ಮಧ್ಯಪ್ರದೇಶ: ಬಿಎಸ್​ಎಫ್​ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳು ನಾಪತ್ತೆ

ಮಧ್ಯಪ್ರದೇಶದ ಗ್ವಾಲಿಯರ್​ನ ಬಿಎಸ್ ಎಫ್ ಶಿಬಿರದಿಂದ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳು ನಾಪತ್ತೆಯಾಗಿರುವ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಇವರಿಬ್ಬರೂ ಏಪ್ರಿಲ್ ತಿಂಗಳಿನಲ್ಲಿ ಒಟ್ಟಿಗೆ ವಿಹಾರಕ್ಕೆ ತೆರಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಶಹಾನಾ ಖಾತೂನ್ ಮೊದಲು ಆಕಾಂಕ್ಷಾ ಅವರ ಮನೆಗೆ ಹೋಗಿದ್ದರು, ನಂತರ ಇಬ್ಬರೂ ಪಶ್ಚಿಮ ಬಂಗಾಳದಲ್ಲಿ ಸುಮಾರು 15 ದಿನಗಳ ಕಾಲ ಇದ್ದರು.

ಮಧ್ಯಪ್ರದೇಶ: ಬಿಎಸ್​ಎಫ್​ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳು ನಾಪತ್ತೆ
ಬಿಎಸ್​ಎಫ್​ ಕಾನ್​ಸ್ಟೆಬಲ್​ಗಳು

Updated on: Jul 07, 2024 | 9:57 AM

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬಿಎಸ್​ಎಫ್​ನ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳು ನಾಪತ್ತೆಯಾಗಿದ್ದಾರೆ. ಬಿಎಸ್‌ಎಫ್ ಅಕಾಡೆಮಿ ಟೆಕನ್‌ಪುರ್ ಗ್ವಾಲಿಯರ್‌ನಲ್ಲಿ ನಿಯೋಜಿಸಲಾದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳ ಹುಡುಕಾಟವು ಈಗ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗಡಿಯನ್ನು ತಲುಪಿದೆ.
ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ಕೂಡ ರಚಿಸಲಾಗಿದೆ. ಪೊಲೀಸರೊಂದಿಗೆ ಎಸ್‌ಐಟಿ ಮತ್ತು ಬಿಎಸ್‌ಎಫ್ ಗುಪ್ತಚರ ದಳವೂ ಅವರಿಗಾಗಿ ಹುಡುಕಾಟ ನಡೆಸುತ್ತಿದೆ. ನಾಪತ್ತೆಯಾದ ಮಹಿಳಾ ಪೇದೆಯ ತಾಯಿ ನೀಡಿದ ದೂರಿನ ಮೇರೆಗೆ ಬಿಲುವಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಮಹಿಳಾ ಕಾನ್‌ಸ್ಟೆಬಲ್‌ಗಳಾದ ಆಕಾಂಕ್ಷಾ ನಿಖರ್ ಮತ್ತು ಶಹಾನಾ ಖಾತೂನ್ ಜೂನ್ 6 ರಂದು ನಾಪತ್ತೆಯಾಗಿದ್ದಾರೆ. ಬಿಎಸ್ ಎಫ್ ಅಕಾಡೆಮಿಯ ಹಾಸ್ಟೆಲ್ ಕೊಠಡಿಯಲ್ಲಿ ಮೊಬೈಲ್ ಬಿಟ್ಟು ಹೋಗಿದ್ದಾಳೆ. ಆಕಾಂಕ್ಷಾ ಮಧ್ಯಪ್ರದೇಶದ ಜಬಲ್‌ಪುರ ನಿವಾಸಿಯಾಗಿದ್ದು, ಶಹಾನಾ ಖಾತೂನ್ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದಾರೆ.

ಬಿಎಸ್‌ಎಫ್‌ನಿಂದ ಮಾಹಿತಿ ಪಡೆದು ಗ್ವಾಲಿಯರ್‌ನ ಬಿಲುವಾ ಠಾಣೆ ಪೊಲೀಸರು ತನಿಖೆ ನಡೆಸಿದಾಗ, ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.ಅಷ್ಟೇ ಅಲ್ಲ ಗ್ವಾಲಿಯರ್ ರೈಲು ನಿಲ್ದಾಣದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರ ಚಿತ್ರಗಳೂ ಸೆರೆಯಾಗಿವೆ.

ಮತ್ತಷ್ಟು ಓದಿ: ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣ: ಇಬ್ಬರ ಶವ ಕೆರೆಯಲ್ಲಿ ಪತ್ತೆ

ಇವರಿಬ್ಬರೂ ಗ್ವಾಲಿಯರ್‌ನಿಂದ ದೆಹಲಿಗೆ ರೈಲು ಹಿಡಿದಿದ್ದರು ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ದೆಹಲಿಯ ಎಟಿಎಂನಿಂದ ಹಣ ಡ್ರಾ ಮಾಡಿ ಕೋಲ್ಕತ್ತಾಗೆ ತೆರಳಿದ್ದಾರೆ. ಕೋಲ್ಕತ್ತಾದಿಂದ ಮುರ್ಷಿದಾಬಾದ್ ತಲುಪಿದೆ.

ಇಬ್ಬರೂ 2021 ರಿಂದ ಅಕಾಡೆಮಿಯ ಸಹಾಯಕ ತರಬೇತಿ ಕೇಂದ್ರದಲ್ಲಿ ಬೋಧಕ (ತರಬೇತುದಾರ) ಹುದ್ದೆಯನ್ನು ಹೊಂದಿದ್ದಾರೆ. ಶಹಾನಾ ಖಾತೂನ್, ಅವರ ಅಕ್ಕ ಮತ್ತು ಇತರ ಕುಟುಂಬ ಸದಸ್ಯರು ತಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂಪೂರ್ಣ ಪ್ರಕರಣದಲ್ಲಿ, ಕಾಣೆಯಾದ ಮಹಿಳಾ ಕಾನ್‌ಸ್ಟೆಬಲ್ ಆಕಾಂಕ್ಷಾ ಅವರ ತಾಯಿಯ ದೂರಿನ ಮೇರೆಗೆ ಬಿಲುವಾ ಪೊಲೀಸ್ ಠಾಣೆಯಲ್ಲಿ ಶಹಾನಾ ಖಾತೂನ್, ಅಕ್ಕ ಮತ್ತು ಅವರ ಕುಟುಂಬದ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದ್ದು, ಪೊಲೀಸ್ ತಂಡವನ್ನು ಬಂಗಾಳಕ್ಕೆ ಕಳುಹಿಸಲಾಗಿದೆ. ಮತ್ತೊಂದೆಡೆ, ಎಸ್‌ಐಟಿ ಮತ್ತು ಬಿಎಸ್‌ಎಫ್ ಗುಪ್ತಚರ ಘಟಕ ಕೂಡ ಆಕಾಂಕ್ಷಾಗಾಗಿ ಹುಡುಕಾಟ ನಡೆಸುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 9:57 am, Sun, 7 July 24

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us