ಮೋದಿ ಅವರ ಈ ಬಾರಿಯ ದೀಪಾವಳಿಗೆ ಮತ್ತಷ್ಟು ಮೆರುಗು ತಂದವರು ಯಾರು ಗೊತ್ತೇ? ಇಲ್ಲಿದೆ ನೋಡಿ ವಿಡಿಯೋ

ಪ್ರಧಾನಿ ಮೋದಿ ಅವರ ದೀಪಾವಳಿಗೆ ಸೂರ್ಯಕುಮಾರ್ ಯಾದವ್ ಕುಟುಂಬ ಭೇಟಿ ನೀಡಿ ಮತ್ತಷ್ಟು ಮೆರುಗು ನೀಡಿದೆ. ಈ ವೇಳೆ, ಪುಟ್ಟ ಬಾಲಕಿ ಹಾಡಿದ ಭಜನೆಗೆ ಮೋದಿ ಮನಸೋತರು. ದೀಪಾವಳಿಯ ಸಂಭ್ರಮಕ್ಕೆ ಭಕ್ತಿ, ಸಂತಸ ತುಂಬಿದ ಈ ವಿಶೇಷ ಕ್ಷಣದ ವಿಡಿಯೋ ವೈರಲ್ ಆಗಿದೆ. ಕ್ರಿಕೆಟ್ ಲೋಕದ ಅತಿಥಿಗಳ ಈ ಭೇಟಿ ಮೋದಿ ನಿವಾಸದಲ್ಲಿ ದೈವಿಕ ವಾತಾವರಣ ಸೃಷ್ಟಿಸಿತು.

ಮೋದಿ ಅವರ ಈ ಬಾರಿಯ ದೀಪಾವಳಿಗೆ ಮತ್ತಷ್ಟು ಮೆರುಗು ತಂದವರು ಯಾರು ಗೊತ್ತೇ? ಇಲ್ಲಿದೆ ನೋಡಿ ವಿಡಿಯೋ
ನರೇಂದ್ರ ಮೋದಿ

Updated on: Nov 06, 2026 | 2:54 PM

ನವದೆಹಲಿ, ನವೆಂಬರ್ 06: ದೀಪಾವಳಿಯ ಸಂಭ್ರಮಕ್ಕೆ ಮತ್ತಷ್ಟು ಕಳೆ ಬರಬೇಕೆಂದರೆ ದೀಪಗಳ ಬೆಳಕು ಮಾತ್ರ ಸಾಕಾಗುವುದಿಲ್ಲ, ಪ್ರೀತಿಯ ಕ್ಷಣಗಳೂ ಬೇಕು. ಈ ಬಾರಿಯ ಪ್ರಧಾನಿ ನರೇಂದ್ರ ಮೋದಿ ಅವರ ದೀಪಾವಳಿಗೂ ಅಂತಹದ್ದೇ ಒಂದು ಸುಂದರ ಕ್ಷಣ ಸಾಕ್ಷಿಯಾಗಿದೆ. ಟೀಮ್ ಇಂಡಿಯಾದ ಟಿ20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಕುಟುಂಬದೊಂದಿಗೆ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ  ಸೂರ್ಯಕುಮಾರ್ ಯಾದವ್ ಮಗಳು ರಿದ್ದಿಮಾ ಹಾಡಿದ ಭಜನೆಯನ್ನೂ ಮೋದಿ ಆಸಕ್ತಿಯಿಂದ ಆಲಿಸಿದ್ದಾರೆ. ಈ ಭೇಟಿಯ ವಿಡಿಯೋವನ್ನು ಹಂಚಿಕೊಂಡಿರುವ ಮೋದಿ, ದೀಪಾವಳಿಯ ಸಂಭ್ರಮಕ್ಕೆ ಮತ್ತಷ್ಟು ಭಕ್ತಿ ಮತ್ತು ಸಂತಸ ತುಂಬಿದ ಆ ಕ್ಷಣಗಳನ್ನು ಮೆಚ್ಚಿಕೊಂಡಿದ್ದಾರೆ.

ದೀಪಾವಳಿಯ ಬೆಳಕಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಾರಿ ಕ್ರಿಕೆಟ್ ಲೋಕದ ವಿಶೇಷ ಅತಿಥಿಗಳ ಭೇಟಿ ಸಂತಸ ತಂದಿದೆ. ಭಾರತದ ಟಿ20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಮತ್ತು ಮಗಳು ರಿದ್ಧಿಮಾ ಸೇರಿದಂತೆ ಕುಟುಂಬದವರೊಂದಿಗೆ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿನ ಪುಟ್ಟ ಕ್ಷಣವೊಂದು ಈಗ ಗಮನ ಸೆಳೆಯುತ್ತಿದೆ. ಬಾಲಕಿ ಹಾಡಿದ ಭಜನೆಯನ್ನು ಮೋದಿ ಅವರು ಮನಸಾರೆ ಆಲಿಸಿದ್ದು, ಆಕೆಯ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Loading...

ಪ್ರಧಾನಿಯವರ ನಿವಾಸದಲ್ಲಿ ನಡೆದ ಈ ಭೇಟಿಯ ವಿಡಿಯೋವನ್ನು ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ರಾಮ್ ಮತ್ತು ಸರಯು ದೀಪಾವಳಿಯ ವಾತಾವರಣಕ್ಕೆ ಆಗಮಿಸಿದ್ದಾರೆ. ಇದರಿಂದ ಹಬ್ಬದ ಸಂಭ್ರಮ ಮತ್ತಷ್ಟು ಪವಿತ್ರ ಮತ್ತು ದೈವಿಕವಾಗಿದೆ” ಎಂಬ ಅರ್ಥದ ಶೀರ್ಷಿಕೆಯನ್ನು ನೀಡಿದ್ದಾರೆ. ಕುಟುಂಬದವರೊಂದಿಗೆ ಆತ್ಮೀಯವಾಗಿ ಸಮಯ ಕಳೆದ ಮೋದಿ, ಬಾಲಕಿಯ ಭಜನೆಯನ್ನೂ ಆಲಿಸಿ ಸಂತಸಪಟ್ಟಿದ್ದಾರೆ.

ಇದನ್ನೂ ಓದಿ:

200 ರನ್​ ಕಷ್ಟವೇನಲ್ಲ… ಒಳ್ಳೆಯವರಿಗೆ ಒಳ್ಳೆದೇ ಆಗುತ್ತೆ…!

 

ಭರ್ಜರಿ ದಾಖಲೆ ಬರೆದಿದ್ದ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಆಟಗಾರ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಅವರು, ಭಾರತ ಪರ ಇದುವರೆಗೆ 113 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3,272 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಮತ್ತು 25 ಅರ್ಧಶತಕಗಳು ಸೇರಿವೆ. ಏಕದಿನ ಕ್ರಿಕೆಟ್‌ನಲ್ಲಿ 37 ಪಂದ್ಯಗಳಿಂದ 773 ರನ್ ಗಳಿಸಿದ್ದು, ಒಂದು ಟೆಸ್ಟ್ ಪಂದ್ಯವನ್ನೂ ಆಡಿದ್ದಾರೆ.

ಮೋದಿ ವಿಡಿಯೋ

ನಾಯಕನಾಗಿಯೂ ಯಶಸ್ವಿ

ಭಾರತದ ಟಿ20 ತಂಡವನ್ನು 52 ಪಂದ್ಯಗಳಲ್ಲಿ ಮುನ್ನಡೆಸಿರುವ ಸೂರ್ಯಕುಮಾರ್, 40 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಎಂಟು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಎರಡು ಪಂದ್ಯಗಳು ಟೈ ಆಗಿವೆ. ಇನ್ನು ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಅವರ ನಾಯಕತ್ವದಲ್ಲಿ ಭಾರತ ತಂಡ ಉತ್ತಮ ಗೆಲುವಿನ ದಾಖಲೆ ಹೊಂದಿದೆ.

ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆ

ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸೂರ್ಯಕುಮಾರ್ ಮತ್ತೆ ಉತ್ತಮ ಪ್ರದರ್ಶನ ನೀಡಬೇಕಿದೆ. ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಗುಳಿದಿದ್ದ ಅವರು, ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರ ಅನುಭವ ಮತ್ತು ಟಿ20 ಕ್ರಿಕೆಟ್‌ನಲ್ಲಿನ ಸಾಧನೆ ಅಭಿಮಾನಿಗಳಲ್ಲಿ ಇನ್ನೂ ದೊಡ್ಡ ನಿರೀಕ್ಷೆ ಮೂಡಿಸಿದೆ.

ಈ ನಡುವೆ ಮೋದಿ ನಿವಾಸದಲ್ಲಿ ನಡೆದ ಕುಟುಂಬದ ಭೇಟಿಯ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದೆ. ಕ್ರಿಕೆಟ್ ಮೈದಾನದಲ್ಲಿ ತಮ್ಮ ಬ್ಯಾಟಿಂಗ್‌ನಿಂದ ಅಭಿಮಾನಿಗಳನ್ನು ರಂಜಿಸುವ ಸೂರ್ಯಕುಮಾರ್, ಈ ಬಾರಿ ಕುಟುಂಬದೊಂದಿಗೆ ಪ್ರಧಾನಿಯವರನ್ನು ಭೇಟಿಯಾಗಿ ದೀಪಾವಳಿಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us