AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mann Ki Baat: ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿ ಬಹಳ ಮುಖ್ಯ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿಯ ಮಹತ್ವವನ್ನು ಒತ್ತಿ ಹೇಳಿದರು. 2027ರ ಡಿಜಿಟಲ್ ಜನಗಣತಿ, ಪರಮಾಣು ಶಕ್ತಿಯಲ್ಲಿ ಭಾರತದ ಸಾಧನೆ ಮತ್ತು ಬುದ್ಧನ ಶಾಂತಿ ತತ್ವಗಳ ಕುರಿತು ಮಾತನಾಡಿದರು. ನವೀಕರಿಸಬಹುದಾದ ಇಂಧನ, ತಂತ್ರಜ್ಞಾನ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಯಿಂದ ಸಮೃದ್ಧ ಭಾರತ ನಿರ್ಮಾಣಕ್ಕೆ ಕರೆ ನೀಡಿದರು.

Mann Ki Baat: ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿ ಬಹಳ ಮುಖ್ಯ: ಪ್ರಧಾನಿ ಮೋದಿ
ನರೇಂದ್ರ ಮೋದಿImage Credit source: ANI
ನಯನಾ ರಾಜೀವ್
|

Updated on: Apr 26, 2026 | 12:51 PM

Share

ನವದೆಹಲಿ, ಏಪ್ರಿಲ್ 26: ಭಾರತದ ಅಭಿವೃದ್ಧಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ನಾವು ವಿದ್ಯುತ್ ಅನ್ನು ಸಂರಕ್ಷಿಸಬೇಕು ಮತ್ತು ಸೌರ, ಪವನ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮನ್​ಕಿ ಬಾತ್​ನಲ್ಲಿ ಹೇಳಿದ್ದಾರೆ.

ದಕ್ಷಿಣ ಅಮೆರಿಕದ ಚಿಲಿಯಲ್ಲಿರುವ ಒಂದು ಸಂಸ್ಥೆಯು ಭಗವಾನ್ ಬುದ್ಧನ ಬೋಧನೆಗಳನ್ನು ಪ್ರಚಾರ ಮಾಡುತ್ತಿದೆ. ಲಡಾಖ್ ಮೂಲದ ಡ್ರುಬ್ಬನ್ ಓಟ್ಜರ್ ರಿನ್‌ಪೋಚೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು. 2027ರ ಜನಗಣತಿಯನ್ನು ದೇಶದ ಅಭಿವೃದ್ಧಿಯ ದಿಕ್ಸೂಚಿ ಎಂದು ಕರೆದ ಪ್ರಧಾನಿ, ಇದು ಕೇವಲ ಸರ್ಕಾರಿ ಕೆಲಸವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಒತ್ತಿ ಹೇಳಿದರು.

ಈ ಬಾರಿ ಗಣತಿದಾರರು ಮೊಬೈಲ್ ಆಪ್ ಮೂಲಕ ಮನೆ ಮನೆಗೆ ಭೇಟಿ ನೀಡಲಿದ್ದಾರೆ.ಗಣತಿದಾರರು ಮನೆಗೆ ಬರುವ 15 ದಿನಗಳ ಮೊದಲೇ ನಾಗರಿಕರು ತಮ್ಮ ಮಾಹಿತಿಯನ್ನು ಸ್ವತಃ ಆನ್‌ಲೈನ್‌ನಲ್ಲಿ ದಾಖಲಿಸಬಹುದು. ಪ್ರಕ್ರಿಯೆ ಮುಗಿದ ನಂತರ ಸಿಗುವ ವಿಶೇಷ ಐಡಿಯನ್ನು ಸಿಬ್ಬಂದಿಗೆ ತೋರಿಸಿದರೆ ಸಾಕು.

ಅಮೆರಿಕ-ಇರಾನ್ ಯುದ್ಧದಂತಹ ಜಾಗತಿಕ ಅನಿಶ್ಚಿತತೆಗಳ ನಡುವೆ, ಪ್ರಧಾನಿ ಮೋದಿ ಅವರು ಭಗವಾನ್ ಬುದ್ಧನ ಆದರ್ಶಗಳನ್ನು ಸ್ಮರಿಸಿದರು. ಇದು ಯುದ್ಧದ ಯುಗವಲ್ಲ ಎಂದು ಪುನರುಚ್ಚರಿಸಿದ ಅವರು, ಶಾಂತಿ ಮತ್ತು ಅಹಿಂಸೆಯ ಮೂಲಕವೇ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಮತ್ತಷ್ಟು ಓದಿ:ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಮಿಳುನಾಡಿನ ಕಲ್ಪಾಕಂನಲ್ಲಿರುವ ‘ಫಾಸ್ಟ್ ಬ್ರೀಡರ್ ರಿಯಾಕ್ಟರ್’ ನಿರ್ಣಾಯಕ ಹಂತವನ್ನು ತಲುಪಿರುವುದನ್ನು ಪ್ರಧಾನಿ ಶ್ಲಾಘಿಸಿದರು.”ನಮ್ಮ ಪರಮಾಣು ವಿಜ್ಞಾನಿಗಳು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಇದು ನಾಗರಿಕ ಪರಮಾಣು ಪ್ರೋಗ್ರಾಮ್​ನ ಅತ್ಯಂತ ಐತಿಹಾಸಿಕ ಮೈಲಿಗಲ್ಲು ಎಂದು ವಿಜ್ಞಾನಿಗಳನ್ನು ಅಭಿನಂದಿಸಿದರು.

ನಾವು ತಂತ್ರಜ್ಞಾನದ ಅದ್ಭುತವನ್ನು ವೀಕ್ಷಿಸುತ್ತಿದ್ದೇವೆ; ಇದು ನಮ್ಮ ಭೂತಕಾಲವನ್ನು ವರ್ತಮಾನದೊಂದಿಗೆ ಸರಾಗವಾಗಿ ಸಂಪರ್ಕಿಸುತ್ತದೆ. ಈ ತಿಂಗಳ ಆರಂಭದಲ್ಲಿ ಫ್ರಾನ್ಸ್‌ನ ಬೋರ್ಡೆಕ್ಸ್‌ನಲ್ಲಿ ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್ ನಡೆದಿತ್ತು, ಅಲ್ಲಿ ಭಾರತೀಯ ವಿದ್ಯಾರ್ಥಿಗಳು ಅಸಾಧಾರಣ ಪ್ರದರ್ಶನ ನೀಡಿದರು ಎಂದು ಪ್ರಧಾನಿ ಮೋದಿ ಹೇಳಿದರು. ಈ ಸ್ಪರ್ಧೆಯಲ್ಲಿ ಭಾರತೀಯ ತಂಡವು ವಿಶ್ವದಲ್ಲಿ ಆರನೇ ಸ್ಥಾನ ಪಡೆದಿದ್ದು, ಇದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us