Mass Hysteria: ಉತ್ತರಾಖಂಡದ ಸರ್ಕಾರಿ ಶಾಲೆಯಲ್ಲಿ ಸಮೂಹ ಸನ್ನಿ; ವಿದ್ಯಾರ್ಥಿಗಳು ಕಿರುಚಾಡುತ್ತಾ, ತಲೆ ಬಡಿದುಕೊಳ್ಳುವ ವಿಡಿಯೋ ವೈರಲ್
Uttarakhand News: ಉತ್ತರಾಖಂಡದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಸಮೂಹ ಸನ್ನಿ ಕಾಣಿಸಿಕೊಂಡಿದ್ದು, ಈ ವಿಡಿಯೋ ನೋಡಿದ ಅಧಿಕಾರಿಗಳು ಮತ್ತು ವೈದ್ಯರ ತಂಡ ಶಾಲೆಗೆ ದೌಡಾಯಿಸಿವೆ.
ಉತ್ತರಾಖಂಡ: ಉತ್ತರಾಖಂಡದ ಬಾಗೇಶ್ವರದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ಸಮೂಹ ಸನ್ನಿ (Mass Hysteria) ಕಂಡುಬಂದಿದ್ದು, ಇದು ಪೋಷಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಭಾರೀ ಆತಂಕ ಮೂಡಿಸಿದೆ. ಈ ಶಾಲೆಯ ವಿದ್ಯಾರ್ಥಿನಿಯರು ಜೋರಾಗಿ ಕಿರುಚಾಡುತ್ತಾ, ಅಳುತ್ತಾ, ತಲೆಯನ್ನು ಕೆಳಗೆ ಹಾಕಿ ಗೋಳಾಡುತ್ತಾ, ಭಯಾನಕವಾಗಿ ವರ್ತಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಸಮೂಹ ಸನ್ನಿ ಕಾಣಿಸಿಕೊಂಡಿದ್ದು, ಈ ವಿಡಿಯೋ ನೋಡಿದ ಅಧಿಕಾರಿಗಳು ಮತ್ತು ವೈದ್ಯರ ತಂಡ ಶಾಲೆಗೆ ದೌಡಾಯಿಸಿವೆ. ಹಲವಾರು ವಿದ್ಯಾರ್ಥಿಗಳು ಉನ್ಮಾದದಿಂದ ನೆಲದ ಮೇಲೆ ಬಿದ್ದು, ಹೊರಳಾಡಿ, ಕಿರುಚಾಡುತ್ತಿರುವ ದೃಶ್ಯ ಅಲ್ಲಿನ ಶಿಕ್ಷಕರಲ್ಲಿ ಭಯವನ್ನು ಉಂಟುಮಾಡಿತ್ತು. ಅದಕ್ಕೂ ಮೊದಲು, ಸನ್ನಿಗೊಳಗಾದ ಕೆಲವು ವಿದ್ಯಾರ್ಥಿಗಳು ಈ ಹಿಂದೆ ಒಂದೆರಡು ದಿನಗಳಿಂದ ಇದೇ ರೀತಿ ವರ್ತಿಸುತ್ತಿದ್ದರು. ಅದಾದ ನಂತರ ಶಾಲೆಯ ಬಹುಪಾಲು ವಿದ್ಯಾರ್ಥಿಗಳು ಇದೇ ರೀತಿ ವರ್ತಿಸಲಾರಂಭಿಸಿದ್ದರಿಂದ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿತ್ತು.
ಇಲ್ಲಿನ ಪಕ್ಕದ ಜಿಲ್ಲೆಗಳಾದ ಅಲ್ಮೋರಾ, ಪಿಥೋರಗಢ್ ಮತ್ತು ಚಮೋಲಿಯ ಸರ್ಕಾರಿ ಶಾಲೆಗಳಲ್ಲಿ ಈ ಹಿಂದೆ ಇದೇ ರೀತಿಯ ಸಮೂಹ ಸನ್ನಿಯ ಘಟನೆಗಳು ವರದಿಯಾಗಿತ್ತು.
ಇದನ್ನೂ ಓದಿ: Viral Video: ವಿಮಾನದ ಸಸ್ಯಾಹಾರ ಊಟದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆ! ವೈರಲ್ ವಿಡಿಯೋ ಇಲ್ಲಿದೆ
ಮಂಗಳವಾರ ಮೊದಲು ನಮ್ಮ ಶಾಲೆಯ ಕೆಲವು ಬಾಲಕಿಯರಲ್ಲಿ ಈ ರೀತಿಯ ವಿಚಿತ್ರವಾದ ವರ್ತನೆಗಳು ಶುರುವಾಗಿದ್ದವು. ಅವರು ಜೋರಾಗಿ ಅಳುತ್ತಿದ್ದರು, ಕೂಗಾಡುತ್ತಿದ್ದರು, ಬೆವರುತ್ತಿದ್ದರು, ಸುಮ್ಮ ಸುಮ್ಮನೆ ತಲೆಯನ್ನು ಕೆಳಗೆ ಹಾಕಿ ನೇತಾಡುವಂತೆ ಓಲಾಡುತ್ತಾ ಕೂರುತ್ತಿದ್ದರು. ಇದನ್ನು ನೋಡಿ ನಮ್ಮ ಶಾಲೆಯ ಶಿಕ್ಷಕರಿಗೆ ಭಯವಾಗಿತ್ತು. ನಾವು ಆ ಮಕ್ಕಳ ಪೋಷಕರಿಗೆ ವಿಷಯ ತಿಳಿಸಿದೆವು. ಅವರು ಒಬ್ಬ ಪೂಜಾರಿಯನ್ನು ಕರೆದುಕೊಂಡು ಬಂದು ಏನೋ ಮಂತ್ರ ಹಾಕಿಸಿದರು. ಆನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತ್ತು. ಈಗ ಮತ್ತೆ ಇನ್ನಷ್ಟು ಮಕ್ಕಳು ಅದಏ ರೀತಿ ವರ್ತಿಸುತ್ತಿದ್ದಾರೆ ಎಂದು ಆ ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ದೇವಿ ಹೇಳಿದ್ದಾರೆ.
Few students in a govt school in Bageshwar dist of #Uttarakhand on Wednesday suddenly started screaming and shouting. Some beleieve it’s a “mass hysteria” phenomenon. A team of doctors will visit school today. pic.twitter.com/htsFjrcC0Y
— Anupam Trivedi (@AnupamTrivedi26) July 28, 2022
ಸಮೂಹ ಸನ್ನಿ ಎಂದರೇನು?: ಸಮೂಹ ಸನ್ನಿ ಅಥವಾ ಸಾಮೂಹಿಕ ಹಿಸ್ಟೀರಿಯಾವು ವಿಚಿತ್ರವಾದ ಮತ್ತು ಅಸಾಧಾರಣವಾದ ನಡವಳಿಕೆಗಳು, ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದಾಗಿದೆ. ಇದು ಮಾನಸಿಕ ಸಮಸ್ಯೆಯಾಗಿದ್ದು, ಸನ್ನಿಗೊಳಗಾದವರು ಹುಚ್ಚರಂತೆ ವಿಚಿತ್ರವಾಗಿ ವರ್ತಿಸುತ್ತಾರೆ. ಮಾನಸಿಕ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವಾಗ ಈ ರೀತಿ ಆಗುತ್ತದೆ. ಒಬ್ಬರು ಈ ರೀತಿ ವರ್ತಿಸುವಾಗ ಅದು ಸುತ್ತಮುತ್ತಲಿನವರ ಮೇಲೂ ಪರಿಣಾಮ ಬೀರಿ ಅವರು ಕೂಡ ಅದರ ಪ್ರಭಾವಕ್ಕೊಳಗಾಗುತ್ತಾರೆ. ಇದು ಭಾವನಾತ್ಮಕ ಅಥವಾ ಮಾನಸಿಕ ಒತ್ತಡದಿಂದ ಪ್ರೇರೇಪಿಸಲ್ಪಟ್ಟ ದೈಹಿಕ ಸಮಸ್ಯೆಯಾಗಿಯೂ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: ನೀನು ಪಾಸ್ ಆಗಲ್ಲ ಎಂದು ಭವಿಷ್ಯ ನುಡಿದ ಶಿಕ್ಷಕಿಗೆ ಪಾಸ್ ಆಗಿ ತೋರಿಸಿದ ವಿದ್ಯಾರ್ಥಿನಿ; ವಾಟ್ಸ್ಆ್ಯಪ್ ಚಾಟಿಂಗ್ ವೈರಲ್
ಈ ಸಮೂಹ ಸನ್ನಿಗೆ ಯಾವುದೇ ಅಧಿಕೃತ ಚಿಕಿತ್ಸೆ ಇಲ್ಲ. ಈ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಂದಾಗಲೂ ಆ ಮಕ್ಕಳು ಅದೇ ರೀತಿ ವಿಚಿತ್ರವಾಗಿ ವರ್ತಿಸಿದ್ದಾರೆ. ಶಾಲೆಯ ಆವರಣದೊಳಗೆ ಪೂಜೆ, ಹೋಮ ಮಾಡಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಮಕ್ಕಳ ಪೋಷಕರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಆದರೆ, ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿಲ್ಲ. ವೈದ್ಯರನ್ನು ಕರೆಸಿ, ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Published On - 9:23 am, Fri, 29 July 22