ವಯನಾಡ್ ಭೂಕುಸಿತ: ಚೂರಲ್‌ಮಲ ಶಾಖೆಯಲ್ಲಿ ಸಂತ್ರಸ್ತರ ಸಾಲ ಮನ್ನಾ ಮಾಡಲಿದೆ ಕೇರಳ ಬ್ಯಾಂಕ್
ಕೇರಳ ಬ್ಯಾಂಕ್ ಚೂರಲ್‌ಮಲ ಶಾಖೆಯ ಸಾಲಗಾರರು ಮೃತಪಟ್ಟಿದ್ದರೆ, ಮನೆ, ಆಸ್ತಿ ಕಳೆದುಕೊಂಡವರ ಸಂಪೂರ್ಣ ಸಾಲ ಮನ್ನಾ ಮಾಡಲು ಬ್ಯಾಂಕ್ ಆಡಳಿತ ಸಮಿತಿ ಸಭೆ ನಿರ್ಧರಿಸಿದೆ. ಕೇರಳ ಬ್ಯಾಂಕ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ ನೀಡಿದ್ದು ಅಲ್ಲದೆ, ಕೇರಳ ಬ್ಯಾಂಕ್‌ನ ನೌಕರರು ಸ್ವಯಂಪ್ರೇರಿತರಾಗಿ ಐದು ದಿನಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ತಿರುವನಂತಪುರಂ ಆಗಸ್ಟ್ 12: ವಯನಾಡು (Wayanad landslide) ಜಿಲ್ಲೆಯ ಮುಂಡಕೈಯಲ್ಲಿ (mundakai) ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ ಕೇರಳ ಬ್ಯಾಂಕ್ (Kerala Bank) ಚೂರಲ್‌ಮಲ (chooralmala) ಶಾಖೆಯ ಸಂತ್ರಸ್ತರ ಸಾಲವನ್ನು ಮನ್ನಾ ಮಾಡಲಿದೆ. ಕೇರಳ ಬ್ಯಾಂಕ್ ಚೂರಲ್‌ಮಲ ಶಾಖೆಯ ಸಾಲಗಾರರು ಮೃತಪಟ್ಟಿದ್ದರೆ, ಮನೆ, ಆಸ್ತಿ ಕಳೆದುಕೊಂಡವರ ಸಂಪೂರ್ಣ ಸಾಲ ಮನ್ನಾ ಮಾಡಲು ಬ್ಯಾಂಕ್ ಆಡಳಿತ ಸಮಿತಿ ಸಭೆ ನಿರ್ಧರಿಸಿದೆ. ಕೇರಳ ಬ್ಯಾಂಕ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ ನೀಡಿದ್ದು ಅಲ್ಲದೆ, ಕೇರಳ ಬ್ಯಾಂಕ್‌ನ ನೌಕರರು ಸ್ವಯಂಪ್ರೇರಿತರಾಗಿ ಐದು ದಿನಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ಜುಲೈ 30 ರಂದು ಸಂಭವಿಸಿದ ದುರಂತದಲ್ಲಿ ಇದುವರೆಗೆ 229 ಮೃತ ದೇಹಗಳು ಮತ್ತು 198 ದೇಹದ ಭಾಗಗಳು ಸೇರಿದಂತೆ 427 ಶವಗಳು ಪತ್ತೆಯಾಗಿವೆ. ಇನ್ನೂ 130 ಮಂದಿ ಪತ್ತೆಯಾಗಬೇಕಿದೆ. ಜಿಲ್ಲೆಯ ವಿವಿಧ ಪರಿಹಾರ ಶಿಬಿರಗಳಲ್ಲಿ 4000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.
20 ಸೆಂಟ್ಸ್ ಜಮೀನು ದಾನ ನೀಡಿದ ಮಹಿಳೆ
ವಯನಾಡ್ ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ಆಶ್ರಯ ನೀಡಲು ಮಹಿಳೆಯೊಬ್ಬರು ಜಮೀನು ದಾನ ಮಾಡಿದ್ದಾರೆ. ವಯನಾಡಿನ ಕೊಟ್ಟತರಾ ಮೂಲದ ಅಜಿಶಾ ಹರಿದಾಸ್ ಮತ್ತು ಅವರ ಪತಿ ಹರಿದಾಸ್ ಅವರು 20 ಸೆಂಟ್ಸ್ ಭೂಮಿಯನ್ನು ಸಂತ್ರಸ್ತರಿಗಾಗಿ ಬಿಟ್ಟು ಕೊಟ್ಟಿದ್ದಾರೆ. ದಂಪತಿ ಜಮೀನಿನ ದಾಖಲೆಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದ್ದಾರೆ.
ಅಜಿಶಾ ಪ್ರಸ್ತುತ ತ್ರಿಶೂರ್ ಕೆಎಸ್‌ಎಫ್‌ಇ ಸಂಜೆ ಶಾಖೆಯಲ್ಲಿ ವಿಶೇಷ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷಿಕ ಕುಟುಂಬದಲ್ಲಿ ಜನಿಸಿದ ಅಜಿಶಾ ಅವರ ತಂದೆ ಜಯಚಂದ್ರನ್ ಮತ್ತು ತಾಯಿ ಉಷಾ ಕುಮಾರಿ ಅವರು ಮನೆ ನಿರ್ಮಿಸಲು 2009 ರಲ್ಲಿ ವಯನಾಡಿನ ಕಂಪಲಕ್ಕಾಡ್‌ನಲ್ಲಿ 20 ಸೆಂಟ್ಸ್ ಭೂಮಿಯನ್ನು ಖರೀದಿಸಿದ್ದರು.
ಅಣ್ಣನ ಮನೆಯಲ್ಲಿ ತಂದೆ-ತಾಯಿ ಸುರಕ್ಷಿತವಾಗಿರುವುದರಿಂದ ವಯನಾಡಿನಲ್ಲಿ ಸರ್ವಸ್ವ ಕಳೆದುಕೊಂಡವರಿಗೆ ಭೂಮಿಯನ್ನು ತಮ್ಮ ಹೆಸರಿಗೆ ಕೊಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಅಜಿಷಾ ಮತ್ತು ಆಕೆಯ ಪತಿ ಹರಿದಾಸ್ ಹೇಳಿದ್ದಾರೆ.
ಮುಂದುವರಿದ ಶೋಧ ಕಾರ್ಯ
ಮೇಪ್ಪಾಡಿ: ಕೇರಳವನ್ನು ಬೆಚ್ಚಿಬೀಳಿಸಿದ ಭೂಕುಸಿತ ದುರಂತ ಸಂಭವಿಸಿದ ವಯನಾಡು ಜಿಲ್ಲೆಯ ಮುಂಡಕೈ-ಚೂರಲ್ ಮಲ ಪ್ರದೇಶದಲ್ಲಿ ಸೋಮವಾರವೂ ಶೋಧ ಕಾರ್ಯ ಮುಂದುವರಿದಿದೆ. ಕಟ್ಟಡದ ಅವಶೇಷಗಳ ನಡುವೆ ಮತ್ತು ನೆಲದಡಿಯಲ್ಲಿ ಯಾರಾದರೂ ಸಿಕ್ಕಿಹಾಕಿಕೊಂಡಿದ್ದಾರೆಯೇ ಎಂದು ಪತ್ತೆ ಹಚ್ಚಲಾಗುತ್ತದೆ. ದಾಖಲೆಗಳನ್ನು ಕಳೆದುಕೊಂಡವರಿಗೆ ದಾಖಲೆಗಳನ್ನು ಪಡೆಯಲು ಇಂದು ಮೂರು ಶಿಬಿರಗಳನ್ನು ನಡೆಸಲಾಗುತ್ತಿದೆ
ಇಂದು, ಚಾಲಿಯಾರ್ ದಡದಲ್ಲಿ ಹುಡುಕಾಟ ನಡೆಯುತ್ತಿದೆ. ಸರ್ಕಾರಿ ಸಂಸ್ಥೆಗಳು ಮಾತ್ರ ಈ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತವೆ. ಉಳಿದ ಸ್ಥಳಗಳಲ್ಲೂ ಸ್ವಯಂಸೇವಕರು ಹುಡುಕಾಟ ನಡೆಸುತ್ತಿದ್ದಾರೆ. ಇಂದಿನ ಶೋಧದ ವೇಳೆ ಚಾಲಿಯಾರ್ ತೀರದಲ್ಲಿ ದೇಹದ ಒಂದು ಭಾಗ ಪತ್ತೆಯಾಗಿದೆ. ಇರುಚ್ಚುಕುತ್ತಿ ಪ್ರದೇಶದಲ್ಲಿ ದೇಹದ ಭಾಗ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.
ಇದನ್ನೂ ಓದಿ: ಹಿಂಡೆನ್‌ಬರ್ಗ್ ವಿವಾದ: ಕಾಂಗ್ರೆಸ್‌ನೊಂದಿಗೆ ಸಂಪರ್ಕವಿದೆ ಎಂದು ಬಿಜೆಪಿ ಆಗಾಗ್ಗೆ ಆರೋಪಿಸುವ ಜಾರ್ಜ್ ಸೊರೊಸ್ ಯಾರು?
ದುರಂತದಲ್ಲಿ ಬಲಿಯಾದವರ ದೇಹದ ಭಾಗಗಳು ಮತ್ತು ಗುರುತಿಸಲಾಗದ ಶವಗಳ ಅನುವಂಶಿಕ (ಡಿಎನ್ಎ) ಪರೀಕ್ಷೆಯ ಫಲಿತಾಂಶಗಳು ಇಂದಿನಿಂದ ಪ್ರಕಟವಾಗಲಿದೆ. ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ 90 ಮಂದಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ನೋಡಿ ಮೃತರನ್ನು ಗುರುತಿಸಬಹುದು ಎಂಬ ನಂಬಿಕೆ ಇದೆ. ಹಿಂದಿನ ದಿನದಿಂದ ಫಲಿತಾಂಶ ಬಂದಿದ್ದು, ಸೋಮವಾರದಿಂದ ಪ್ರಕಟಿಸಲಾಗುವುದು ಎಂದು ಸಚಿವ ಮುಹಮ್ಮದ್ ರಿಯಾಝ್ ಕಳೆದ ದಿನ ಹೇಳಿದ್ದರು.
ಭಾನುವಾರ ಸಾರ್ವಜನಿಕ ಹುಡುಕಾಟದ ವೇಳೆ ದೇಹದ ಮೂರು ಭಾಗಗಳು ಪತ್ತೆಯಾಗಿವೆ. ಪರಪ್ಪನ್ ಪಾರ ಬಳಿ ಪತ್ತೆಯಾದ ಮೂರು ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ದೇಹಭಾಗಗಳು ಮನುಷ್ಯರದ್ದೇ? ಎಂಬುದು ಮರಣೋತ್ತರ ಪರೀಕ್ಷೆಯಿಂದ ಮಾತ್ರ ಗೊತ್ತಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ