ಬೇರೊಬ್ಬನನ್ನು ಮದುವೆಯಾಗಿದ್ದಕ್ಕೆ ಗೋರಖ್‌ಪುರದಲ್ಲಿ ಮಾಜಿ ಪ್ರೇಯಸಿಯನ್ನು ಕೊಂದ ಯುವಕ
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮಾಜಿ ಪ್ರೇಯಸಿಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಆ ವಧುವಿನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ವಾಸಿಸುತ್ತಿದ್ದ ವಿನಯ್ ನಿಶಾದ್ ಅಲಿಯಾಸ್ ದೀಪಕ್ ಎಂಬಾತನ ಮನೆಗೆ ಶ್ವಾನ ದಳವು ತೆರಳಿತ್ತು. ಕೊನೆಗೆ ಆತನನ್ನು ಬಂಧಿಸಲಾಯಿತು. ಆ ಯುವತಿಯ ಮದುವೆ ವಿಡಿಯೋದಿಂದ ಆರೋಪಿಯ ಸುಳಿವು ಸಿಕ್ಕಿತ್ತು.

ಗೋರಖ್‌ಪುರ, ನವೆಂಬರ್ 25: ಬೇರೊಬ್ಬನನ್ನು ಮದುವೆಯಾಗಿದ್ದಕ್ಕಾಗಿ ತನ್ನ “ಮಾಜಿ ಪ್ರೇಯಸಿ”ಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 23ರಂದು ಜಂಗಲ್ ರಸೂಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಶಿವಾನಿ ತನ್ನ ಸೋದರಸಂಬಂಧಿಯ ಮದುವೆಗೆ ಹೋಗಲು ತನ್ನ ತವರು ಮನೆಗೆ ಬಂದಿದ್ದರು. ಆಗ ಆಕೆಯನ್ನು ಭೇಟಿಯಾದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ (Murder) ಮಾಡಿದ್ದಾನೆ.
ಆ ಯುವತಿ ಮೇ ತಿಂಗಳಲ್ಲಿ ವಿವಾಹವಾಗಿದ್ದಳು. ಆಕೆಯ ಶವ ಆಕೆಯ ತವರು ಮನೆಯ ಬಾತ್ರೂಂನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಶಿವಾನಿಯ ದೇಹದ ಕುತ್ತಿಗೆಯ ಮೇಲೆ ಆಳವಾದ ಗಾಯದ ಗುರುತುಗಳಿದ್ದವು” ಎಂದು ಎಸ್‌ಪಿ ಉತ್ತರ ಜ್ಞಾನೇಂದ್ರ ಪ್ರಸಾದ್ ಹೇಳಿದ್ದಾರೆ. ತನಿಖೆಯ ಸಮಯದಲ್ಲಿ ಪೊಲೀಸರು ಮದುವೆಯ ವಿಡಿಯೋ ನೋಡಿದರು. ಇದರಲ್ಲಿ ಆರೋಪಿ ವಿನಯ್ ವಧು ಶಿವಾನಿಯ ಹತ್ತಿರ ನಿಂತಿದ್ದನ್ನು ನೋಡಿದರು. ಇದಾದ ನಂತರ ಸ್ವಲ್ಪ ಸಮಯ ಇಬ್ಬರೂ ಕಣ್ಮರೆಯಾಗಿದ್ದರು.
ಇದನ್ನೂ ಓದಿ: ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಮರಕ್ಕೆ ನೇತು ಹಾಕಿದ ಶಿಕ್ಷಕಿಯರು
ಆ ವಧುವಿನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ವಾಸಿಸುತ್ತಿದ್ದ ವಿನಯ್ ನಿಶಾದ್ ಅಲಿಯಾಸ್ ದೀಪಕ್ ಎಂಬಾತನ ಮನೆಗೆ ಶ್ವಾನ ದಳವು ತೆರಳಿತ್ತು. ಕೊನೆಗೆ ಆತನನ್ನು ಬಂಧಿಸಲಾಯಿತು. ಫೋನ್ ಕಾಲ್ ದಾಖಲೆಗಳು ಆ ರಾತ್ರಿ ಇಬ್ಬರೂ ಮಾತನಾಡಿದ್ದಾರೆಂದು ತೋರಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯಕರನಿಗಾಗಿ ಗಂಡನನ್ನು ಕೊಂದು ಡ್ರಮ್ನಲ್ಲಿರಿಸಿದ್ದ ಮುಸ್ಕಾನ್ಗೆ ಹೆಣ್ಣು ಮಗು ಜನನ
ಪೊಲೀಸರು ಕೊಲೆಗೆ ಬಳಸಲಾದ ಸುತ್ತಿಗೆಯನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಯ ಸಮಯದಲ್ಲಿ ವಿನಯ್ ಕೊನೆಗೂ ಆಕೆಯನ್ನು ಕೊಂದುಹಾಕಿದೆ ಎಂದು ಒಪ್ಪಿಕೊಂಡಿದ್ದಾನೆ. ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಆಕೆಯ ಕತ್ತು ಸೀಳುವ ಮೊದಲು ಗಂಟೆಗಟ್ಟಲೆ ಮಾತನಾಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




