AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸಗಾತಿ ಹೆಂಡತಿ! 8 ಜನರನ್ನು ಮದುವೆಯಾಗಿ, 9ನೇ ವಿವಾಹವಾಗುವಾಗ ಸಿಕ್ಕಿಬಿದ್ದ ಖತರ್ನಾಕ್ ಮಹಿಳೆ

ಮದುವೆಯಾಗಿ ಬರೋಬ್ಬರಿ 8 ಜನರನ್ನು ವಂಚಿಸಿದ್ದ ಸಮೀರಾ ಫಾತಿಮಾ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದು, 12 ವರ್ಷದ ಮಗುವನ್ನು ಹೊಂದಿದ್ದಾಳೆ. ಆದರೆ ಆಕೆ ಬೇರೆ ಬೇರೆ ಪುರುಷರಿಂದ ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಸದಸ್ಯೆಯಾಗಿದ್ದಳು. ಅವಳು ಸಿಕ್ಕಿಬೀಳುವ ಮೊದಲು ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದಳು. ಕೊನೆಗೂ ಆಕೆಯನ್ನು ಪೊಲೀಸರು ಸೆರೆಹಿಡಿದಿದ್ದು, ಈಕೆಯಿಂದ ಮೋಸಹೋದ ಗಂಡಂದಿರು ಬಂದು ತಮ್ಮ ಕತೆ ಹೇಳಿಕೊಳ್ಳುತ್ತಿದ್ದಾರೆ.

ಮೋಸಗಾತಿ ಹೆಂಡತಿ! 8 ಜನರನ್ನು ಮದುವೆಯಾಗಿ, 9ನೇ ವಿವಾಹವಾಗುವಾಗ ಸಿಕ್ಕಿಬಿದ್ದ ಖತರ್ನಾಕ್ ಮಹಿಳೆ
Sameera Fatima
ಸುಷ್ಮಾ ಚಕ್ರೆ
|

Updated on:Aug 01, 2025 | 10:59 PM

Share

ಮುಂಬೈ, ಆಗಸ್ಟ್ 1: ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ 35 ವರ್ಷದ ಸಮೀರಾ ಫಾತಿಮಾ ಎಂಬ ಮಹಿಳೆಯೊಬ್ಬಳು ಬರೋಬ್ಬರಿ 8 ಸಲ ಮದುವೆಯಾಗಿ, ಗಂಡಂದಿರಿಂದ ಹಣ ವಸೂಲಿ ಮಾಡಿ ಪರಾರಿಯಾಗಿದ್ದಳು. ಇದೀಗ 9ನೇ ಮದುವೆಯಾಗಲು (Wedding) ಸಿದ್ಧತೆ ನಡೆಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮದುವೆಯ ಹೆಸರಿನಲ್ಲಿ ಗಂಡಸರು ಮಹಿಳೆಯರಿಗೆ ಮೋಸ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಆದರೆ, ಈ ಖತರ್ನಾಕ್ ಮಹಿಳೆ ಪೊಲೀಸರನ್ನೇ ದಂಗುಬಡಿಸಿದ್ದಾಳೆ.

ಎಂಟು ಪುರುಷರನ್ನು ಮದುವೆಯಾಗಿ ಅವರಿಂದ ಲಕ್ಷ ಲಕ್ಷ ಸುಲಿಗೆ ಮಾಡಿದ ಆರೋಪದ ಮೇಲೆ ಸಮೀರಾ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಒಂಬತ್ತನೇ ಬಾರಿ ಮದುವೆಯಾಗುವ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಆರೋಪಿ ಸಮೀರಾ ಫಾತಿಮಾ ಅವರನ್ನು ಜುಲೈ 29ರಂದು ಬಂಧಿಸಲಾಗಿದೆ. ಫಾತಿಮಾ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದು, 12 ವರ್ಷದ ಮಗುವನ್ನು ಹೊಂದಿದ್ದಾಳೆ. ಆ ಮಗು ಯಾವ ಗಂಡನದ್ದು ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ: ಮನೆಯ ಬೆಡ್​ರೂಂನಲ್ಲಿ ತಂಗಿಯೊಂದಿಗೆ ಗುಪ್ತಚರ ಬ್ಯೂರೋ ಅಧಿಕಾರಿಯ ಶವ ಪತ್ತೆ; ಕೊಂದವರು ಯಾರು?

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸಮೀರಾ ಫಾತಿಮಾ ಮ್ಯಾಟ್ರಿಮೊನಿ ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಲಿಂ ಸಮುದಾಯದ ಪುರುಷರನ್ನು ಗುರಿಯಾಗಿಸಿಕೊಂಡಿದ್ದಳು. ಕಟ್ಟುಕಥೆಗಳ ಮೂಲಕ ಅವರನ್ನು ಭಾವನಾತ್ಮಕವಾಗಿ ಒಲಿಸಿಕೊಳ್ಳಲು ಆಕೆ ತನ್ನನ್ನು ವಿಧವೆ ಎಂದು ಹೇಳಿಕೊಳ್ಳುತ್ತಿದ್ದಳು. ನಂತರ ಅವರ ಮನವೊಲಿಸಿ ರಿಜಿಸ್ಟರ್ ಮದುವೆಯಾಗೋಣ ಎಂದು ಹೇಳಿ ಸರಳವಾಗಿ ಮದುವೆಯಾಗುತ್ತಿದ್ದಳು. ಮದುವೆಯ ನಂತರ ಗಂಡನಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತಿದ್ದಳು. ಅವರೊಂದಿಗೆ ತನ್ನ ಸಂಭಾಷಣೆಗಳನ್ನು ರೆಕಾರ್ಡ್ ಮಾಡುತ್ತಿದ್ದಳು. ನಂತರ, ಅದನ್ನು ತನಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಬ್ಲಾಕ್​ಮೇಲ್ ಮಾಡುತ್ತಿದ್ದಳು. ವ್ಯಭಿಚಾರ ಮತ್ತು ಕಿರುಕುಳದ ಆರೋಪದ ಮೇಲೆ ತಾನು ಮದುವೆಯಾದ ಪುರುಷರ ವಿರುದ್ಧ ಪ್ರಕರಣಗಳನ್ನು ಸಹ ದಾಖಲಿಸುತ್ತಿದ್ದಳು. ಕೊನೆಗೆ ಆ ಕೇಸ್ ಹಿಂಪಡೆಯಲು ಗಂಡನಿಂದಲೇ ಹಣ ವಸೂಲಿ ಮಾಡುತ್ತಿದ್ದಳು.

ಇದನ್ನೂ ಓದಿ: ಜೀವವನ್ನೇ ತೆಗೆದ ಚಿಕನ್ ಪಾರ್ಟಿ; ಹೆಂಡತಿಯ ಮನೆಯಲ್ಲಿ ಊಟ ಮಾಡಿದ ಗಂಡ ಸಾವು!

ಗುಲಾಮ್ ಪಠಾಣ್ ಎಂಬ ವ್ಯಕ್ತಿ 2024ರಲ್ಲಿ ಆಕೆಯ ವಿರುದ್ಧ ಕೇಸ್ ದಾಖಲಿಸಿದ್ದರು. 2022ರಲ್ಲಿ ಫಾತಿಮಾಳನ್ನು ಮದುವೆಯಾದ ಗುಲಾಮ್ ತನ್ನ ದೂರಿನಲ್ಲಿ, ಫಾತಿಮಾ ತನ್ನ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಿ ತನ್ನಿಂದ 10 ಲಕ್ಷ ರೂ.ಗಳ ಚೆಕ್ ಪಡೆದಿದ್ದಾಳೆ ಎಂದು ಹೇಳಿದ್ದರು. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಫಾತಿಮಾಳನ್ನು ಬೆನ್ನಟ್ಟಿ ನಾಗ್ಪುರದ ಸಿವಿಲ್ ಲೈನ್ಸ್‌ನಲ್ಲಿರುವ ಡಾಲಿ ಕಿ ಟ್ಯಾಪ್ರಿಯಲ್ಲಿ ಅವಳನ್ನು ಬಂಧಿಸಿದ್ದರು. ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಫಾತಿಮಾ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಆದರೆ ಕೊನೆಗೂ ಪೊಲೀಸರು ಅವಳನ್ನು ಬಂಧಿಸಿದರು. ಆಕೆಯನ್ನು ಬಂಧಿಸಿದ ನಂತರ ಇನ್ನೂ 7 ಜನರಿಗೆ ಇದೇ ರೀತಿ ವಂಚನೆ ಮಾಡಿದ್ದಾಳೆ ಎಂಬುದು ಗೊತ್ತಾಗಿದೆ. ಸದ್ಯದಲ್ಲೇ ಆಕೆ 9ನೇ ಮದುವೆಯಾಗಲು ತಯಾರಿ ನಡೆಸಿದ್ದಳು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 pm, Fri, 1 August 25

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ