AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ರಸ್ತೆಯಲ್ಲಿ ಕಳ್ಳರನ್ನು ಬೆನ್ನಟ್ಟಿ ಹಿಡಿದ ಕೊಲ್ಲಂ ಪಂಚಾಯತ್ ಉಪಾಧ್ಯಕ್ಷೆ ಜಲಜಾ

ಕೊಲ್ಲಂ ಪಂಚಾಯತ್ ಉಪಾಧ್ಯಕ್ಷೆ ಜಲಜಾ ಕಳ್ಳರನ್ನು ಹಿಡಿದು ಸಾಹಸ ಪ್ರದರ್ಶಿಸಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಂಚೆ ಕಚೇರಿಯ ಆರ್ಡಿ ಏಜೆಂಟ್ ಆಗಿಯೂ ಅವರು ಕೆಲಸ ನಿರ್ವಹಿಸುತ್ತಿದ್ದರು. ತಮ್ಮ ಆರ್‌ಡಿ ಕ್ಲೈಂಟ್‌ಗಳಿಗಾಗಿ ಸುಮಾರು 2 ಲಕ್ಷ ರೂ. ನಗದನ್ನು ತೆಗೆದುಕೊಂಡು ಕುಂದರದಿಂದ ಕೊಟ್ಟಾರಕ್ಕರಕ್ಕೆ ಪ್ರಯಾಣಿಸುತ್ತಿದ್ದರು.

ಕೇರಳದ ರಸ್ತೆಯಲ್ಲಿ ಕಳ್ಳರನ್ನು ಬೆನ್ನಟ್ಟಿ ಹಿಡಿದ ಕೊಲ್ಲಂ ಪಂಚಾಯತ್ ಉಪಾಧ್ಯಕ್ಷೆ ಜಲಜಾ
ಜಲಜಾ
ನಯನಾ ರಾಜೀವ್
|

Updated on: Jun 18, 2025 | 2:24 PM

Share

ಕೊಲ್ಲಂ, ಜೂನ್ 18: ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಸದ್ದಿಲ್ಲದೇ ಇಬ್ಬರು ಮಹಿಳೆಯರು ಕೊಲ್ಲಂ ಉಪಾಧ್ಯಕ್ಷೆಯ ಚೀಲದಿಂದ ಭಾರಿ ಹಣವನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದರು. ಆದರೆ ಜಲಜಾ ಸುರೇಶ್ ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಂಚೆ ಕಚೇರಿಯ ಆರ್ಡಿ ಏಜೆಂಟ್ ಆಗಿಯೂ ಅವರು ಕೆಲಸ ನಿರ್ವಹಿಸುತ್ತಿದ್ದರು. ತಮ್ಮ ಆರ್‌ಡಿ ಕ್ಲೈಂಟ್‌ಗಳಿಗಾಗಿ ಸುಮಾರು 2 ಲಕ್ಷ ರೂ. ನಗದನ್ನು ತೆಗೆದುಕೊಂಡು ಕುಂದರದಿಂದ ಕೊಟ್ಟಾರಕ್ಕರಕ್ಕೆ ಪ್ರಯಾಣಿಸುತ್ತಿದ್ದರು.

ಕೊಟ್ಟಾರಕ್ಕರ ಬಳಿಯ ಮಣಿಕಂಠನ್ ಆಲ್ತಾರಾದಲ್ಲಿ ಬಸ್ ನಿಧಾನವಾಗುತ್ತಿದ್ದಂತೆ, ಜಲಜಾ ಇಳಿಯಲು ಮುಂದಾಗಿದ್ದರು.ಆಗ ಇಬ್ಬರು ಮಹಿಳೆಯರು ಬಾಗಿಲ ಬಳಿ ಬಂದು, ಆ ಊರಿನ ಹೆಸರನ್ನು ಕೇಳುವ ನೆಪದಲ್ಲಿ ದುಡ್ಡು ಕದ್ದಿದ್ದರು. ಆ ಮಹಿಳೆಯರ ಬಗ್ಗೆ ಜಲಜಾ ಅವರಿಗೆ ಅನುಮಾನ ಬಂದಿತ್ತು. ಹಾಗಾಗಿ ಕೂಡಲೇ ಬ್ಯಾಗ್ ತೆರೆದು ನೋಡಿದಾಗ ಅಲ್ಲಿ ಹಣ ನಾಪತ್ತೆಯಾಗಿತ್ತು. ಬ್ಯಾಗ್ ಜಿಪ್ ತೆರೆದಿತ್ತು.

ಜಲಜಾ ಅವರು ಒಂದು ಆಟೋವನ್ನು ನಿಲ್ಲಿಸಿ ಚಂದಮುಕ್ಕು ಬಸ್ ಹಿಂಬಾಲಿಸಲು ಕೇಳಿಕೊಂಡರು. ಆದರೆ ಅವರಿಗೆ ಟ್ರಾಫಿಕ್​ ಎದುರಾಗಿತ್ತು. ತಕ್ಷಣ ಸಂಚಾರಿ ಪೊಲೀಸರ ಬಳಿ ಮನವಿ ಮಾಡಿದಾಗ ಅವರು ಬೇರೆ ಮಾರ್ಗದ ಮೂಲಕ ಹೋಗಲು ಅವಕಾಶ ಮಾಡಿಕೊಟ್ಟರು. ಅಷ್ಟರಲ್ಲಾಗಲೇ ಅವರು ಕೂಡ ಆಟೋದಲ್ಲಿ ಓಡಿ ಹೋಗಲು ಹತ್ನಿಸುತ್ತಿದ್ದರು. ಜಲಜಾ ಅವರು ಆಟೋವನ್ನು ನಿಲ್ಲಿಸಿ ಸೀಟಿನಿಂದ ಅವರಿಬ್ಬರ ಸೀರೆ ಹಿಡಿದು ಎಳೆದಾಗ ಕಂತೆ ಕಂತೆ ನೋಟು ನೆಲಕ್ಕೆ ಬಿದ್ದಿತ್ತು.

ಮತ್ತಷ್ಟು ಓದಿ:ಸಿಎಂ ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ತಮಿಳುನಾಡಿನ ಗೋಬಿಚೆಟ್ಟಿಪಾಳ್ಯದ 45 ವರ್ಷದ ಶೆಲ್ವಿ ಮತ್ತು ಆಕೆಯ 27 ವರ್ಷದ ಮಗಳು ಅಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.ಇಷ್ಟಾದರೂ ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.ಈ ಘಟನೆ ನಂತರ ಅವರ ಚಿತ್ರಗಳನ್ನು ಕೇರಳದ 52ಸ್ಥಳಗಳಲ್ಲಿ ಡಿಸ್​​ಪ್ಲೇ ಮಾಡಲಾಗಿತ್ತು.

ಒಂದು ದಶಕಕ್ಕೂ ಹೆಚ್ಚು ಕಾಲ ಪಂಚಾಯತ್‌ನಲ್ಲಿ ಸೇವೆ ಸಲ್ಲಿಸಿರುವ ಮತ್ತು ಸುಮಾರು 25 ವರ್ಷಗಳ ಕಾಲ ಆರ್‌ಡಿ ಖಾತೆಗಳನ್ನು ನಿರ್ವಹಿಸುತ್ತಿರುವ ಜಲಜಾ ಅವರ ಬುದ್ಧಿವಂತಿಕೆ ಹಾಗೂ ಗಟ್ಟಿತನವನ್ನು ಎಲ್ಲರೂ ಶ್ಲಾಘಿಸಿದ್ದಾರೆ. ಇಬ್ಬರನ್ನೂ ಕೊಟ್ಟಾರಕ್ಕರ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ತನಿಖೆ ಮುಂದುವರೆದಂತೆ, ಅಧಿಕಾರಿಗಳು ತಾಯಿ-ಮಗಳ ಹೇಳಿಕೆಯನ್ನು ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ