Kashi Vishwanath Corridor: ಡಿ. 13ರಂದು ಪ್ರಧಾನಿ ಮೋದಿಯಿಂದ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 13 ಮತ್ತು 14ರಂದು ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸುವರು. ಎರಡು ದಿನಗಳ ಕಾಲ ವಾರಾಣಸಿಯಲ್ಲಿ ಬಿಜೆಪಿಯು ತನ್ನ ಶಕ್ತಿ ಪ್ರದರ್ಶನವನ್ನು ಮಾಡಲಿದೆ.

Kashi Vishwanath Corridor: ಡಿ. 13ರಂದು ಪ್ರಧಾನಿ ಮೋದಿಯಿಂದ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ
ಕಾಶಿ ವಿಶ್ವನಾಥ್ ಕಾರಿಡಾರ್

ನವದೆಹಲಿ: ಮುಂದಿನ ವರ್ಷ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುವ ಉತ್ತರ ಪ್ರದೇಶ ರಾಜ್ಯಕ್ಕೆ ಪ್ರಧಾನಿ ಮೋದಿ ಪದೇಪದೆ ಭೇಟಿ ನೀಡುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 13ರಂದು ವಾರಾಣಸಿಯ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ವಾರಾಣಸಿಯಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ.

ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 13 ಮತ್ತು 14ರಂದು ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸುವರು. ಎರಡು ದಿನಗಳ ಕಾಲ ವಾರಾಣಸಿಯಲ್ಲಿ ಬಿಜೆಪಿಯು ತನ್ನ ಶಕ್ತಿ ಪ್ರದರ್ಶನವನ್ನು ಮಾಡಲಿದೆ. ಎರಡು ದಿನಗಳ ಕಾಲ ಬಿಜೆಪಿ ಆಳ್ವಿಕೆಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಾರಾಣಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆ ಹಾಗೂ ಉಳಿದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಡಿಸೆಂಬರ್ 13ರಂದು ವಾರಾಣಸಿಯಲ್ಲಿ ನಡೆಯಲಿರುವ ಕಾಶಿ ವಿಶ್ವನಾಥ ಧಾಮದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂ ಮತ್ತು ಉಪ ಮುಖ್ಯಮಂತ್ರಿಗಳನ್ನು ಪ್ರಧಾನಿ ಆಹ್ವಾನಿಸಿದ್ದಾರೆ. ಪ್ರಧಾನಮಂತ್ರಿಯವರು ಗಂಗಾನದಿಯ ಪ್ರವಾಸ ಕೈಗೊಂಡಾಗ ಮತ್ತು ಸಂಜೆ ಗಂಗಾ ಆರತಿ ಮಾಡುವಾಗ ಈ ನಾಯಕರು ಸಹ ಅವರೊಂದಿಗೆ ಹೋಗುತ್ತಾರೆ. ಮರುದಿನ, ಡಿಸೆಂಬರ್ 14ರಂದು ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಈ ಎಲ್ಲಾ ಸಿಎಂಗಳು ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಉತ್ತಮ ಆಡಳಿತ ವಿಷಯದ ಕುರಿತು ವಿಚಾರ ಸಂಕಿರಣವನ್ನು ನಡೆಸಲಿದ್ದಾರೆ. ಅಲ್ಲಿ ಅವರು ಅಭಿವೃದ್ಧಿ ಮತ್ತು ಕೊರೊನಾ ವೈರಸ್ ವಿರುದ್ಧದ ಹೋರಾಟದ ಕುರಿತು ಸಲಹೆಗಳನ್ನು ನೀಡುವ ನಿರೀಕ್ಷೆಯಿದೆ. ಕೋವಿಡ್-19 ಲಸಿಕೆ ಅಭಿಯಾನವನ್ನ ಉತ್ತೇಜಿಸುವಂತೆ ಸಿಎಂಗಳಿಗೆ ಪ್ರಧಾನಿ ಮೋದಿ ಸೂಚಿಸುವರು. ಜೊತೆಗೆ ಬಿಜೆಪಿ ಆಳ್ವಿಕೆಯ ರಾಜ್ಯಗಳ ಸಿಎಂಗಳ ಜೊತೆಗೆ ಪ್ರಧಾನಿ ಮೋದಿ ಪ್ರತ್ಯೇಕವಾಗಿ ಮಾತುಕತೆ ನಡೆಸುವರು. ರಾಜ್ಯಗಳಲ್ಲಿ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ, ಮಾರ್ಗದರ್ಶನ ನೀಡುವರು.

ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 14ರಂದು ವಾರಾಣಸಿಯಲ್ಲಿರುವ ವಿಹಂಗಮ ಯೋಗ ಮತ್ತು ಧ್ಯಾನದ ದೊಡ್ಡ ಕೇಂದ್ರವಾದ ಸ್ವರ್ವೇದ್ ಮಹಾಮಂದಿರ ಧಾಮಕ್ಕೆ ಭೇಟಿ ನೀಡಬಹುದು. ಅವರು ಅಂದು ಸಂಜೆ ದೆಹಲಿಗೆ ಹಿಂತಿರುಗುತ್ತಾರೆ. ನರೇಂದ್ರ ಮೋದಿ ಡಿಸೆಂಬರ್ 18ರಂದು ಉತ್ತರ ಪ್ರದೇಶದಲ್ಲಿ ಮೀರತ್‌ನಿಂದ ಪ್ರಯಾಗರಾಜ್‌ಗೆ ರಾಜ್ಯದ ಅತಿ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡುವ ನಿರೀಕ್ಷೆಯಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಉತ್ತರ ಪ್ರದೇಶ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಲು ಉತ್ತರ ಪ್ರದೇಶಕ್ಕೆ ಪ್ರಧಾನಿ ಮೋದಿ ಅಂತಿಮ ಅಧಿಕೃತ ಭೇಟಿಗಳನ್ನು ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 13ರಂದು ಉತ್ತರ ಪ್ರದೇಶದಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ. ಬಹುಕೋಟಿ ವೆಚ್ಚದ ಕಾರಿಡಾರ್ ಯೋಜನೆಯನ್ನು ಉದ್ದೇಶಿತ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಹಿಂದಿನ ವಾಸ್ತುಶಿಲ್ಪಿ ಭೀಮಲ್ ಪಟೇಲ್ ವಿನ್ಯಾಸಗೊಳಿಸಿದ್ದಾರೆ.

ಪ್ರಧಾನ ಮಂತ್ರಿಯವರ ಕನಸಿನ ಯೋಜನೆ ಎಂದು ಕರೆಯಲ್ಪಡುವ ಈ ಕಾರಿಡಾರ್ ಅವಧಿಯನ್ನು ಕಾಶಿ ವಿಶ್ವನಾಥ್ ದೇವಾಲಯ ಹಾಗೂ ಗಂಗಾ ನದಿಯ ನಡುವಿನ ವಾಕಿಂಗ್ ಅವಧಿಯನ್ನು ಕಡಿಮೆ ಮಾಡುತ್ತದೆ. ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ನದಿಯ ನಡುವೆ ನೇರ ಸಂಪರ್ಕವು ಕಾರಿಡಾರ್ ನಿರ್ಮಾಣದಿಂದ ಸಾಧ್ಯವಾಗಿದೆ. ಮರು ಅಭಿವೃದ್ದಿ ಯೋಜನೆಯ 1ನೇ ಹಂತದ ಉದ್ಘಾಟನೆಯ ನಂತರ ದೇವಾಲಯದ ಆವರಣವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಎರಡನೇ ಹಂತವು ಗಂಗಾನದಿಯ ದಡಗಳ ಪುನರಾಭಿವೃದ್ಧಿಯನ್ನು ಒಳಗೊಂಡಿರುತ್ತದೆ ಮತ್ತು ಎರಡನೇ ಹಂತದ ಕಾಮಗಾರಿಗಳು ಮುಂದಿನ ವರ್ಷ ಜನವರಿ ವೇಳೆಗೆ ಪೂರ್ಣವಾಗಲಿವೆ.

ಕಾಶಿ ವಿಶ್ವನಾಥ ಧಾಮ್ ಕಾರಿಡಾರ್‌ನಲ್ಲಿ, ಒಮ್ಮೆ ದೇವಾಲಯವನ್ನು ಪುನರ್​ ನಿರ್ಮಿಸಿದ ಮರಾಠ ರಾಣಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ. ಇಡೀ ಕಾರ್ಯಕ್ರಮವನ್ನು ದೇಶಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ. ವಾಸ್ತುಶಿಲ್ಪಿ ಭೀಮಲ್ ಪಟೇಲ್ ಪ್ರಕಾರ, ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯು ಟೆಂಪಲ್ ಚೌಕ್, ವಾರಣಾಸಿ ಸಿಟಿ ಗ್ಯಾಲರಿ, ವಸ್ತುಸಂಗ್ರಹಾಲಯ, ವಿವಿಧೋದ್ದೇಶ ಸಭಾಂಗಣಗಳು, ಸಭಾಂಗಣ, ಭಕ್ತರ ಅನುಕೂಲ ಕೇಂದ್ರ, ಸಾರ್ವಜನಿಕ ಅನುಕೂಲತೆ, ಮೋಕ್ಷ ಗೃಹ, ಗೋಡೋಲಿಯಾ ಗೇಟ್, ಭೋಗಶಾಲಾ, ಪುರೋಹಿತರು ಮತ್ತು ಆಧ್ಯಾತ್ಮಿಕ ಪುಸ್ತಕಗಳ ಸಂಗ್ರಹಾಲಯವನ್ನು ಒಳಗೊಂಡಿದೆ.

ಇದನ್ನೂ ಓದಿ: Political Analysis: ಉತ್ತರ ಪ್ರದೇಶದಲ್ಲೀಗ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯದ್ದೇ ಮಾತು, ಇದರ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗುವುದೇ? 

ಇನ್ನು 3 ತಿಂಗಳಲ್ಲಿ ಪ್ರಧಾನಿ ಮೋದಿ ಹೃದಯಕ್ಕೆ ಹತ್ತಿರವಾದ ‘ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್’ ತಲೆಯೆತ್ತಲಿದೆ! ವಿವರ ಇಲ್ಲಿದೆ

Published On - 7:26 pm, Tue, 7 December 21

Click on your DTH Provider to Add TV9 Kannada