AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ದೀಪದ ಓದಿನಿಂದ ಆರ್ಥಿಕ ತಜ್ಞನಾಗುವ ವರೆಗೆ: ಮನಮೋಹನ್ ಸಿಂಗ್ ಬಗ್ಗೆ ಕಡಿಮೆ ತಿಳಿದಿರುವ ವಿಚಾರಗಳಿವು

ತೀವ್ರ ಬಡತನದ ಹಿನ್ನೆಲೆಯಿಂದ ಬಂದ ಮನಮೋಹನ್ ಸಿಂಗ್, ಕಡು ಕಷ್ಟದ ಬಾಲ್ಯದ ದಿನಗಳನನ್ನು ಕಳೆದು ನಂತರ ಉನ್ನತ ಶಿಕ್ಷಣ ಪಡೆದು, ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಬೀದಿ ದೀಪದ ಬೆಳಕಿನಲ್ಲಿ ಬಾಲ್ಯದ ಓದು, ಕೇಂಬ್ರಿಡ್ಜ್‌ನಲ್ಲಿನ ವಿದ್ಯಾಭ್ಯಾಸ ಹಾಗೂ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಅವರ ಕುರಿತಾದ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ.

ಬೀದಿ ದೀಪದ ಓದಿನಿಂದ ಆರ್ಥಿಕ ತಜ್ಞನಾಗುವ ವರೆಗೆ: ಮನಮೋಹನ್ ಸಿಂಗ್ ಬಗ್ಗೆ ಕಡಿಮೆ ತಿಳಿದಿರುವ ವಿಚಾರಗಳಿವು
ಮನಮೋಹನ್ ಸಿಂಗ್
Ganapathi Sharma
|

Updated on:Dec 27, 2024 | 7:54 AM

Share

ನವದೆಹಲಿ, ಡಿಸೆಂಬರ್ 27: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಗಾಹ್ ಎಂಬ ಹಳ್ಳಿಯಲ್ಲಿ 26 ಸೆಪ್ಟೆಂಬರ್ 1932 ರಂದು ಜನಿಸಿದರು. ಬಡತನದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಡಾ. ಸಿಂಗ್ ಶಿಕ್ಷಣ, ಅರ್ಥಶಾಸ್ತ್ರ ಮತ್ತು ರಾಜಕೀಯದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. 1991 ರಲ್ಲಿ ಆರ್ಥಿಕ ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಭಾರತದ ಆರ್ಥಿಕತೆ ಹೊಸ ಮಗ್ಗುಲಿಗೆ ಹೊರಳುವಂತೆ ಮಾಡಿದರು.

ಬಡತನದ ಹಿನ್ನೆಲೆಯಿಂದ ಬಂದು ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ಮಹತ್ವದ ಕೊಡುಗೆ ನೀಡಿದ, 10 ವರ್ಷ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ನಾಯಕನ ಕುರಿತಾದ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ.

ಬೀದಿ ದೀಪದ ಕೆಳಗೆ ಕುಳಿತು ಓದುತ್ತಿದ್ದ ಮನಮೋಹನ್ ಸಿಂಗ್

ಮನಮೋಹನ್ ಸಿಂಗ್ ಬಾಲ್ಯದಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಗಾಹ್ ಗ್ರಾಮದಲ್ಲಿ ವಾಸಿಸಿದ್ದರು. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇರಲಿಲ್ಲ. ಗ್ರಾಮದಲ್ಲಿ ಶಾಲೆಯೂ ಇರಲಿಲ್ಲ. ದೂರದ ಶಾಲೆಗೆ ಹೋಗಲು ಮನಮೋಹನ್ ಸಿಂಗ್ ಬರಿಗಾಲಲ್ಲಿ ಮೈಲುಗಟ್ಟಲೆ ನಡೆದುಕೊಂಡು ಹೋಗುತ್ತಿದ್ದರು. ಅವರ ಮನೆಗೆ ವಿದ್ಯುತ್‌ ಸಂಪರ್ಕ ಸಹ ಇರಲಿಲ್ಲ. ಹೀಗಾಗಿ ಬೀದಿ ದೀಪದ ಕೆಳಗೆ ಕೂತು ಸಿಂಗ್‌ ಓದುತ್ತಿದ್ದರು.

ಬಾಲ್ಯದಲ್ಲೇ ತಾಯಿಯ ಕಳೆದುಕೊಂಡ ಬಾಲಕ

ಮನಮೋಹನ್ ಸಿಂಗ್ ತಂದೆ-ತಾಯಿ ಗುರುಮುಖ್‌ ಸಿಂಗ್‌ ಮತ್ತು ಅಮೃತ್‌ ಕೌರ್‌. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಮನಮೋಹನ್ ಸಿಂಗ್, ಅಜ್ಜಿ ಮಡಿಲಲ್ಲೇ ಬಾಲ್ಯ ಕಳೆದರು. ಮನಮೋಹನ್ ಸಿಂಗ್​​ಗೆ 13 ವರ್ಷ ತುಂಬುತ್ತಿದ್ದಂತೆಯೇ, ಕುಟುಂಬ ಭಾರತಕ್ಕೆ ವಲಸೆ ಬಂದಿತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ, ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ, ಅಂದರೆ ಪಾಕ್‌ನ ಗಾಹ್‌ನಿಂದ, ಅಮೃತಸರಕ್ಕೆ ವಲಸೆ ಬಂತು.

ವಿದ್ಯಾರ್ಥಿಯಾಗಿದ್ದಾಗ ಬಹಳ ನಾಚಿಕೆ ಸ್ವಭಾವ!

ಮನಮೋಹನ್ ಸಿಂಗ್ ವಿದ್ಯಾರ್ಥಿಯಾಗಿದ್ದಾಗ ಹೆಚ್ಚು ನಾಚಿಕೆಪಡುತ್ತಿದ್ದರಂತೆ! ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಸಮಯದಲ್ಲೂ ಮನಮೋಹನ್ ಶಾಂತ ಮತ್ತು ಸಂಯಮದ ವ್ಯಕ್ತಿಯಾಗಿದ್ದರು. ಕೇಂಬ್ರಿಡ್ಜ್ ಅಲುಮ್ನಿ ಮ್ಯಾಗಜೀನ್‌ಗಾಗಿ ಬಿಬಿಸಿಯ ಮಾರ್ಕ್ ಟುಲ್ಲಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ಅವರೇ ಬಹಿರಂಗಪಡಿಸಿದ್ದರು. ಮನಮೋಹನ್ ಸಿಂಗ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದಾಗ, ಅವರು ತಮ್ಮ ಉದ್ದನೆಯ ಕೂದಲನ್ನು ತೊಳೆಯಲು ನಾಚಿಕೆಪಡುತ್ತಿದ್ದರಂತೆ. ಅದಕ್ಕಾಗಿಯೇ, ಗೌಪ್ಯತೆ ಕಾಪಾಡಲು ಬೆಳಿಗ್ಗೆ 4 ಗಂಟೆಗೆ ತಣ್ಣೀರಿನಿಂದ ಸ್ನಾನ ಮಾಡುತ್ತಿದ್ದರಂತೆ.

ಹಿಂದಿ ಓದಲು ಬರುತ್ತಿರಲಿಲ್ಲ!

ಮನಮೋಹನ್ ಸಿಂಗ್ ಹಿಂದಿ ಮಾತನಾಡಬಲ್ಲರು. ಆದರೆ, ಹಿಂದಿ ಭಾಷೆಯ ಲಿಪಿಯನ್ನು ಓದಲು ಅವರಿಂದ ಆಗುತ್ತಿರಲಿಲ್ಲ. ಅದಕ್ಕಾಗಿಯೇ ಪ್ರಧಾನಿಯಾಗಿದ್ದಾಗ ಅವರ ಭಾಷಣಗಳನ್ನು ಉರ್ದುವಿನಲ್ಲಿ ಬರೆಯಲಾಗುತ್ತಿತ್ತು. ಏಕೆಂದರೆ ಉರ್ದುವಿನಲ್ಲಿ ಅವರು ಪ್ರವೀಣರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 am, Fri, 27 December 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!