ಕಾಂಗ್ರೆಸ್ ಕಣ್ಣುಮುಚ್ಚಿಕೊಂಡು ಮುಂದೆ ಹೋಗುತ್ತಿದೆ: ಸುಶ್ಮಿತಾ ದೇವ್ ರಾಜೀನಾಮೆ ಬೆನ್ನಲ್ಲೇ ಕಪಿಲ್ ಸಿಬಲ್ ಟೀಕೆ
ಸುಶ್ಮಿತಾ ದೇವ್ ಭಾನುವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಹಾಗೂ ಪಕ್ಷ ತೊರೆಯುತ್ತಿರುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ಅವರು ನೀಡಿಲ್ಲ.
ದೆಹಲಿ: ಕಾಂಗ್ರೆಸ್ ನಾಯಕಿ ಸುಶ್ಮಿತಾ ದೇವ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ನ ನಾಯಕತ್ವವನ್ನು ಕಟು ನುಡಿಗಳಿಂದ ಟೀಕಿಸಿದ್ದಾರೆ. ಕಾಂಗ್ರೆಸ್ ಕಣ್ಣು ಮುಚ್ಚಿಕೊಂಡು ಮುಂದೆ ಸಾಗುತ್ತಿದೆ ಎಂದು ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕಪಿಲ್ ಸಿಬಲ್, ಕಾಂಗ್ರೆಸ್ನ ಜಿ23 ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ಜಿ23 ನಾಯಕರು ಕಳೆದ ವರ್ಷ ಕಾಂಗ್ರೆಸ್ ನಾಯಕತ್ವ ಹಾಗೂ ಪಕ್ಷದಲ್ಲಿ ಬದಲಾವಣೆ ತರಬೇಕೆಂದು ಆಗ್ರಹಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತೆರೆದ ಪತ್ರ ಬರೆದಿದ್ದರು.
ಸುಶ್ಮಿತಾ ದೇವ್ ಕಾಂಗ್ರೆಸ್ ತೊರೆದಿದ್ದಾರೆ. ಪಕ್ಷದ ಕಿರಿಯ ಸದಸ್ಯರು ಕಾಂಗ್ರೆಸ್ ಬಿಟ್ಟುಹೋಗುತ್ತಿದ್ದರೆ ನಮ್ಮಂಥ ಹಿರಿಯರು ಪಕ್ಷವನ್ನು ಬಲಪಡಿಸುವ ಶ್ರಮ ಹಾಕಿದರೆ ದೂಷಣೆಗೆ ಒಳಗಾಗುತ್ತಿದ್ದೇವೆ. ಪಕ್ಷವು ಕಣ್ಣು ಮುಚ್ಚಿಕೊಂಡು ಮುಂದೆ ಹೋಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
ಸುಶ್ಮಿತಾ ದೇವ್ ಭಾನುವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಹಾಗೂ ಪಕ್ಷ ತೊರೆಯುತ್ತಿರುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ಅವರು ನೀಡಿಲ್ಲ. ಸಾರ್ವಜನಿಕ ಸೇವೆಯ ಜೀವನದಲ್ಲಿ ಹೊಸ ಭಾಗ ಆರಂಭಿಸುತ್ತಿದ್ದೇನೆ ಎಂದು ಅವರು ಹೇಳಿದ್ದರು. ಹಾಗೂ ಟ್ವಿಟರ್ ಬಯೋನಲ್ಲಿ ಕೂಡ ಕಾಂಗ್ರೆಸ್ನ ಮಾಜಿ ಸದಸ್ಯೆ ಎಂದು ಬದಲಾಯಿಸಿಕೊಂಡಿದ್ದಾರೆ.
Sushmita Dev
Resigns from primary membership of our Party
While young leaders leave we ‘oldies’ are blamed for our efforts to strengthen it
The Party moves on with :
Eyes Wide Shut
— Kapil Sibal (@KapilSibal) August 16, 2021
48 ವರ್ಷದ ಸುಶ್ಮಿತಾ ದೇವ್ ಈ ಹಿಂದೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ (All India Mahila Congress) ಅಧ್ಯಕ್ಷೆಯಾಗಿದ್ದರು. ಸುಶ್ಮಿತಾ ದೇವ್ ಅವರ ತಂದೆ ಸಂತೋಷ್ ಮೋಹನ್ ದೇವ್ ಈ ಹಿಂದೆ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮತ್ತು ತಾಯಿ ಬಿತಿಕಾ ದೇವ್ ಅಸ್ಸಾಂನಲ್ಲಿ ಶಾಸಕಿಯಾಗಿದ್ದರು.
ಇದೀಗ, ಘಟನೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡುವ ಮೂಲಕ ಕಪಿಲ್ ಸಿಬಲ್ ಕಾಂಗ್ರೆಸ್ನ ಬಿಕ್ಕಟ್ಟನ್ನು ಮತ್ತೆ ಎತ್ತಿ ತೋರಿಸಿದ್ದಾರೆ. ಕಾಂಗ್ರೆಸ್ ಸದ್ಯ ಪೂರ್ಣಾವಧಿ ಅಧ್ಯಕ್ಷ ಇಲ್ಲದೆ ಕೆಲಸ ಮಾಡುತ್ತಿದೆ. ಸೋನಿಯಾ ಗಾಂಧಿ ವರ್ಕಿಂಗ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಪಿಲ್ ಸಿಬಲ್ ಸಹಿತ ಕಾಂಗ್ರೆಸ್ನ 22 ಇತರ ನಾಯಕರು ಹೊಸ ಅಧ್ಯಕ್ಷರನ್ನು ನೇಮಿಸಲು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ, ಕಾಂಗ್ರೆಸ್ ನಾಯಕತ್ವ ವಹಿಸಿದ್ದ ರಾಹುಲ್ ಗಾಂಧಿ 2019ರ ಪಕ್ಷದ ಕಳಪೆ ಪ್ರದರ್ಶನದ ಬಳಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಕುಸಿಯುತ್ತಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು -ಕಪಿಲ್ ಸಿಬಲ್
ಕಾಂಗ್ರೆಸ್ನಲ್ಲಿ ಭವಿಷ್ಯದ ನಾಯಕರ ಉಗಮವಾಗಲಿದೆ: ಜಿ 23 ಬಣದ ನಾಯಕ ಕಪಿಲ್ ಸಿಬಲ್ ವಿಶ್ವಾಸ
Published On - 3:53 pm, Mon, 16 August 21