Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್​ನಲ್ಲಿ ಹುಡುಕಾಟ, ವೈದ್ಯರ ನಕಲಿ ಪ್ರಿಸ್ಕ್ರಿಪ್ಷನ್, ಸೌರಭ್​ ಕೊಲೆಗೂ ಮುನ್ನ ನಡೆದಿದ್ದೇನು?

ಮೀರತ್‌ನ ಮುಸ್ಕಾನ್ ರಸ್ತೋಗಿ, ತನ್ನ ಪತಿಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿ, ಆತನ ದೇಹವನ್ನು ತುಂಡು ಮಾಡಿ , ತನ್ನ ಪ್ರಿಯಕರನ ಸಹಾಯದಿಂದ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದಳು. ಅಪರಾಧ ನಡೆಯುವ ಕೆಲವು ದಿನಗಳ ಮೊದಲು ಔಷಧಿಗಳನ್ನು ಖರೀದಿಸಲು ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ತಿರುಚಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಖಾಲಿ ಪ್ರಿಸ್ಕ್ರಿಪ್ಷನ್ ಪಡೆದು ಔಷಧಿಗಳ ಹೆಸರುಗಳನ್ನು ಇವರೇ ಬರೆದಿದ್ದರು. ಮುಸ್ಕಾನ್ ಖಿನ್ನತೆ ನಿವಾರಕಗಳು ಮತ್ತು ನಿದ್ರೆ ಮಾತ್ರೆಗಳು ಸೇರಿದಂತೆ ಮೂರು ರೀತಿಯ ಔಷಧಿಗಳನ್ನು ಖರೀದಿಸಿದ್ದರು.

ಗೂಗಲ್​ನಲ್ಲಿ ಹುಡುಕಾಟ, ವೈದ್ಯರ ನಕಲಿ ಪ್ರಿಸ್ಕ್ರಿಪ್ಷನ್,  ಸೌರಭ್​ ಕೊಲೆಗೂ ಮುನ್ನ ನಡೆದಿದ್ದೇನು?
ಮುಸ್ಕಾನ್
Follow us
ನಯನಾ ರಾಜೀವ್
|

Updated on:Mar 24, 2025 | 8:54 AM

ಮೀರತ್, ಮಾರ್ಚ್​ 24: ಸೌರಭ್ ರಜಪೂತ್​ ಎಂಬುವವರನ್ನು ಅವರ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್​ ಸೇರಿ ಕೊಲೆ ಮಾಡಿದ್ದರು. ಕೊಲೆಗೂ ಮುನ್ನ ಸೌರಭ್​ಗೆ ಮಾದಕದ್ರವ್ಯವನ್ನು ನೀಡಲಾಗಿತ್ತು. ಅದರಿಂದ ಅವರು ಪ್ರಜ್ಞೆ ತಪ್ಪಿದ್ದರು. ಹಾಗಾದರೆ ಆ ಔಷಧಿ ಅವರ ಕೈಗೆ ಹೇಗೆ ಬಂತು, ಏನೆಲ್ಲಾ ಚಾಲಾಕಿ ಕೆಲಸ ಮಾಡಿದ್ದಾರೆ ಇಲ್ಲಿದೆ ಮಾಹಿತಿ.

ಇದಕ್ಕಾಗಿ ಮುಸ್ಕಾನ್ ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ತಿರುಚಿದ್ದಳು, ಅಂದರೆ ಅವಳು ನಕಲಿ ಪ್ರಿಸ್ಕ್ರಿಪ್ಷನ್ ಬಳಸಿ ಮೆಡಿಕಲ್ ಸ್ಟೋರ್‌ನಿಂದ ಔಷಧಿಗಳನ್ನು ಖರೀದಿಸಿದ್ದಳು. ಈ ಪ್ರಕರಣದಲ್ಲಿ, ಮೀರತ್ ಹೆಚ್ಚುವರಿ ಎಸ್ಪಿ ಆಯುಷ್ ವಿಕ್ರಮ್ ಅವರು ಮುಸ್ಕಾನ್ ಮತ್ತು ಸಾಹಿಲ್ ನವೆಂಬರ್‌ನಿಂದ ಸೌರಭ್‌ನನ್ನು ಕೊಲ್ಲಲು ಯೋಜಿಸುತ್ತಿದ್ದರು. ಮುಸ್ಕಾನ್ 800 ರೂ.ಕೊಟ್ಟು ಕೋಳಿ ಕತ್ತರಿಸಲು ಚಾಕು ಬೇಕು ಎಂದು ಹೇಳಿ ಅಂಡಿಯಿಂದ ಖರೀದಿಸಿ ತಂದಿದ್ದಳು.

ಸೌರಭ್​ ಪ್ರಜ್ಞೆ ತಪ್ಪಿಸುವುದು ಮುಸ್ಕಾನ್ ಹಾಗೂ ಸಾಹಿಲ್​ನ ಯೋಜನೆಯಾಗಿತ್ತು. ಇದಕ್ಕಾಗಿ ಮುಸ್ಕಾನ್ ತನಗೆ ಆಂಕ್ಸೈಟಿ(ಆತಂಕ) ಸಮಸ್ಯೆ ಇದೆ ಎಂದು ವೈದ್ಯರ ಬಳಿ ನೆಪ ಹೇಳಿದ್ದಳು. ಖಾಲಿ ಪ್ರಿಸ್ಕ್ರಿಪ್ಷನ್ ಪಡೆದಿದ್ದಳು. ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯುವಂತೆಯೇ, ಅವರು ಎರಡೂ ಔಷಧಿಗಳನ್ನು ಖಾಲಿ ಪ್ರಿಸ್ಕ್ರಿಪ್ಷನ್‌ನಲ್ಲಿ ಬರೆದು ಸಹಿ ಮಾಡಿದರು. ಇದಾದ ನಂತರ ಅವರು ಖೇರ್ ನಗರಕ್ಕೆ ಬಂದು ಔಷಧಿಗಳನ್ನು ಖರೀದಿಸಿದರು.

ಇದನ್ನೂ ಓದಿ
Image
ಕೊಲೆ ಮಾಡಿ ಹಿಮಾಚಲಕ್ಕೆ ಟ್ರಿಪ್​ಗೆ ಹೋಗಿದ್ದ ಆರೋಪಿಗಳು ಅಲ್ಲಿ ಮಾಡಿದ್ದೇನು?
Image
ಮೀರತ್ ಕೊಲೆ; ಗಂಡನ ಜೊತೆ ಮುಸ್ಕಾನ್ ಡ್ಯಾನ್ಸ್ ಮಾಡಿದ ಹಳೇ ವಿಡಿಯೋ ವೈರಲ್
Image
ಮಗಳನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ ಆರೋಪಿ ಮಹಿಳೆಯ ಪೋಷಕರು
Image
ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ!

ಮತ್ತಷ್ಟು ಓದಿ: ಹೃದಯಕ್ಕೆ 3 ಬಾರಿ ಇರಿಯಲಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು, ಸೌರಭ್ ಮರಣೋತ್ತರ ವರದಿ

ಫೆಬ್ರವರಿ 25ರಂದೇ ಆತನನ್ನು ಕೊಲೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಅಂದು ಆತ ಮದ್ಯಪಾನ ಮಾಡಲು ನಿರಾಕರಿಸಿದ್ದಕ್ಕಾಗಿ ಉಳಿದುಕೊಂಡಿದ್ದ. ಉತ್ತರ ಪ್ರದೇಶದ ಅಧಿಕಾರಿಗಳು ಮೀರತ್‌ನಲ್ಲಿರುವ ವೈದ್ಯಕೀಯ ಅಂಗಡಿಯ ಮೇಲೆ ದಾಳಿ ನಡೆಸಿದಾಗ, ಮುಸ್ಕಾನ್ ಮೂರು ರೀತಿಯ ಔಷಧಿಗಳನ್ನು ಖರೀದಿಸಿರುವುದನ್ನು ದೃಢಪಡಿಸಿದರು.

ಮುಸ್ಕಾನ್ ಮಾರ್ಚ್​ 1ರಂದು ಉಷಾ ಮೆಡಿಕಲ್ ಸ್ಟೋರ್​​ಗೆ ಹೋಗಿದ್ದಳು, ವೈದ್ಯರು ಪ್ರಿಸ್ಕ್ರಿಪ್ಷನ್‌ನಲ್ಲಿ ಬರೆದ ಔಷಧಿಗಳನ್ನು ಅವರಿಗೆ ನೀಡಿದ್ದರು . ಟಗರಾ ಟ್ಯಾಬ್ಲೆಟ್, ಮೆಜೋಲಮ್ ಇಂಜೆಕ್ಷನ್ ಮತ್ತು ಡಿಜೆನ್ ಹೆಸರುಗಳು ಸೇರಿವೆ. ಈ ಮೂರು ಔಷಧಿಗಳಲ್ಲಿ, ಮೆಜೋಲಂ ಇಂಜೆಕ್ಷನ್ ಅನ್ನು ಖಿನ್ನತೆ-ನಿರೋಧಕ ಔಷಧವಾಗಿ ಬಳಸಲಾಗುತ್ತದೆ. ಮುಸ್ಕನ್ ರಸ್ತೋಗಿ ತನ್ನ ಪತಿ ಸೌರಭ್ ರಜಪೂತ್‌ಗೆ ಈ ಇಂಜೆಕ್ಷನ್ ನೀಡಿ ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿದ್ದಳು.

ಮಾರ್ಚ್ 4 ರಂದು ಅವರ ಪತಿಯನ್ನು ಕೊಲೆ ಮಾಡುವ ಮೊದಲು ಈ ಮಾದಕ ದ್ರವ್ಯಗಳನ್ನು ಅವರಿಗೆ ಕೊಡಲಾಗಿದೆಯೇ ಎಂದು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.

ಅಂದು ಸೌರಭ್​ ಪ್ರಜ್ಞೆ ತಪ್ಪಿಸಿ ಎದೆಗೆ ಮೂರು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿ, ತಲೆಯನ್ನು ದೇಹದಿಂದ ಬೇರ್ಪಡಿಸಿ, ಬಳಿಕ ಕೈಕಾಲುಗಳನ್ನು ಕತ್ತರಿಸಿ, ದೇಹವನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್​ನಲ್ಲಿ ಸಿಮೆಂಟ್​ ಹಾಕಿ ಸೀಲ್ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:12 am, Mon, 24 March 25

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ