AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಯಾ ಮೈತ್ರಿಕೂಟದ ನಾಯಕರನ್ನು ರಾವಣನ ಅನುಯಾಯಿಗಳು ಎಂದು ಕರೆದ ಮಧ್ಯಪ್ರದೇಶ ಸಿಎಂ

ಇಂಡಿಯಾ ಒಕ್ಕೂಟದ ನಾಯಕರನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ರಾವಣ ಹಾಗೂ ಕಂಸನ ಅನುಯಾಯಿಗಳು ಎಂದು ಉದ್ಘರಿಸಿದ್ದಾರೆ. ಶ್ರೀರಾಮನನ್ನು ನಂಬಬೇಡಿ, ಕೃಷ್ಣನನ್ನು ನಂಬಬೇಡಿ ಎಂದು ಹೇಳುವವರು, ಭಗವದ್ಗೀತೆ, ಗೋವಿನ ಬಗ್ಗೆ ನಂಬಿಕೆ ಇಲ್ಲದವರು ರಾವಣನಂತೆ ಮಾರುವೇಷ ತೊಟ್ಟು ಸೀತೆಯನ್ನು ಅಪಹರಿಸಿದಂತೆ ಇಲ್ಲಿ ಮತವನ್ನು ಅಪಹರಿಸಲು ಬಂದಿದ್ದಾರೆ ಎಂದರು.

ಇಂಡಿಯಾ ಮೈತ್ರಿಕೂಟದ ನಾಯಕರನ್ನು ರಾವಣನ ಅನುಯಾಯಿಗಳು ಎಂದು ಕರೆದ ಮಧ್ಯಪ್ರದೇಶ ಸಿಎಂ
ಮೋಹನ್ ಯಾದವ್Image Credit source: Deccan Herald
ನಯನಾ ರಾಜೀವ್
|

Updated on: May 20, 2024 | 10:07 AM

Share

ವಿರೋಧ ಪಕ್ಷದ ನಾಯಕರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್(Mohan Yadav) ರಾವಣನ ಅನುಯಾಯಿಗಳು ಎಂದು ಬಣ್ಣಿಸಿದ್ದಾರೆ. ಶ್ರೀರಾಮನನ್ನು ನಂಬಬೇಡಿ, ಕೃಷ್ಣನನ್ನು ನಂಬಬೇಡಿ ಎಂದು ಹೇಳುವವರು, ಭಗವದ್ಗೀತೆ, ಗೋವಿನ ಬಗ್ಗೆ ನಂಬಿಕೆ ಇಲ್ಲದವರು ರಾವಣನಂತೆ ಮಾರುವೇಷ ತೊಟ್ಟು ಸೀತೆಯನ್ನು ಅಪಹರಿಸಿದಂತೆ ಇಲ್ಲಿ ಮತವನ್ನು ಅಪಹರಿಸಲು ಬಂದಿದ್ದಾರೆ ಎಂದರು.

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ವರು ಬಲ್ಲಿಯಾ ಜಿಲ್ಲೆಯ ಶೇಖ್‌ಪುರ ಮತ್ತು ಬೈರಿಯಾದಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸನಾತನ ಧರ್ಮವನ್ನು ಅವಮಾನಿಸುತ್ತಿದೆ ಮತ್ತು ನಂಬಿಕೆಯೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದ ಅವರು ಇಂಡಿಯಾ ಒಕ್ಕೂಟವನ್ನು ಟೀಕಿಸಿದರು ಮತ್ತು ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಸೋಲಿಸಲು ಜನರಿಗೆ ಮನವಿ ಮಾಡಿದರು.

ರಾವಣ ನಕಲಿ ಸಾಧುವಿನ ವೇಷ ಧರಿಸಿ ಸೀತೆಯನ್ನು ಅಪಹರಿಸಿದಂತೆಯೇ ಕಾಂಗ್ರೆಸ್ ಮತ್ತು ಸಮಾಜವಾದಿ ಸಿದ್ಧಾಂತದವರೂ ನಕಲಿ ವೇಷ ಧರಿಸಿ ಮತ ಕೇಳಲು ಬರುತ್ತಿದ್ದಾರೆ.

ಮತ್ತಷ್ಟು ಓದಿ: ಪುರುಲಿಯಾದಲ್ಲಿ ಪ್ರಧಾನಿ ಮೋದಿ ಕಂಡು ಭಾವಪರವಶರಾದ ಜನರು; ರೋಡ್​ಶೋಗೆ ಭರ್ಜರಿ ಸ್ಪಂದನೆ

ಗಾಜಿಪುರದಲ್ಲಿ ಕಾರ್ಖಾನೆಯೇ ಇಲ್ಲ. ಇಲ್ಲಿ ಕೇವಲ ಒಂದು ಕುಟುಂಬದ ಲೂಟಿ ಉದ್ಯಮ ನಡೆಯುವುದರಿಂದ ಇಲ್ಲಿ ಕೈಗಾರಿಕೆ ನಡೆಯುತ್ತಿಲ್ಲ. ಭಯೋತ್ಪಾದನೆಯ ಅಬ್ಬರ ಸೃಷ್ಟಿಯಾಗಿದೆ. ನೆನಪಿರಲಿ, ಎಷ್ಟೇ ಅವ್ಯವಸ್ಥೆ ಮಾಡಿದರೂ ಈಗ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಎಲ್ಲದಕ್ಕೂ ಲೆಕ್ಕ ಸಿಗುತ್ತದೆ ಎಂದು ಹೇಳಿದರು.

ದೇಶವನ್ನು ತಿಂದು ಪಾಕಿಸ್ತಾನವನ್ನು ಹಾಡಿ ಹೊಗಳುತ್ತಿದ್ದರು. ಬಿಜೆಪಿ ಸರ್ಕಾರ ಆ ಪಾಕಿಸ್ತಾನಿಯ ಮನೆಗೆ ನುಗ್ಗಿ ಕೊಲ್ಲುವ ಸಾಹಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುವವರಿಗೆ ಈ ಬಾರಿ ಸಾರ್ವಜನಿಕರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!