AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮರಾವತಿಯಲ್ಲಿ ಕೆಮಿಸ್ಟ್ ಹತ್ಯೆ ಪ್ರಕರಣ: ಮಾಸ್ಟರ್‌ಮೈಂಡ್ ಇರ್ಫಾನ್ ಖಾನ್ ಗೆ ಜುಲೈ7ರ ವರೆಗೆ ಪೊಲೀಸ್ ಕಸ್ಟಡಿ

ಸಿಟಿ ಕೊತ್ವಾಲಿ ಪೊಲೀಸ್‌ನ ಹಿರಿಯ ಇನ್ಸ್‌ಪೆಕ್ಟರ್ ನೀಲಿಮಾ ಅರಾಜ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ವಾದಿಸಿದ್ದು ಇರ್ಫಾನ್ ಖಾನ್ ಇತರ ಆರೋಪಿಗಳನ್ನು ಕೊಲೆ ಮಾಡಲು ಪ್ರೇರೇಪಿಸಿದರು.

ಅಮರಾವತಿಯಲ್ಲಿ ಕೆಮಿಸ್ಟ್ ಹತ್ಯೆ ಪ್ರಕರಣ: ಮಾಸ್ಟರ್‌ಮೈಂಡ್ ಇರ್ಫಾನ್ ಖಾನ್ ಗೆ ಜುಲೈ7ರ ವರೆಗೆ ಪೊಲೀಸ್ ಕಸ್ಟಡಿ
ಇರ್ಫಾನ್ ಖಾನ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Jul 03, 2022 | 7:10 PM

Share

ಕಳೆದ ತಿಂಗಳು ಮಹಾರಾಷ್ಟ್ರದ (Maharashtra) ಅಮರಾವತಿ ಜಿಲ್ಲೆಯಲ್ಲಿ (Amravati killing) ಕೆಮಿಸ್ಟ್ ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್ ಇರ್ಫಾನ್ ಖಾನ್ (35) (Irfan Khan) ಅವರನ್ನು ಭಾನುವಾರ ಮಧ್ಯಾಹ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಜುಲೈ 7 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸಿಟಿ ಕೊತ್ವಾಲಿ ಪೊಲೀಸ್‌ನ ಹಿರಿಯ ಇನ್ಸ್‌ಪೆಕ್ಟರ್ ನೀಲಿಮಾ ಅರಾಜ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ವಾದಿಸಿದ್ದು ಇರ್ಫಾನ್ ಖಾನ್ ಇತರ ಆರೋಪಿಗಳನ್ನು ಕೊಲೆ ಮಾಡಲು ಪ್ರೇರೇಪಿಸಿದರು. ಇರ್ಫಾನ್ ಖಾನ್​​ನ ಮೊಬೈಲ್ ಫೋನ್, ದ್ವಿಚಕ್ರ ವಾಹನ ಮತ್ತು ಅಪರಾಧದಲ್ಲಿ ಬಳಸಲಾಗಿದೆ ನಾಲ್ಕು ಚಕ್ರ ವಾಹನ ಮರುಪಡೆಯಲು ಮತ್ತು ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲು ಇರ್ಫಾನ್ ಖಾನ್ ಅವರ ಕಸ್ಟಡಿ ಅಗತ್ಯವಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣದಲ್ಲಿ ಹೆಚ್ಚಿನ ಮಾಹಿತಿಗಳು ಯಾವುದಾದರೂ ಇದ್ದರೆ ಕಂಡುಹಿಡಿಯಲು ಅವರ ಮೊಬೈಲ್ ಫೋನ್ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನನ್ನ ಕ್ಲೈಂಟ್ ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಅವರು ಸ್ಥಳದಲ್ಲಿ ಇರಲಿಲ್ಲ ಮತ್ತು ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಆರೋಪಿ ಪರ ವಕೀಲ ಮುರ್ತುಜಾ ಆಜಾದ್ ಹೇಳಿದರು. ಆರೋಪಿ ಪರ ಇನ್ನೊಬ್ಬ ವಕೀಲ ವಾಸಿಂ ಶೇಖ್ ಕೂಡಾ ವಾದಿಸಿದ್ದಾರೆ.

ಕ್ರಿಮಿನಲ್ ಪಿತೂರಿಯ (ಐಪಿಸಿ) ಸೆಕ್ಷನ್ ಅನ್ನು ಅನ್ವಯಿಸಲಾಗಿದೆ ಎಂಬ ಪ್ರತಿವಾದವನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಿವಾದಿಸಿದ್ದು ಆರೋಪಿಯು ಮುಖ್ಯ ಸಂಚುಕೋರ ಎಂದು ಹೇಳಿದರು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಮ್ಯಾಜಿಸ್ಟ್ರೇಟ್ ಎ ಆರ್ ಕಲಹಾಪುರೆ ಅವರು ಇರ್ಫಾನ್ ಖಾನ್​​ನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ (54) ಜೂನ್ 21 ರಂದು ಕೊಲೆಯಾಗಿದೆ.

ಇರ್ಫಾನ್ ಖಾನ್ ಮತ್ತು ಪಶುವೈದ್ಯ ಯೂಸುಫ್ ಖಾನ್ (44) ಅವರ ಬಂಧನವನ್ನು ಪೊಲೀಸರು ಶನಿವಾರ ಖಚಿತಪಡಿಸಿದ್ದು, ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಅದೇ ದಿನ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಿತ್ತು.

ನಾಗ್ಪುರದಿಂದ ಬಂಧಿತನಾಗಿದ್ದ ಇರ್ಫಾನ್ ಖಾನ್, ಅಮರಾವತಿಯ ಪಠಾಣ್ ಚೌಕ್‌ನಲ್ಲಿರುವ ಕಮೇಲಾ ಪ್ರದೇಶದ ನಿವಾಸಿಯಾಗಿದ್ದು, ಬಂಧಿತ ಐವರು ಆರೋಪಿಗಳೊಂದಿಗೆ ಸಂಚು ರೂಪಿಸಿ ಅವರಿಗೆ ಕೆಲಸಗಳನ್ನು ನಿಯೋಜಿಸಿದ್ದರು. ಅವರು ವಾಹನಗಳು ಮತ್ತು ನಗದು ಮುಂತಾದ ವ್ಯವಸ್ಥಾಪನಾ ಬೆಂಬಲವನ್ನು ಸಹ ಒದಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಸ್ನೇಹಿತರು ಮತ್ತು ಅವರ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸ್ವಯಂಸೇವಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತರ ಆರೋಪಿ ಯೂಸುಫ್ ಖಾನ್ ಕೂಡ ಇರ್ಫಾನ್ ಖಾನ್ ಗೆ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ