AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುಕುಳ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ, ಹೆಣಕ್ಕೆ ತಾಳಿ ಕಟ್ಟಿದ ವ್ಯಕ್ತಿ

ತನ್ನ ಕಿರುಕುಳಕ್ಕೆ ಬಲಿಯಾಗಿ ಹೆಣವಾಗಿ ಮಲಗಿದ್ದ ಯುವತಿ ಕತ್ತಿಗೆ ವ್ಯಕ್ತಿಯೊಬ್ಬ ತಾಳಿ ಕಟ್ಟಿರುವ ಘಟನೆ ಜಾರ್ಖಂಡ್​ನ ಗಿರಿದಿಹ್​ನಲ್ಲಿ ನಡೆದಿದೆ. ಆಕೆಯನ್ನು ಆತ್ಮಹತ್ಯೆ(Suicide)ಗೆ ತಳ್ಳಿದ ಆರೋಪಿ ಯುವಕನೇ ಪೊಲೀಸರ ಸಮ್ಮುಖದಲ್ಲಿ ಮದುವೆಯಾಗಿರುವ ವಿಲಕ್ಷಣ ಪ್ರಸಂಗ ನಡೆದಿದೆ. ಮೃತರ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕವಾಗಿ ವಿವಾಹ ವಿಧಿವಿಧಾನಗಳನ್ನು ಮುಗಿಸಿದ ನಂತರವೇ ಆಕೆಯ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿದೆ.

ಕಿರುಕುಳ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ, ಹೆಣಕ್ಕೆ ತಾಳಿ ಕಟ್ಟಿದ ವ್ಯಕ್ತಿ
ಸಾವುImage Credit source: Indian Express
ನಯನಾ ರಾಜೀವ್
|

Updated on: May 19, 2026 | 12:59 PM

Share

ಗಿರಿದಿಹ್ , ಮೇ 19: ತನ್ನ ಕಿರುಕುಳಕ್ಕೆ ಬಲಿಯಾಗಿ ಹೆಣವಾಗಿ ಮಲಗಿದ್ದ ಯುವತಿ ಕತ್ತಿಗೆ ವ್ಯಕ್ತಿಯೊಬ್ಬ ತಾಳಿ ಕಟ್ಟಿರುವ ಘಟನೆ ಜಾರ್ಖಂಡ್​ನ ಗಿರಿದಿಹ್​ನಲ್ಲಿ ನಡೆದಿದೆ. ಆಕೆಯನ್ನು ಆತ್ಮಹತ್ಯೆ(Suicide)ಗೆ ತಳ್ಳಿದ ಆರೋಪಿ ಯುವಕನೇ ಪೊಲೀಸರ ಸಮ್ಮುಖದಲ್ಲಿ ಮದುವೆಯಾಗಿರುವ ವಿಲಕ್ಷಣ ಪ್ರಸಂಗ ನಡೆದಿದೆ. ಮೃತರ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕವಾಗಿ ವಿವಾಹ ವಿಧಿವಿಧಾನಗಳನ್ನು ಮುಗಿಸಿದ ನಂತರವೇ ಆಕೆಯ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಯುವಕ ಮನೀಶ್ ಮುರ್ಮು ಮತ್ತು ಮೃತ ಯುವತಿಗೆ ಸುಮಾರು ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಶೀಘ್ರದಲ್ಲೇ ಮದುವೆ ಮಾಡುವುದಾಗಿ ನಂಬಿಸಿ, ಯುವತಿಯನ್ನು ಮನೀಶ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ, ಮನೆಗೆ ಬಂದ ದಿನದಿಂದಲೇ ಆಕೆಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದ್ದನ.

ಇತ್ತ ಯುವತಿಯ ತಂದೆ ಮದುವೆ ದಿನಾಂಕ ನಿಗದಿಪಡಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದಾಗ, ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಮಗಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ ಎಂಬ ಸುದ್ದಿ ಸಿಕ್ಕಿದೆ. ಆತಂಕಗೊಂಡ ಪೋಷಕರು ಹುಡುಗನ ಮನೆಗೆ ಧಾವಿಸಿ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ, ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮನೀಶ್ ನೀಡಿದ ನರಕಯಾತನೆಯನ್ನು ತಡೆಯಲಾರದೆ ನನ್ನ ಮಗಳು ವಿಷ ಸೇವಿಸಿದ್ದಾಳೆ, ಇದಕ್ಕೆ ಆತನೇ ಕಾರಣ ಎಂದು ಯುವತಿಯ ತಂದೆ ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿ ಮನೀಶ್ ಮುರ್ಮುನನ್ನು ತಕ್ಷಣವೇ ಬಂಧಿಸಿದರು. ಆದರೆ, ಮರಣೋತ್ತರ ಪರೀಕ್ಷೆಯ ನಂತರ ಘಟನೆ ತೀವ್ರ ಉದ್ವಿಗ್ನ ರೂಪ ಪಡೆಯಿತು. ಎರಡೂ ಕುಟುಂಬಗಳ ನಡುವೆ ಜಗಳ ತಾರಕಕ್ಕೇರಿ, ಯಾರೂ ಕೂಡ ಯುವತಿಯ ಶವವನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಅನಿವಾರ್ಯವಾಗಿ ಶವವನ್ನು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಇಟ್ಟುಕೊಳ್ಳಬೇಕಾಯಿತು.

ಮತ್ತಷ್ಟು ಓದಿ: ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?

ಕಸ್ಟಡಿಯಿಂದ ಬಂದು ಹೆಣಕ್ಕೆ ತಾಳಿ ಕಟ್ಟಿದ ವರ ಮರುದಿನ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶವವನ್ನು ಯುವಕನ ಗ್ರಾಮಕ್ಕೆ ತರಲಾಯಿತು. ಈ ವೇಳೆ ಗ್ರಾಮಸ್ಥರು ಮತ್ತು ಯುವತಿಯ ಕುಟುಂಬಸ್ಥರು ವಿಚಿತ್ರ ಹಠಕ್ಕೆ ಬಿದ್ದರು. ಮನೀಶ್ ಶವವನ್ನು ಮದುವೆಯಾಗಲೇಬೇಕು ಎಂದು ಪಟ್ಟುಹಿಡಿದರು. ಕೊನೆಗೆ ಉದ್ರಿಕ್ತ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಕಸ್ಟಡಿಯಲ್ಲಿದ್ದ ಆರೋಪಿ ಮನೀಶ್‌ನನ್ನು ಸ್ಥಳಕ್ಕೆ ಕರೆತಂದರು.

ನೂರಾರು ಜನರ ಸಮ್ಮುಖದಲ್ಲಿ, ಪೊಲೀಸ್ ಅಧಿಕಾರಿಗಳ ಕಣ್ಣೆದುರೇ ಆರೋಪಿ ಮನೀಶ್ ಜೀವವಿಲ್ಲದ ಆ ಮುಗ್ಧ ಯುವತಿಯ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಿದನು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
ಸಿಎಂ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಸಿಎಂ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ