ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ, ಗೆಲುವನ್ನು ಅರಗಿಸಿಕೊಳ್ಳುವುದೂ ತಿಳಿದಿದೆ: ಮೋದಿ

ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ ಆದರೆ ಗೆಲುವನ್ನು ಅರಗಿಸಿಕೊಳ್ಳುವ ಪರಿ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಎನ್​ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ನಾವು ಸೋತಿಲ್ಲ, ಗೆಲುವನ್ನು ಜೀರ್ಣಸಿಕೊಳ್ಳುವುದು ಹೇಗೆಂಬುದು ತಿಳಿದಿದೆ. ಸೋತವರನ್ನು ಅಪಹಾಸ್ಯ ಮಾಡುವುದು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂದರು.

ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ, ಗೆಲುವನ್ನು ಅರಗಿಸಿಕೊಳ್ಳುವುದೂ ತಿಳಿದಿದೆ: ಮೋದಿ
ನರೇಂದ್ರ ಮೋದಿ
Image Credit source: Mint

Updated on: Jun 07, 2024 | 3:25 PM

ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ ಆದರೆ ಗೆಲುವನ್ನು ಅರಗಿಸಿಕೊಳ್ಳುವ ಪರಿ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಎನ್​ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ನಾವು ಸೋತಿಲ್ಲ, ಗೆಲುವನ್ನು ಜೀರ್ಣಸಿಕೊಳ್ಳುವುದು ಹೇಗೆಂಬುದು ತಿಳಿದಿದೆ. ಸೋತವರನ್ನು ಅಪಹಾಸ್ಯ ಮಾಡುವುದು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂದರು.
ಲೋಕಸಭೆ ಚುನಾವಣೆಗೂ ಮುನ್ನವೂ ಎನ್​ಡಿಎ ಸರ್ಕಾರ ಇತ್ತು, ಲೋಕಸಭಾ ಚುನಾವಣೆ ಮುಗಿದ ಮೇಲೂ ಎನ್​ಡಿಎ ಸರ್ಕಾರವೇ ಇದೆ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮೋದಿ ಹೇಳಿದರು.

2024 ರ ಈ ಜನಾದೇಶವು ಇಂದಿನ ಪರಿಸ್ಥಿತಿಯಲ್ಲಿ ದೇಶವು ಎನ್‌ಡಿಎಯಲ್ಲಿ ಮಾತ್ರ ನಂಬಿಕೆಯನ್ನು ಹೊಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಸಾಮಾನ್ಯವಾಗಿ ಸಮ್ಮಿಶ್ರ ಸರ್ಕಾರ ಬರುತ್ತಿದ್ದಂತೆಯೇ ಪಕ್ಷಗಳ ನಡುವೆ ಒಡಕು, ಅಸಮಾಧಾನ ಎಲ್ಲವೂ ಸಾಮಾನ್ಯ ಆದರೆ ಎನ್​ಡಿಎ ಸರ್ಕಾರದಲ್ಲಿ ಒತ್ತಡ, ರಾಜಕೀಯ ಏನೇ ಇರಲಿ ದೇಶದ ಹಿತಾಸಕ್ತಿ ಬಲಿ ಕೊಡುವುದಿಲ್ಲ ಎಂದು ವಿರೋಧ ಪಕ್ಷವಾದ ಇಂಡಿ ಒಕ್ಕೂಟವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎನ್‌ಡಿಎ ಅತ್ಯಂತ ಯಶಸ್ವಿ ಮೈತ್ರಿಕೂಟ, ಮೂವತ್ತು ವರ್ಷಗಳಲ್ಲಿ ಎನ್‌ಡಿಎ ಮೂರು ಬಾರಿ ಪೂರ್ಣಾವಧಿಯನ್ನು ಪೂರೈಸಿದೆ. ನಾವು ನಾಲ್ಕನೇ ಅವಧಿಯನ್ನು ಪ್ರವೇಶಿಸುತ್ತಿದ್ದೇವೆ.

ಮತ್ತಷ್ಟು ಓದಿ: ಸರ್ಕಾರ ನಡೆಸಲು ಬಹುಮತ ಅಗತ್ಯ, ದೇಶ ಮುನ್ನಡೆಸಲು ಒಮ್ಮತ ಅಗತ್ಯ: ಮೋದಿ

ಎನ್‌ಡಿಎ ಅಧಿಕಾರ ಪಡೆಯಲು ಕೆಲವೇ ಜನರ ಕೂಟವಲ್ಲ. ದೇಶದ 22 ರಾಜ್ಯಗಳಲ್ಲಿ ಸರ್ಕಾರ ರಚಿಸುವ ಮೂಲಕ ಇಂದು ಜನರು ಎನ್‌ಡಿಎಗೆ ಸೇವೆ ಸಲ್ಲಿಸಲು ಅವಕಾಶವನ್ನು ನೀಡಿದ್ದಾರೆ ಎಂದು ಹೇಳಿದರು.

ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು. ಸರ್ಕಾರ ನಡೆಸಲು ಬಹುಮತ ಬೇಕು, ಅದು ಪ್ರಜಾಪ್ರಭುತ್ವದ ಏಕೈಕ ತತ್ವವಾಗಿದೆ. ದೇಶವನ್ನು ನಡೆಸಲು ಏಕಾಭಿಪ್ರಾಯ ಬಹಳ ಮುಖ್ಯ.
2019 ರಲ್ಲಿ, ನೀವೆಲ್ಲರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದಾಗ, ನಾನು ಒಂದು ವಿಷಯಕ್ಕೆ ಒತ್ತು ನೀಡಿದ್ದೆ ಅದು ನಂಬಿಕೆ. ಇಂದು ನೀವು ಮತ್ತೊಮ್ಮೆ ನನಗೆ ಈ ಜವಾಬ್ದಾರಿಯನ್ನು ನೀಡುತ್ತಿದ್ದೀರಿ ಎಂದರೆ ನಮ್ಮ ನಡುವಿನ ನಂಬಿಕೆಯ ಸೇತುವೆ ತುಂಬಾ ಬಲವಾಗಿದೆ. ಈ ಕ್ಷಣವೂ ಭಾವನಾತ್ಮಕವಾಗಿದೆ ಎಂದರು.

ಜೂನ್​ 1ರಂದು ಮತದಾನ ಪ್ರಕ್ರಿಯೆ ಮುಗಿದು ಜೂನ್​ 4 ರಂದು ಫಲಿತಾಂಶ ಹೊರ ಬಂದಿದೆ ಇದರ ನಡುವೆ ದೇಶವನ್ನು ಹಿಂಸೆಯ ಬೆಂಕಿಯಲ್ಲಿ ಸುಡುವ ಕೆಲಸ ಯೋಜನಾಬದ್ಧವಾಗಿ ನಡೆದಿದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us