ಹೃದಯಕ್ಕೆ 3 ಬಾರಿ ಇರಿಯಲಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು, ಸೌರಭ್ ಮರಣೋತ್ತರ ವರದಿ
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆಯ ಮರಣೋತ್ತರ ವರದಿ ಬಹಿರಂಗಗೊಂಡಿದೆ. ಹೃದಯಕ್ಕೆ 3 ಬಾರಿ ಇರಿಯಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು ಎಂದು ವರದಿ ಹೇಳಿದೆ. ಸೌರಭ್ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸೌರಭ್ಗೆ ಮತ್ತು ಬರುವ ಔಷಧಿ ತಿನ್ನಿಸಿ ಪ್ರಜ್ಞೆ ತಪ್ಪಿಸಿ ಹತ್ಯೆ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶದ ಟ್ರಿಪ್ಗೆಂದು ತೆರಳಿದ್ದರು. ಸೌರಭ್ನನ್ನು ಕೊಲೆ ಮಾಡಿ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ನಲ್ಲಿ ಸಿಮೆಂಟ್ ಜತೆಗೆ ಹಾಕಿ ಸೀಲ್ ಮಾಡಲಾಗಿತ್ತು.

ಮೀರತ್, ಮಾರ್ಚ್ 23: ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆಯ ಮರಣೋತ್ತರ ವರದಿ ಬಹಿರಂಗಗೊಂಡಿದೆ. ಹೃದಯಕ್ಕೆ 3 ಬಾರಿ ಇರಿಯಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು ಎಂದು ವರದಿ ಹೇಳಿದೆ. ಸೌರಭ್ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸೌರಭ್ಗೆ ಮತ್ತು ಬರುವ ಔಷಧಿ ತಿನ್ನಿಸಿ ಪ್ರಜ್ಞೆ ತಪ್ಪಿಸಿ ಹತ್ಯೆ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶದ ಟ್ರಿಪ್ಗೆಂದು ತೆರಳಿದ್ದರು. ಸೌರಭ್ನನ್ನು ಕೊಲೆ ಮಾಡಿ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ನಲ್ಲಿ ಸಿಮೆಂಟ್ ಜತೆಗೆ ಹಾಕಿ ಸೀಲ್ ಮಾಡಲಾಗಿತ್ತು.
ಎರಡೂ ಕೈಗಳನ್ನು ಮಣಿಕಟ್ಟಿನಿಂದ ಕತ್ತರಿಸಲ್ಪಟ್ಟಿತ್ತು, ಕಾಲುಗಳು ಹಿಂದಕ್ಕೆ ಬಾಗಿದ್ದವು. ಸೌರಭ್ ಅವರ ಸಾವು ತೀವ್ರ ಆಘಾತ ಮತ್ತು ಭಾರಿ ರಕ್ತದ ನಷ್ಟದಿಂದ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮುಸ್ಕಾನ್ ಸೌರಭ್ ಹೃದಯಕ್ಕೆ ಚೂಫಾದ ಚಾಕುವಿನಿಂದ ಮೂರು ಬಾರಿ ಆಳವಾಗಿ ಇರಿದಿದ್ದರು. ಬಳಿಕ ತಲೆಯನ್ನು ದೇಹದಿಂದ ಕತ್ತರಿಸಿದ್ದರು. ಬಳಿಕ ಕೈಗಳನ್ನು ಕತ್ತರಿಸಿದ್ದರು. ನಂತರ ಡ್ರಮ್ಗೆ ಹಾಕಬೇಕಿದ್ದರೆ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಲಾಗಿತ್ತು.
ಸೌರಭ್ ಕುಟುಂಬದ ವಿರೋಧದ ಹೊರತಾಗಿಯೂ ಮುಸ್ಕಾನ್ಳನ್ನು 2016ರಲ್ಲಿ ವಿವಾಹವಾಗಿದ್ದರು. 2019ರಲ್ಲಿ ತನ್ನ ಕ್ಲಾಸ್ಮೇಟ್ ಸಾಹಿಲ್ನನ್ನು ವಾಟ್ಸಾಪ್ ಗ್ರೂಪ್ ಮೂಲಕ ಭೇಟಿಯಾದರು. ಮಾರ್ಚ್ 4ರಂದು ಮುಸ್ಕಾನ್ ಹಾಗೂ ಸಾಹಿಲ್ ಪ್ಲ್ಯಾನ್ ಮಾಡಿ ಸೌರಭ್ನನ್ನು ಹತ್ಯೆ ಮಾಡಿದ್ದರು. ಅವರು ಬದುಕಿದ್ದಾರೆಂದು ಬಿಂಬಿಸಲು ಕುಟುಂಬದವರಿಗೆ ಆತನ ಮೊಬೈಲ್ನಿಂದ ಸಂದೇಶ ಕಳುಹಿದ್ದಳು.
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ನಿತ್ಯ ಹಲವು ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಸೌರಭ್ ರಜಪೂತ್ ಹತ್ಯೆ ಮಾಡಿ, ಆರೋಪಿ ಮುಸ್ಕನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಹಿಮಾಚಲ ಪ್ರದೇಶಕ್ಕೆ ಟ್ರಿಪ್ಗೆ ಹೋಗಿದ್ದರು. ಅಲ್ಲಿ ಅವರೇನು ಮಾಡಿದ್ದಾರೆ ಎನ್ನುವ ಬಗ್ಗೆ ಕ್ಯಾಬ್ ಚಾಲಕ ಅಜಬ್ ಸಿಂಗ್ ಮಾಹಿತಿ ನೀಡಿದ್ದಾರೆ. ಇಬ್ಬರ ನಡವಳಿಕೆಯೂ ಸಾಮಾನ್ಯವಾಗಿತ್ತು, ಅವರು ಯಾವುದೋ ಘೋರ ಅಪರಾಧ ಮಾಡಿದ್ದಾರೆಂದು ತೋರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:ಮೀರತ್: ಸೌರಭ್ನನ್ನು ಕೊಲೆ ಮಾಡಿ ಹಿಮಾಚಲಕ್ಕೆ ಟ್ರಿಪ್ಗೆ ಹೋಗಿ ಸಾಹಿಲ್, ಮುಸ್ಕಾನ್ ಮಾಡಿದ್ದೇನು?
ಇಂಡಿಯಾ ಟುಡೇ ಜತೆಗೆ ಮಾತನಾಡಿದ ಚಾಲಕ, ಶಿಮ್ಲಾ ಮತ್ತು ಮನಾಲಿಗೆ ಪ್ರವಾಸ ಮಾಡುವಾಗ ಮುಸ್ಕಾನ್ ಮತ್ತು ಸಾಹಿಲ್ ಪರಸ್ಪರ ಹೆಚ್ಚು ಮಾತನಾಡಲಿಲ್ಲ. ಮುಸ್ಕಾನ್ ಗೆ ತನ್ನ ತಾಯಿಯಿಂದ ಎರಡು ಬಾರಿ ಮಾತ್ರ ಕರೆ ಬಂದಿತ್ತು. ಹಿಲ್ ಪ್ರತಿದಿನ ಎರಡು ಬಾಟಲಿ ಮದ್ಯ ಕುಡಿಯುತ್ತಿದ್ದರೆ, ಮುಸ್ಕಾನ್ ಮೂರು ಕ್ಯಾನ್ ಬಿಯರ್ ಕುಡಿಯುತ್ತಿದ್ದರು ಎಂದು ಕ್ಯಾಬ್ ಚಾಲಕ ಮಾಹಿತಿ ನೀಡಿದ್ದಾರೆ.
ಇಬ್ಬರೂ ಕೂಡ ಹೋಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಿದರು. ಅವರು ಹೋಳಿ ಆಚರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸುತ್ತಿದ್ದು, ಕೊಲೆಯ ಹಿಂದಿನ ಸತ್ಯವನ್ನು ಹೊರಗೆಳೆಯಲು ಪ್ರಯತ್ನಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ