದರು.
Sir @OfficeOfRG,who knows him better than me.Still remember you busy feeding biscuits 2 him while We wanted to discuss urgent Assam's issues https://t.co/Eiu7VsuvL1
— Himanta Biswa Sarma (@himantabiswa) October 29, 2017
ನಾಯಿ ವಿಷಯ ಪ್ರಸ್ತಾಪಕ್ಕೆ ಬಂದಾಗ ಅದರ ಬಾಲ ಯಾವತ್ತೂ ಡೊಂಕೇ ಎನ್ನುವ ಗಾದೆಯೂ ನೆನಪಾಗುತ್ತದೆ.
ಇದನ್ನೂ ಓದಿ: ರಾತ್ರಿ ವೇಳೆ ಹೆದ್ದಾರಿ ಬದಿಯಲ್ಲೇ ಅನ್ಯಗ್ರಹ ಜೀವಿಯ ವಾಕಿಂಗ್; ಜಾರ್ಖಂಡ್ನಲ್ಲಿ ಸೆರೆಯಾದ ವಿಡಿಯೋ ಬಗ್ಗೆ ಭಾರೀ ಸಂಶಯ