AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನನ್ನು ಕಳೆದುಕೊಂಡರೆ ಆಗುವ ನೋವು ಎಂಥದ್ದೆಂದು ನನಗೆ ಅರ್ಥವಾಗುತ್ತದೆ; ರಾಹುಲ್​ ಗಾಂಧಿಗೆ ಸ್ಪಂದಿಸಿದ ಬಿಜೆಪಿ ಸಂಸದ

ದೆಹಲಿ: ನಿನ್ನೆ (ಜನವರಿ 2) ಸಂಸತ್ತು ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು. ಅದು ಬಿಜೆಪಿ ಸಂಸದ ಕಮಲೇಶ್​ ಪಾಸ್ವಾನ್​ ಮತ್ತು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯ (Congress Leader Rahul Gandhi) ನಡುವಿನ ಒಂದು ಸನ್ನಿವೇಶ.  ಬಜೆಟ್​ ಅಧಿವೇಶನಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ ಕೋವಿಂದ್​ ಮಾಡಿದ್ದ ಭಾಷಣದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ದೇಶದ ಎಲ್ಲ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುತ್ತಿದ್ದೀರಿ. ಇದಕ್ಕೆ […]

ಅಪ್ಪನನ್ನು ಕಳೆದುಕೊಂಡರೆ ಆಗುವ ನೋವು ಎಂಥದ್ದೆಂದು ನನಗೆ ಅರ್ಥವಾಗುತ್ತದೆ; ರಾಹುಲ್​ ಗಾಂಧಿಗೆ ಸ್ಪಂದಿಸಿದ ಬಿಜೆಪಿ ಸಂಸದ
ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್​ ಮತ್ತು ರಾಹುಲ್​ ಗಾಂಧಿ
TV9 Web
| Edited By: |

Updated on:Feb 03, 2022 | 11:16 AM

Share

ದೆಹಲಿ: ನಿನ್ನೆ (ಜನವರಿ 2) ಸಂಸತ್ತು ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು. ಅದು ಬಿಜೆಪಿ ಸಂಸದ ಕಮಲೇಶ್​ ಪಾಸ್ವಾನ್​ ಮತ್ತು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯ (Congress Leader Rahul Gandhi) ನಡುವಿನ ಒಂದು ಸನ್ನಿವೇಶ.  ಬಜೆಟ್​ ಅಧಿವೇಶನಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ ಕೋವಿಂದ್​ ಮಾಡಿದ್ದ ಭಾಷಣದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ದೇಶದ ಎಲ್ಲ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುತ್ತಿದ್ದೀರಿ. ಇದಕ್ಕೆ ಖಂಡಿತ ಸೂಕ್ತ ಪ್ರತಿಕ್ರಿಯೆ ಪಡೆಯುತ್ತೀರಿ ಎಂದು ಎಚ್ಚರಿಕೆ ನೀಡಿದರು.  ಅಷ್ಟೇ ಅಲ್ಲ,  ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) 32 ಗುಂಡೇಟು ತಿಂದರು. ನನ್ನ ತಂದೆ (ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ)ಯವರ ದೇಹವೂ ಛಿದ್ರವಾಗಿ ಹೋಯಿತು. ಆ ನೋವು ಏನೆಂದು ನನಗೆ ಗೊತ್ತು. ನೀವು ಅನಗತ್ಯವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತೀದ್ದೀರಿ. ಇದನ್ನು ನೀವು ಇಲ್ಲಿಗೆ ನಿಲ್ಲಿಸದೆ ಇದ್ದರೆ, ಸಮಸ್ಯೆಯನ್ನು ಸೃಷ್ಟಿಸುತ್ತೀರಿ ಎಂದು ಹೇಳಿದರು.  ನಿನ್ನೆ ಸಂಸತ್ತಿನಲ್ಲಿ ಮಾತನಾಡಿದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ದೇಶೀಯ ನೀತಿಗಳು ಮತ್ತು ವಿದೇಶಿ ನೀತಿಗಳು ದೋಷಪೂರಿತವಾಗಿವೆ. ಇದರಿಂದಾಗಿಯೇ ಚೀನಾ-ಪಾಕಿಸ್ತಾನ ದೇಶಗಳು ಒಟ್ಟಾಗಿ ಭಾರತದ ಮೇಲೆ ಆಕ್ರಮಣ ಮಾಡುವಂತಾಗುತ್ತಿದೆ ಎಂದು ಆರೋಪಿಸಿದರು.  

ರಾಹುಲ್​ ಗಾಂಧಿಯ ಈ ಮಾತುಗಳಿಗೆ ಸ್ಪಂದಿಸಿ, ಪ್ರತಿಕ್ರಿಯೆ ನೀಡಿದ ಬಿಜೆಪಿ ಎಂಪಿ ಕಮಲೇಶ್​ ಪಾಸ್ವಾನ್​, ನನಗೆ ತಂದೆಯನ್ನು ಕಳೆದುಕೊಂಡವರ ನೋವು ಎಂಥದ್ದು ಎಂಬುದು ಅರ್ಥವಾಗುತ್ತದೆ. ನನ್ನ ತಂದೆಯನ್ನೂ ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ. ರಾಹುಲ್​ ಗಾಂಧಿ ಹೇಳುತ್ತಿದ್ದಾರೆ ಅವರ ತಂದೆಯನ್ನು ಕೊಲ್ಲಲಾಯಿತು ಎಂದು. ಹಾಗೇ, ನನ್ನ ತಂದೆಯವರನ್ನೂ ರ್ಯಾಲಿಯಲ್ಲಿ ಹತ್ಯೆಮಾಡಲಾಯಿತು. ಆ ಸಂದರ್ಭದಲ್ಲಿ ಆಗುವ ಶಾಕ್​, ನೋವು, ದುಃಖ ಏನೆಂಬುದು ನನಗೆ ಗೊತ್ತು ಎಂದು ಹೇಳಿದರು. ಕಮಲೇಶ್​ ಪಾಸ್ವಾನ್​ ತಂದೆ ಓಂ ಪ್ರಕಾಶ್​ ಪಾಸ್ವಾನ್​. ಅವರು ಉತ್ತರಪ್ರದೇಶದ ಮಣಿರಾಮ್​ ಕ್ಷೇತ್ರದ ಶಾಸಕರಾಗಿದ್ದರು. 1996ರಲ್ಲಿ ಬನ್ಸ್​ಗಾಂವ್​​ನಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕಮಲೇಶ್​ ಪಾಸ್ವಾನ್​​ ತಮ್ಮ ಮಾತಿಗೆ ಸ್ಪಂದಿಸಿದ ಬಳಿಕ ಮತ್ತೆ ಮಾತನಾಡಿದ ರಾಹುಲ್ ಗಾಂಧಿ, ಪಾಸ್ವಾನ್​ ಜಿ ಅವರಿಗೆ ದಲಿತರ ನೋವು ಗೊತ್ತು. 3 ಸಾವಿರ ವರ್ಷಗಳಿಂದ ದಲಿತರನ್ನು ತುಳಿಯುತ್ತಿರುವವರು ಯಾರೆಂಬುದು ಅವರಿಗೆ ತಿಳಿದಿದೆ. ಆದರೆ ಅದನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ನನಗೆ ಅವರ ಬಗ್ಗೆ ಹೆಮ್ಮೆಯಿದೆ.  ನನ್ನೊಂದಿಗೆ ಅವರು ಹೃತ್ಪೂರ್ವಕವಾಗಿ ಮಾತನಾಡಿದರು. ಆದರೆ ಅವರು ಇರಬೇಕಾದ ಪಕ್ಷ ಬಿಜೆಪಿಯಲ್ಲ ಎಂದು ಹೇಳಿದರು.  ಮತ್ತೆ ರಾಹುಲ್ ಗಾಂಧಿಯವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಪಾಸ್ವಾನ್​,  ನಾನು ಬಿಜೆಪಿಯಲ್ಲಿ ಇರಬಾರದಿತ್ತು ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ನೆನಪಿರಲಿ, ನಾನು ರಾಹುಲ್​ ಗಾಂಧಿಯವರ ಮಾತುಗಳಿಗೆ ಪ್ರತಿಕ್ರಿಯೆ ಕೊಡಲು ಸಾಧ್ಯವಾಗಿದ್ದು ನಾನು ಸಂಸದನಾಗಿದ್ದಕ್ಕೆ. ನನ್ನ ಬಿಜೆಪಿ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್​ ನೀಡಿದ್ದಕ್ಕೆ ನಾನೂ ಮೂರು ಬಾರಿ ಸಂಸದನಾದೆ. ಇನ್ನೂ ಹೆಚ್ಚಿನದನ್ನು ಪಕ್ಷದಿಂದ ಬಯಸುವುದು ಯಾಕಾಗಿ? ಎಂದು ಹೇಳಿದರು.

ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು; ಪತ್ನಿ ಸ್ಥಳದಲ್ಲೇ ಜಲಸಮಾಧಿ -ಪತಿ ಪಾರು

Published On - 9:58 am, Thu, 3 February 22

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?