AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹದ್ದು ಮೀರಬೇಡಿ ಎಂದು ಜಡ್ಜ್​ಗೆ ವಕೀಲನ ಎಚ್ಚರಿಕೆ; ಹೈಕೋರ್ಟ್​ನಲ್ಲಿ ಅಡ್ವೋಕೇಟ್ ವಿರುದ್ಧ ಪ್ರಕರಣ

Judge vs Advocate: Jharkhand HC high drama - ಜಾರ್ಖಂಡ್ ಹೈಕೋರ್ಟ್​ನನಲ್ಲಿ ನಿನ್ನೆ ಗುರುವಾರ ಹೈಡ್ರಾಮಾ ಘಟನೆಯೊಂದು ನಡೆದಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಜಡ್ಜ್ ವಿರುದ್ಧ ವಕೀಲ ತಿರುಗಿಬಿದ್ದ ಘಟನೆ ಅದು. ವಕೀಲರನ್ನು ಅವಮಾನಿಸಬೇಡಿ, ಹದ್ದು ಮೀರಬೇಡಿ ಎಂದು ನ್ಯಾಯಾಧೀಶರಿಗೆ ಅಡ್ವೊಕೇಟ್ ಎಚ್ಚರಿಕೆ ನೀಡಿದ್ದಾರೆ. ವಕೀಲ ಮಹೇಶ್ ತಿವಾರಿ ವಿರುದ್ಧ ಜಾರ್ಖಂಡ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಹದ್ದು ಮೀರಬೇಡಿ ಎಂದು ಜಡ್ಜ್​ಗೆ ವಕೀಲನ ಎಚ್ಚರಿಕೆ; ಹೈಕೋರ್ಟ್​ನಲ್ಲಿ ಅಡ್ವೋಕೇಟ್ ವಿರುದ್ಧ ಪ್ರಕರಣ
ಜಾರ್ಖಂಡ್ ಹೈಕೋರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 17, 2025 | 2:09 PM

Share

ರಾಂಚಿ, ಅಕ್ಟೋಬರ್ 17: ಮುಖ್ಯನ್ಯಾಯಮೂರ್ತಿಗಳ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಕರಣದ ನೆನಪು ಮಾಡುವ ಮೊದಲೇ ಅಂತಹುದೇ ರೀತಿಯ ಮತ್ತೊಂದು ಪ್ರಕರಣ ಜಾರ್ಖಂಡ್ ಹೈಕೋರ್ಟ್​ನಲ್ಲಿ (Jharkhand High Court) ನಡೆದಿದೆ. ಇಲ್ಲಿ ಹಿರಿಯ ವಕೀಲರೊಬ್ಬರು ಜಡ್ಜ್ ಅವರಿಗೆ ಹದ್ದು ಮೀರಿ ವರ್ತಿಸದಿರಿ ಎಂದು ಎಚ್ಚರಿಸಿದ ಘಟನೆ ನಡೆದಿದೆ. ಅಕ್ಟೋಬರ್ 16ರಂದು ರಾಂಚಿಯಲ್ಲಿರುವ ಜಾರ್ಖಂಡ್ ಹೈಕೋರ್ಟ್​ನ ಕೋರ್ಟ್ ರೂಮ್ 24ರಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ಅಡ್ವೋಕೇಟ್ ವಿರುದ್ಧ ಉಚ್ಚ ನ್ಯಾಯಾಲಯವು ಸುವೋಮೋಟೋ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸುತ್ತಿದೆ.

ಹದ್ದು ಮೀರಿ ವರ್ತಿಸದಿರಿ ಎಂದು ಜಡ್ಜ್​ಗೆ ಅಡ್ವೋಕೇಟ್ ಹೇಳಿದ್ದು ಯಾಕೆ?

ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಕೋರ್ಟ್ ರೂಮ್ 24ರಲ್ಲಿ ನಡೆಯುತ್ತಿತ್ತು. ಗ್ರಾಹಕರ ಪರ ಮಹೇಶ್ ತಿವಾರಿ ವಕಾಲತು ವಹಿಸಿಕೊಂಡು ವಾದಿಸುತ್ತಿದ್ದರು. ನ್ಯಾ| ರಾಜೇಶ್ ಕುಮಾರ್ ಅವರು ಜಡ್ಜ್ ಆಗಿದ್ದರು.

ಇದನ್ನೂ ಓದಿ: ಗುಜರಾತ್ ಹೊಸ ಕ್ಯಾಬಿನೆಟ್: ಹರ್ಷ್ ಸಾಂಘ್ವಿ ಅತ್ಯಂತ ಕಿರಿಯ ಡಿಸಿಎಂ; ರವೀಂದ್ರ ಜಡೇಜಾ ಪತ್ನಿ ಸೇರಿ 26 ಮಂತ್ರಿಗಳು

ಈ ವೇಳೆ ವಕೀಲರು ವಾದ ಮಾಡಿದ ರೀತಿ ಬಗ್ಗೆ ಜಡ್ಜ್ ಅಸಮಾಧಾನದಿಂದ ಏನೋ ಕಾಮೆಂಟ್ ಮಾಡಿದ್ದಾರೆ. ಆಗ ತಿವಾರಿ ಸಿಟ್ಟಿಗೆದ್ದಂತೆ ಕಾಣುತ್ತದೆ. ‘ನಾನು ನನ್ನದೇ ರೀತಿಯಲ್ಲಿ ವಾದ ಮಾಡುತ್ತೇನೆ. ನೀವು ಹೇಳುವ ರೀತಿಯಲ್ಲಲ್ಲ…. ನೀವು ನಿಮ್ಮ ಮಿತಿ ದಾಟಿ ಹೋಗಬೇಡಿ. ಈ ದೇಶ ಹೊತ್ತಿ ಉರಿಯುತ್ತಿದೆ, ನ್ಯಾಯಾಂಗದ ಜೊತೆಗೆ. ಯಾವುದೇ ವಕೀಲರನ್ನು ನೀವು ಅವಮಾನಿಸಬೇಡಿ. ನಾನು 40 ವರ್ಷದಿಂದ ವಕೀಲಿಕೆ ಮಾಡುತ್ತಿದ್ದೇನೆ..’ ಎಂದು ಮಹೇಶ್ ತಿವಾರಿ ಹೇಳಿದರು.

ಘಟನೆಯ ವಿಡಿಯೋ ಎಕ್ಸ್​ನಲ್ಲಿ ಪೋಸ್ಟ್ ಆಗಿದ್ದು…

ಸಹ-ವಕೀಲರು ತಿವಾರಿಯನ್ನು ಸಮಾಧಾನಗೊಳಿಸಿದರು. ಈ ಘಟನೆಯಿಂದ ನ್ಯಾಯಾಧೀಶರಾದ ರಾಜೇಶ್ ಕುಮಾರ್ ಮತ್ತಷ್ಟು ಅಸಮಾಧಾನಗೊಂಡಂತಿತ್ತು. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಡ್ವೋಕೇಟ್ ಮಾಡಿದ್ದು ಸರಿ ಎಂದು ಕೆಲವರು ಹೇಳಿದರು, ನ್ಯಾಯಾಧೀಶರಿಗೆ ಬೆಲೆಯೇ ಇಲ್ಲದಂಥ ಸ್ಥಿತಿ ಬಂದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತ-ಅಫ್ಘಾನ್ ವಿರುದ್ಧ ಯುದ್ಧ ಮಾಡಲು ನಾವು ಸಿದ್ಧ: ಪಾಕ್​​ ರಕ್ಷಣಾ ಸಚಿವ

ಜಾರ್ಖಂಡ್ ಹೈಕೋರ್ಟ್​ನಿಂದ ಅಡ್ವೋಕೇಟ್ ವಿರುದ್ಧ ಪ್ರಕರಣ

ಇದೇ ವೇಳೆ ಅಡ್ವೋಕೇಟ್ ಮಹೇಶ್ ತಿವಾರಿ ವಿರುದ್ಧ ಜಾರ್ಖಂಡ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ (ಸುವೋಮೋಟೋ) ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಜಾರ್ಖಂಡ್ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶ ತಾರಲೋಕ್ ಸಿಂಗ್ ಚೌಹಾಣ್, ನ್ಯಅಯಮೂರ್ತಿಗಳಾದ ಸುಜಿತ್ ನಾರಾಯಣ್ ಪ್ರಸಾದ್, ರಂಗೋನ್ ಮುಖೋಪಾಧ್ಯಾಯ್, ಆನಂದ ಸೇನ್ ಮತ್ತು ರಾಜೇಶ್ ಶಂಕರ್ ಅವರಿರುವ ಹೈಕೋರ್ಟ್ ನ್ಯಾಯಪೀಠವು ಇದರ ವಿಚಾರಣೆ ನಡೆಸಲಿದೆ. ವಕೀಲ ಮಹೇಶ್ ತಿವಾರಿಗೆ ನೋಟೀಸ್ ಕೊಡಲಾಗಿದ್ದು, ಮೂರು ವಾರಗಳೊಳಗೆ ಉತ್ತರಿಸುವಂತೆ ಆದೇಶಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Fri, 17 October 25

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ