ಚಿತ್ರರಂಗದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿ ಕುರಿತ ವರದಿಗೆ ಕೇರಳ ಹೈಕೋರ್ಟ್ ತಡೆ
ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳ ಕುರಿತು ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಆ ವರದಿಯನ್ನು ಬಹಿರಂಗಪಡಿಸುವಂತೆ ರಾಜ್ಯ ಮಾಹಿತಿ ಆಯೋಗಕ್ಕೆ (ಎಸ್‌ಐಸಿ) ಪತ್ರಕರ್ತರು ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿದ್ದಾರೆ.
ತಿರುವನಂತಪುರಂ: ಸಿನಿಮಾ ರಂಗದಲ್ಲಿ ಮಹಿಳೆಯರ ಕೆಲಸದ ಸಮಸ್ಯೆಗಳ ಬಗ್ಗೆ ಸಲ್ಲಿಸಲಾಗಿದ್ದ ನ್ಯಾ. ಹೇಮಾ ಸಮಿತಿಯ ವರದಿಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಈ ವರದಿಯ ವಿವರಗಳನ್ನು ಬಹಿರಂಗಪಡಿಸುವಂತೆ ಪತ್ರಕರ್ತರು ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಪಿ.ಎಂ ಮನೋಜ್ ಈಗ ಒಂದು ವಾರದ ಅವಧಿಗೆ ಆ ವರದಿಯ ಬಿಡುಗಡೆಗೆ ತಡೆ ನೀಡಿದ್ದಾರೆ.
ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಂ. ಮನೋಜ್ ರಾಜ್ಯ ಮಾಹಿತಿ ಆಯೋಗದ ಆದೇಶವನ್ನು ಪ್ರಶ್ನಿಸಿ ಚಲನಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಸಲ್ಲಿಸಿದ ರಿಟ್ ಅರ್ಜಿಯ ಮೇಲೆ ಆದೇಶ ಹೊರಡಿಸಿದ್ದಾರೆ. ಆ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸುವಂತೆ ಕೇರಳ ಸರ್ಕಾರ, ಎಸ್‌ಐಸಿ ಮತ್ತು ಇತರ ಪ್ರತಿವಾದಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಇದನ್ನೂ ಓದಿ: Shocking Video: ಸೋಫಾ ಮೇಲೆ ಮಲಗಿದ್ದ ಯುವತಿ ಬಳಿ ಇದ್ದಕ್ಕಿದ್ದಂತೆ ಬಂದ ಮೊಸಳೆ; ಕೊನೆಗೆ ಏನಾಯ್ತು?
ಇಂದು (ಜುಲೈ 24) ಕೇರಳ ಹೈಕೋರ್ಟ್ ರಾಜ್ಯ ಮಾಹಿತಿ ಆಯೋಗದ (SIC) ಆದೇಶವನ್ನು ಒಂದು ವಾರ ತಡೆಹಿಡಿದಿದೆ. ಕೇರಳ ಸರ್ಕಾರವು ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳ ಕುರಿತು ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿಯನ್ನು ಸೀಮಿತ ತಿದ್ದುಪಡಿಗಳೊಂದಿಗೆ ಬಹಿರಂಗಪಡಿಸಬೇಕು ಎಂದಿದೆ.
ವರದಿಯ ಬಹಿರಂಗಪಡಿಸುವಿಕೆಯು ಮೂಲಭೂತ ಗೌಪ್ಯತೆ ಹಕ್ಕುಗಳು ಮತ್ತು ಸಾಕ್ಷಿಗಳಿಗೆ ಭರವಸೆ ನೀಡಿದ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
2017ರಲ್ಲಿ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಹೇಮಾ ಸಮಿತಿಯು 2019ರ ಡಿಸೆಂಬರ್ 31ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಆ ಮಾಹಿತಿಯ ಸೂಕ್ಷ್ಮ ಸ್ವರೂಪದ ಆಧಾರದ ಮೇಲೆ ಆ ವರದಿಯನ್ನು ಸಾರ್ವಜನಿಕಗೊಳಿಸಿರಲಿಲ್ಲ.
ಇದನ್ನೂ ಓದಿ: Shocking News: ಹೆಂಡತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಗಂಡನಿಗೆ 7 ವರ್ಷ ಜೈಲು ಶಿಕ್ಷೆ!
ಮಲಯಾಳಂ ಚಲನಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಅವರು ಆ ವರದಿಯ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆ ವರದಿಯನ್ನು ಬಹಿರಂಗಪಡಿಸುವುದರಿಂದ ಚಲನಚಿತ್ರೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ವಾದಿಸಿದ್ದಾರೆ.
“ಈ (SIC) ಆದೇಶವು ಅನುಷ್ಠಾನಗೊಂಡರೆ, ಚಲನಚಿತ್ರೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ವ್ಯಕ್ತಿಗಳ ಗೌಪ್ಯತೆಗೆ ಧಕ್ಕೆಯುಂಟುಮಾಡುತ್ತದೆ, ಗೌಪ್ಯತೆಯನ್ನು ಉಲ್ಲಂಘಿಸುತ್ತದೆ. ಇದು ಚಿತ್ರೋದ್ಯಮದ ವ್ಯಕ್ತಿಗಳ ಖ್ಯಾತಿ ಮತ್ತು ಜೀವನೋಪಾಯಕ್ಕೆ ಹಾನಿಯುಂಟುಮಾಡುತ್ತದೆ” ಎಂದು ಸಜಿಮೋನ್ ಪರಾಯಿಲ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಾಹಿತಿ ಆಯೋಗದ ಪರವಾಗಿ ವಕೀಲ ಎಂ.ಅಜಯ್ ವಾದ ಮಂಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ