ರಾಹುಲ್ ಗಾಂಧಿ ಮಾತನಾಡಿದಾಗಲೆಲ್ಲಾ ಅವರ ಪಕ್ಷದ ಸಂಸದರು ಮುಜುಗರಕ್ಕೊಳಗಾಗುತ್ತಾರೆ: ಕಿರಣ್ ರಿಜಿಜು ಕಟು ಟೀಕೆ
‘‘ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡುವಾಗಲೆಲ್ಲಾ ಅವರ ಪಕ್ಷದ ನಾಯಕರು ಮುಜುಗರಕ್ಕೊಳಗಾಗುತ್ತಾರೆ’’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಟುವಾಗಿ ಟೀಕಿಸಿದ್ದಾರೆ.ರಾಹುಲ್ ಗಾಂಧಿ ತಮ್ಮದೇ ಪಕ್ಷದ ನಾಯಕರ ಮಾತನ್ನು ಕೇಳುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಎಎನ್ಐಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ನಾನು ಸುಮ್ಮನೇ ಕಾಂಗ್ರೆಸ್ ಪಕ್ಷದ ನಾಯಕರನ್ನು ದೂಷಿಸುವುದಿಲ್ಲ ಯಾಕೆಂದರೆ ಅವರೆಲ್ಲರೂ ರಾಹುಲ್ ಗಾಂಧಿ ಹೇಳಿದಂತೆಯೇ ನಡೆದುಕೊಳ್ಳಬೇಕು.ರಾಹುಲ್ ಯಾರ ಮಾತನ್ನೂ ಕೇಳುವುದಿಲ್ಲ.

ನವದೆಹಲಿ, ಆಗಸ್ಟ್ 24: ‘‘ಲೋಕಸಭೆಯಲ್ಲಿ ರಾಹುಲ್ ಗಾಂಧಿ(Rahul Gandhi) ಮಾತನಾಡುವಾಗಲೆಲ್ಲಾ ಅವರ ಪಕ್ಷದ ಸಂಸದರು ಮುಜುಗರಕ್ಕೊಳಗಾಗುತ್ತಾರೆ’’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಟುವಾಗಿ ಟೀಕಿಸಿದ್ದಾರೆ.ರಾಹುಲ್ ಗಾಂಧಿ ತಮ್ಮದೇ ಪಕ್ಷದ ನಾಯಕರ ಮಾತನ್ನು ಕೇಳುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಎಎನ್ಐಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ನಾನು ಸುಮ್ಮನೇ ಕಾಂಗ್ರೆಸ್ ಪಕ್ಷದ ನಾಯಕರನ್ನು ದೂಷಿಸುವುದಿಲ್ಲ ಯಾಕೆಂದರೆ ಅವರೆಲ್ಲರೂ ರಾಹುಲ್ ಗಾಂಧಿ ಹೇಳಿದಂತೆಯೇ ನಡೆದುಕೊಳ್ಳಬೇಕು.ರಾಹುಲ್ ಯಾರ ಮಾತನ್ನೂ ಕೇಳುವುದಿಲ್ಲ.
ರಾಹುಲ್ ಗಾಂಧಿ ಏನಾದರೂ ಹೇಳಿದಾಗಲೆಲ್ಲಾ ಅವರ ಎಲ್ಲಾ ಸಂಸದರು ಮುಜುಗರಕ್ಕೊಳಗಾಗುತ್ತಾರೆ. ಪ್ರಜಾಪ್ರಭುತ್ವದಲ್ಲಿ, ವಿರೋಧ ಪಕ್ಷವು ಬಲವಾಗಿರಬೇಕು.ಅವರು ವಿರೋಧ ಪಕ್ಷದ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರು.
ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದದ ಬಗ್ಗೆ ಅಸಂಬದ್ಧವಾಗಿ ಮಾತನಾಡಿದಕ್ಕಾಗಿ ಮಾಜಿ ಕಾಂಗ್ರೆಸ್ ಅಧ್ಯಕ್ಷರನ್ನು ಸುಪ್ರೀಂ ಕೋರ್ಟ್ ಗದರಿಸಿತ್ತು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಾಗಲೆಲ್ಲಾ ಸರ್ಕಾರ ಮತ್ತು ಸಂಸ್ಥೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ ಎಂದು ಹೇಳಿದರು.
ಗಾಂಧಿಯವರು ನ್ಯಾಯಾಂಗ ಮತ್ತು ಭಾರತೀಯ ಚುನಾವಣಾ ಆಯೋಗದ (ECI) ಮೇಲೆ ದಾಳಿ ಮಾಡಿದ್ದಕ್ಕಾಗಿಯೂ ಅವರು ಟೀಕಿಸಿದರು. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮತ್ತಷ್ಟು ಓದಿ: ಸಚಿವರನ್ನು ವಜಾಗೊಳಿಸುವ ಮಸೂದೆಯಲ್ಲಿ ಮೋದಿ ತಮಗೆ ವಿನಾಯಿತಿ ಬೇಡ ಎಂದಿದ್ದರು; ಕಿರಣ್ ರಿಜಿಜು
ರಾಹುಲ್ ಗಾಂಧಿ ತುಂಬಾ ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದ್ದಾರೆ. ಭಾರತ ಸರ್ಕಾರವನ್ನು ಅಸ್ಥಿರಗೊಳಿಸಲು ಒಂದು ಟ್ರಿಲಿಯನ್ ಡಾಲರ್‌ಗಳನ್ನು ಇಡಲಾಗಿದೆ ಎಂದು ಜಾರ್ಜ್ ಸೊರೊಸ್ ಹೇಳುತ್ತಾರೆ. ಕೆನಡಾ, ಅಮೆರಿಕ, ಬ್ರಿಟನ್‌ನಲ್ಲಿ ಕುಳಿತಿರುವ ಭಾರತ ವಿರೋಧಿ ಖಲಿಸ್ತಾನಿ ಶಕ್ತಿಗಳು ಮತ್ತು ಅನೇಕ ಎಡಪಂಥೀಯ ಸಂಘಟನೆಗಳು ದೇಶದ ವಿರುದ್ಧ ಕೆಲಸ ಮಾಡಲು ಪಿತೂರಿ ನಡೆಸುತ್ತಿವೆ.
ಕಿರಣ್ ರಿಜಿಜು ಮಾತು
#WATCH | Delhi | Union Minister Kiren Rijiju says, “Rahul Gandhi is going on a very dangerous track. George Soros says that one trillion dollars are kept to destabilise the Indian government. The anti-India Khalistan force sitting in Canada, the US, the UK, and many Left… pic.twitter.com/47xegH7diq
— ANI (@ANI) August 24, 2025
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಿ ದೇಶವನ್ನು ದುರ್ಬಲಗೊಳಿಸುತ್ತಿವೆ. ಇದು ತುಂಬಾ ಕಳವಳಕಾರಿ. ಆದರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಾರೂ ದೇಶವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




