ಸೋದರಳಿಯನ ಮೇಲೆ ಪ್ರೀತಿ, ಪತಿಯನ್ನೇ ಕೊಂದು ಪಕ್ಕದ ಮನೆಯವನ ಮೇಲೆ ಆರೋಪ ಹಾಕಿದ್ದ ಮಹಿಳೆ ಅರೆಸ್ಟ್

ಸೋದರಳಿಯನ ಜತೆ ಪ್ರೀತಿಯಲ್ಲಿ ಬಿದ್ದ ಮಹಿಳೆಯೊಬ್ಬಳು ಗಂಡನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ಸಾದ್​ನ ಲಕ್ಷ್ಮಣಖೇಡಾ ಗ್ರಾಮದಲ್ಲಿ ಮೇ 10ರಂದು ಕೊಲೆ ನಡೆದಿದ್ದು, ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಪೊಲೀಸರು ಆತನ ಪತ್ನಿ ಮತ್ತು ಸೋದರಳಿಯನನ್ನು ಬಂಧಿಸಿದ್ದಾರೆ. ಹೆಂಡತಿ ಮತ್ತು ಸೋದರಳಿಯ ಅಕ್ರಮ ಸಂಬಂಧ ಹೊಂದಿದ್ದರು. ಈ ಸಂಬಂಧ ಪತಿಗೆ ತಿಳಿದುಬಿಟ್ಟರೆ ಎನ್ನುವ ಭಯದಲ್ಲಿ ಸೋದರಳಿಯನೊಂದಿಗೆ ಸೇರಿ ಗಂಡನನ್ನು ಕೊಂದಿದ್ದಾರೆ.

ಸೋದರಳಿಯನ ಮೇಲೆ ಪ್ರೀತಿ, ಪತಿಯನ್ನೇ ಕೊಂದು ಪಕ್ಕದ ಮನೆಯವನ ಮೇಲೆ ಆರೋಪ ಹಾಕಿದ್ದ ಮಹಿಳೆ ಅರೆಸ್ಟ್
ಕಾನ್ಪುರ ಕೊಲೆ ಆರೋಪಿ
Image Credit source: Amarujala.com

Updated on: May 20, 2025 | 12:50 PM

ಕಾನ್ಪುರ, ಮೇ 20: ಮಹಿಳೆಯೊಬ್ಬಳು ಸೋದರಳಿಯನ ಜತೆ ಸೇರಿ ಪತಿಯನ್ನೇ ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ಸಾದ್​ನ ಲಕ್ಷ್ಮಣಖೇಡಾ ಗ್ರಾಮದಲ್ಲಿ ಮೇ 10ರಂದು ಕೊಲೆ ನಡೆದಿದ್ದು, ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಪೊಲೀಸರು ಆತನ ಪತ್ನಿ ಮತ್ತು ಸೋದರಳಿಯನನ್ನು ಬಂಧಿಸಿದ್ದಾರೆ. ಹೆಂಡತಿ ಮತ್ತು ಸೋದರಳಿಯ ಅಕ್ರಮ ಸಂಬಂಧ ಹೊಂದಿದ್ದರು. ಈ ಸಂಬಂಧ ಪತಿಗೆ ತಿಳಿದುಬಿಟ್ಟಿತ್ತು, ತಮ್ಮ ದಾರಿಗೆ ಮುಳ್ಳಾದರೆ ಎನ್ನುವ ಭಯದಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದಿದ್ದಾಳೆ.

ಸೋದರಳಿಯನನ್ನು ಆಕೆ ಪ್ರೀತಿಸುತ್ತಿದ್ದಳು. ಕೊಲೆ ಮಾಡಿ ಆ ಕೊಲೆಯನ್ನು ಪಕ್ಕದ ಮನೆಯವನ ಮೇಲೆ ಹಾಕಿದ್ದರು. ಪತಿಯ ಕೊಲೆಗಾಗಿ ಇಬ್ಬರು ಅಮಾಯಕರನ್ನು ಜೈಲಿಗೆ ಕಳುಹಿಸಿದ್ದಳು.ಪತಿಯ ಕೊಲೆಯ ನಂತರ, ಪತ್ನಿ ನೆರೆಯ ತಂದೆ ಮತ್ತು ಮಗನ ಮೇಲೆ ಆರೋಪ ಹೊರಿಸಿ ಗಲಾಟೆ ಮಾಡಿದ್ದಳು.

ಆಕೆಗೆ ಬೆಂಬಲವಾಗಿ ಗ್ರಾಮಸ್ಥರು ಮತ್ತು ಪಕ್ಷದ ಸದಸ್ಯರು ಕೂಡ ಪ್ರತಿಭಟನೆ ನಡೆಸಿದ್ದರು. ಈಗ ಪೊಲೀಸರು ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಮತ್ತು ಅಮಾಯಕ ತಂದೆ ಮತ್ತು ಮಗನನ್ನು ಜೈಲಿನಿಂದ ಬಿಡುಗಡೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ
ರಾಮನಗರದಲ್ಲಿ ಅಮಾನುಷ ಕೃತ್ಯ: ಅತ್ಯಾಚಾರ ಎಸಗಿ ಮೂಕ ಬಾಲಕಿ ಕೊಲೆ ಆರೋಪ
9ನೇ ತರಗತಿ ಸ್ನೇಹಿತನನ್ನೇ ಇರಿದು ಕೊಂದ 6ನೇ ಕ್ಲಾಸ್ ಬಾಲಕ: ಪೊಲೀಸರೇ ಶಾಕ್​​
ಮಗಳ ಸಾವಿಗೆ ಪ್ರತೀಕಾರ: ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಕೊಂದ!
ಕಣ್ಮುಚ್ಚಿ ಬಿಡುವಷ್ಟರಲ್ಲೇ ಕಗ್ಗೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್!

ಕಾನ್ಪುರದ ಘಟಂಪುರದಲ್ಲಿ ವಾಸಿಸುತ್ತಿದ್ದ ಟ್ರ್ಯಾಕ್ಟರ್ ಮಾಲೀಕ ಧೀರೇಂದ್ರ ಅವರನ್ನು ಮೇ 10 ರಂದು ಅವರ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಯಾವುದೋ ಗಟ್ಟಿಯಾದ ವಸ್ತುವಿನಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಯಾದ ಮರುದಿನ ಬೆಳಿಗ್ಗೆ, ಧೀರೇಂದ್ರ ಅವರ ಪತ್ನಿ ರೀನಾ ಅಳಲು ಪ್ರಾರಂಭಿಸಿದರು ಮತ್ತು ಅದೇ ಗ್ರಾಮದ ಕೀರ್ತಿ ಯಾದವ್ ಮತ್ತು ಅವರ ಪುತ್ರರಾದ ರವಿ ಮತ್ತು ರಾಜು ಅವರು ತಮ್ಮ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳುತ್ತಾ ಗದ್ದಲ ಸೃಷ್ಟಿಸಿದ್ದರು.

ಮತ್ತಷ್ಟು ಓದಿ: ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಚಾಕುವಿನಿಂದ ಇರಿಯುತ್ತಿರುವ ಭಯಾನಕ ವಿಡಿಯೋ

ಟ್ರ್ಯಾಕ್ಟರ್‌ನಲ್ಲಿನ ದೋಷದ ಬಗ್ಗೆ ಕೀರ್ತಿ ಯಾದವ್ ಜೊತೆ ತನ್ನ ಪತಿ ಧೀರೇಂದ್ರ ಜಗಳವಾಡಿದ್ದನು, ಇದರಿಂದಾಗಿ ಅವನು ಅವನನ್ನು ಹೊಡೆದಿದ್ದಾನೆ ಎಂದು ರೀನಾ ಸ್ಥಳದಲ್ಲೇ ಅಳುತ್ತಿದ್ದಳು. ನಾನು ಈ ವಿಷಯದ ಬಗ್ಗೆ ದೂರು ನೀಡಿದಾಗ, ಪೊಲೀಸರು ನನ್ನ ಪತಿಯನ್ನು ಪೊಲೀಸ್ ಠಾಣೆಗೆ ಕರೆಸಿ ಬಲವಂತವಾಗಿ ರಾಜಿ ಮಾಡಿಕೊಂಡರು. ರಾಜಿಯಾಗದೇ ಇದ್ದಿದ್ದರೆ ಇಂದು ಪತಿ ಉಳಿಯುತ್ತಿದ್ದರು ಎಂದು ಮೊಸಳೆ ಕಣ್ಣೀರು ಹಾಕಿದ್ದಳು.

ಆದರೆ ಪೊಲೀಸರು ತನಿಖೆ ನಡೆಸಿದಾಗ ಆಕೆಯ ಸೋದರಳಿಯ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಧೀರೇಂದ್ರ ಅವರ ಪತ್ನಿ ರೀನಾಳನ್ನು ವಶಕ್ಕೆ ತೆಗೆದುಕೊಂಡು ಮುಖಾಮುಖಿ ವಿಚಾರಣೆ ನಡೆಸಿದಾಗ ಅವರ ಸಂಬಂಧ ಬೆಳಕಿಗೆ ಬಂದಿತು. ರೀನಾ ತನ್ನ ಸೋದರಳಿಯ ಸತ್ಯಂ ಜೊತೆ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಳು.

ಅವಳು ಅವನ ಜೊತೆ ಇರಲು ಬಯಸಿದ್ದಳು. ಒಂದು ದಿನ ಗಂಡ ಅವರಿಬ್ಬರನ್ನೂ ನೋಡಿದ್ದರು, ನಂತರ ಜಗಳವಾಯಿತು. ಇದಾದ ಬಳಿಕ ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.ನಿದ್ರೆ ಮಾತ್ರೆ ಬೆರೆಸಿ ಗಂಡನಿಗೆ ಊಟ ನೀಡಿ ಪ್ರಜ್ಞೆ ತಪ್ಪಿಸಿ, ಮರದ ಕೋಲಿನಿಂದ ಆತನ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:34 pm, Tue, 20 May 25