Monsoon 2025: ಕೇರಳಕ್ಕೆ ಮೇ 25ರೊಳಗೆ ಮುಂಗಾರು ಪ್ರವೇಶ; ಕರ್ನಾಟಕದಲ್ಲೂ ಬೇಗ ಮಳೆಗಾಲ ಶುರು

ಮಾನ್ಸೂನ್‌ಗೂ ಮುಂಚಿತವಾಗಿ ಮೇ 24ರವರೆಗೆ ಕೇರಳ, ತಮಿಳುನಾಡು, ಕರ್ನಾಟಕ, ಪುದುಚೇರಿ, ಕಾರೈಕಲ್, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಈ ಬಾರಿ ಮುಂಚಿತವಾಗಿ ಮಳೆ ಆರಂಭವಾಗುವುದರಿಂದ ಬಿಸಿಲಿನ ಬೇಗೆ ಕಡಿಮೆಯಾಗುವುದಲ್ಲದೆ, ಅಕ್ಕಿ, ಜೋಳ, ಹತ್ತಿ, ಸೋಯಾಬೀನ್ ಮತ್ತು ಇತರ ಎಣ್ಣೆಬೀಜಗಳಂತಹ ಬೆಳೆಗಳ ಬಿತ್ತನೆಯೂ ಹೆಚ್ಚಾಗುತ್ತದೆ.

Monsoon 2025: ಕೇರಳಕ್ಕೆ ಮೇ 25ರೊಳಗೆ ಮುಂಗಾರು ಪ್ರವೇಶ; ಕರ್ನಾಟಕದಲ್ಲೂ ಬೇಗ ಮಳೆಗಾಲ ಶುರು
Rainfall

Updated on: May 20, 2025 | 8:45 PM

ನವದೆಹಲಿ, ಮೇ 20: ನೈಋತ್ಯ ಮಾನ್ಸೂನ್ (Monsoon 2025) ಮುಂದಿನ 4ರಿಂದ 5 ದಿನಗಳಲ್ಲಿ ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರತಿ ವರ್ಷ ಜೂನ್ ತಿಂಗಳ ಆರಂಭದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿತ್ತು. ಆದರೆ ಈ ವರ್ಷ ಬಹಳ ಮುಂಚೆಯೇ ಆಗಬಹುದು. ಐಎಂಡಿ ಈ ಹಿಂದೆ ಮೇ 27ರ ವೇಳೆಗೆ ಮಾನ್ಸೂನ್ ಕೇರಳವನ್ನು ತಲುಪುತ್ತದೆ ಎಂದು ನಿರೀಕ್ಷಿಸಿತ್ತು. ಆದರೆ, ಅದಕ್ಕೂ 2-3 ದಿನಗಳು ಮುಂಚಿತವಾಗಿಯೇ ಮಾನ್ಸೂನ್ ಆಗಮನವಾಗುವ ಸಾಧ್ಯತೆಯಿದೆ. ಮುಂಚಿತವಾಗಿ ಮಳೆಯಾಗುವುದರಿಂದ ಬಿಸಿಲಿನ ಬೇಗೆ ಕಡಿಮೆಯಾಗುವುದಲ್ಲದೆ, ಭತ್ತ, ಜೋಳ, ಹತ್ತಿ, ಸೋಯಾಬೀನ್ ಮತ್ತು ಇತರ ಎಣ್ಣೆಬೀಜಗಳಂತಹ ಬಂಪರ್ ಬೆಳೆಗಳ ಬಿತ್ತನೆಯೂ ಹೆಚ್ಚಾಗುತ್ತದೆ.

“ಪ್ರಸ್ತುತ ಇರುವ ವೇಗದಲ್ಲಿಯೇ ಮಳೆ ಮುಂದುವರೆದರೆ ಮತ್ತು ಇತರ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಮುಂದಿನ 4-5 ದಿನಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗುವ ಸಾಧ್ಯತೆಯಿದೆ” ಎಂದು ಐಎಂಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ, ಮಾನ್ಸೂನ್ ಮೇ 30ರಂದು ಕೇರಳದ ಕರಾವಳಿಯನ್ನು ತಲುಪಿತು. ಇದಕ್ಕೂ ಮೊದಲು ಜೂನ್ 8 (2023), ಮೇ 29 (2022), ಜೂನ್ 3 (2021) ಮತ್ತು ಜೂನ್ 1 (2020)ರಂದು ಕೇರಳದಲ್ಲಿ ಮುಂಗಾರು ಪ್ರವೇಶವಾಗಿತ್ತು.

ಇದನ್ನೂ ಓದಿ: Karnataka Rains: ಕರ್ನಾಟಕದ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್​, ಬೆಂಗಳೂರಲ್ಲೂ ಮೇ26ರವರೆಗೆ ಭಾರಿ ಮಳೆ

ಇದನ್ನೂ ಓದಿ
Bangalore Rains: ಬೆಂಗಳೂರಿನಲ್ಲಿ ಮಧ್ಯಾಹ್ನದಿಂದಲೇ ಶುರುವಾದ ಮಳೆ
ಬೆಂಗಳೂರಲ್ಲಿ ಮೇ 17ರಿಂದ ಭಾರಿ ಮಳೆ
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ
ಸಿಡಿಲಿಗೆ ಒಂದೇ ದಿನ ಐವರು ಸಾವು: ಈ ಸಿಡಿಲಿನಿಂದ ತಪ್ಪಿಸಿಕೊಳ್ಳುವುದ್ಹೇಗೆ?

ನೈಋತ್ಯ ಮಾನ್ಸೂನ್ ಭಾರತದ ಕೃಷಿ ಆರ್ಥಿಕತೆಗೆ ಅತ್ಯಗತ್ಯವಾಗಿದ್ದು, ವಾರ್ಷಿಕ ಮಳೆಯ ಸುಮಾರು 70%ರಷ್ಟು ಭಾಗವನ್ನು ಹೊಂದಿದೆ. ಇದು ದೇಶದ ನಿವ್ವಳ ಬಿತ್ತನೆ ಪ್ರದೇಶದ ಸುಮಾರು 51% ಅನ್ನು ಬೆಂಬಲಿಸುತ್ತದೆ.

ಮೇ 13ರಂದು ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಮಾನ್ಸೂನ್ ನಿಗದಿತ ಸಮಯಕ್ಕಿಂತ 2 ದಿನ ಮುಂಚಿತವಾಗಿ ಪ್ರವೇಶಿಸಿತ್ತು. ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಹೆಚ್ಚಿನ ಭಾಗಗಳು ಅದರಲ್ಲೂ ಲಕ್ಷದ್ವೀಪದ ಕೆಲವು ಭಾಗಗಳು, ಕೇರಳ, ತಮಿಳುನಾಡು, ಕರ್ನಾಟಕ, ದಕ್ಷಿಣ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಈಶಾನ್ಯ ಬಂಗಾಳ ಕೊಲ್ಲಿಯ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಇದನ್ನೂ ಓದಿ: Karnataka Rains: ಭಾರಿ ಮಳೆಗೆ ಕರ್ನಾಟಕದಲ್ಲಿ 4 ಸಾವು, ಬೆಂಗಳೂರಿನಲ್ಲಿ ಇನ್ನೂ 3 ದಿನ ವರ್ಷಧಾರೆ

ಈ ವರ್ಷ ದೇಶಾದ್ಯಂತ ನೈಋತ್ಯ ಮಾನ್ಸೂನ್ ಋತುಮಾನದ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಮೇ 22ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳು ರೆಡ್ ಅಲರ್ಟ್‌ನಲ್ಲಿವೆ. ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಮೇ 24ರವರೆಗೆ ಭಾರೀ ಮಳೆಯಾಗುವ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ