ಬಾಂಗ್ಲಾ ಪ್ರವಾಹಕ್ಕೂ ಭಾರತದ ಅಣೆಕಟ್ಟಿನಿಂದ ನೀರು ಬಿಟ್ಟಿದ್ದಕ್ಕೂ ಸಂಬಂಧವಿಲ್ಲ: ಕೇಂದ್ರ ಸರ್ಕಾರ
ಬಾಂಗ್ಲಾದೇಶದಲ್ಲಿ ಉದ್ಭವವಾಗಿರುವ ಪ್ರವಾಹಕ್ಕೂ ಭಾರತದ ಅಣೆಕಟ್ಟಿನಿಂದ ಬಿಟ್ಟಿರುವ ನೀರಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತದ ಸರ್ಕಾರ ಸ್ಪಷ್ಟಪಡಿಸಿದೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ವಿನಾಶಕಾರಿ ಪ್ರವಾಹದ ಬಳಿಕ, ದೇಶದಲ್ಲಿ ಭಾರತ ವಿರೋಧಿ ಪ್ರಚಾರವು ವೇಗ ಪಡೆಯುತ್ತಿದೆ.
ಬಾಂಗ್ಲಾದೇಶದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೂ ಭಾರತದ ಅಣೆಕಟ್ಟಿನಿಂದ ನೀರು ಬಿಟ್ಟಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ವಿನಾಶಕಾರಿ ಪ್ರವಾಹದ ಬಳಿಕ, ದೇಶದಲ್ಲಿ ಭಾರತ ವಿರೋಧಿ ಪ್ರಚಾರವು ವೇಗ ಪಡೆಯುತ್ತಿದೆ. ಭಾರತದ ತ್ರಿಪುರಾದ ದಂಬೂರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟನ್ನು ತೆರೆದಿದ್ದು, ಬಾಂಗ್ಲಾದೇಶದ ಪ್ರವಾಹಕ್ಕೆ ಕಾರಣವಾಯಿತು ಮತ್ತು ಹಲವಾರು ಜಿಲ್ಲೆಗಳಲ್ಲಿ ಭಾರಿ ನಾಶವನ್ನು ಉಂಟುಮಾಡಿದೆ ಎಂದು ಹಲವಾರು ಸಂಘಟನೆಗಳು ಆರೋಪಿಸಿವೆ.
ತ್ರಿಪುರಾದಲ್ಲಿರುವ ದಂಬೂರ್ ಅಣೆಕಟ್ಟನ್ನು ಹಠಾತ್ತನೆ ತೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಬಾಂಗ್ಲಾದೇಶದ ಅನೇಕ ತಗ್ಗು ಪ್ರದೇಶಗಳು ಮುಳುಗಿವೆ. ಈ ಆರೋಪದ ಪ್ರಕಾರ, ಭಾರತವು ಯಾವುದೇ ಮುನ್ಸೂಚನೆ ಇಲ್ಲದೆ ಅಣೆಕಟ್ಟಿನ ಗೇಟ್ಗಳನ್ನು ತೆರೆದಿದೆ. ಇದರಿಂದಾಗಿ ಹೆಚ್ಚಿನ ಭಾಗಗಳು ಜಲಾವೃತಗೊಂಡಿವೆ ಎಂದು ಭಾರತದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ.
Bangladesh Crisis: ಬಾಂಗ್ಲಾದೇಶದ ಗಡಿಯ ಪರಿಸ್ಥಿತಿ ಗಮನಿಸಲು ಭಾರತ ಸರ್ಕಾರದಿಂದ ಸಮಿತಿ ರಚನೆ; ಅಮಿತ್ ಶಾ ಘೋಷಣೆ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನದ ನಂತರ, ಹೊಸ ಸರ್ಕಾರದ ಮೇಲೆ ಒತ್ತಡ ಹೇರಲು ಭಾರತ ಉದ್ದೇಶಪೂರ್ವಕವಾಗಿ ಈ ಪ್ರವಾಹ ಸೃಷ್ಟಿಸಿದೆ ಎಂದು ಆರೋಪ ಮಾಡಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳನ್ನು ಕೆರಳಿಸಲು ಜಮಾತ್ ಎ ಇಸ್ಲಾಮ್ ಮತ್ತು ಛತ್ರ ಶಿವರ್ನಂತಹ ಸಂಘಟನೆಗಳು ಈ ಅವಕಾಶಗಳನ್ನು ಬಳಸಿಕೊಂಡಿವೆ. ಈ ಸಂಘಟನೆಗಳು ಬಾಂಗ್ಲಾದೇಶದ ಬಗ್ಗೆ ಭಾರತ ಹಗೆತನದ ಧೋರಣೆ ಅನುಸರಿಸುತ್ತಿದೆ. ಪ್ರವಾಹವು ಪಿತೂರಿಯ ಒಂದು ಭಾಗವಾಗಿದೆ ಎನ್ನುವ ಸಂದೇಶವನ್ನು ಸಾರಿದ್ದಾರೆ.
ಪ್ರತಿಕ್ರಿಯೆ ನೀಡಿದ ಭಾರತ ತ್ರಿಪುರಾದಲ್ಲಿ ದಂಬೂರ್ ಅಣೆಕಟ್ಟಿನಿಂದ ನೀರು ಬಿಡುವುದು ಮುಂಗಾರು ಮಳೆಯ ಸಮಯದಲ್ಲಿ ನೀರನ ಮಟ್ಟ ನಿಯಂತ್ರಿಸಲು ತೆಗೆದುಕೊಳ್ಳುವ ಒಂದು ಕ್ರಮವಷ್ಟೇ ಇದಕ್ಕೂ ಬಾಂಗ್ಲಾದೇಶದ ಪ್ರವಾಹಕ್ಕೂ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಭಾರತ ಹಾಗೂ ಬಾಂಗ್ಲಾದೇಶದ ಮೂಲಕ ಹರಿಯುವ ಗುಮ್ಟಿ ನದಿಯ ಜಲಾನಯನ ಪ್ರದೇಶಗಳು ಕಳೆದ ಕೆಲವು ದಿನಗಳಿಂದ ಭಾರಿ ಮಳೆಗೆ ಸಾಕ್ಷಿಯಾಗಿವೆ. ತಂಬೂರ್ ಅಣೆಕಟ್ಟು ಗಡಿಯಿಂದ ಸಾಕಷ್ಟು ದೂರದಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ