ಮುಂಬೈ ದಾಳಿಯ ಮಾಸ್ಟರ್ಮೈಂಡ್ ರಾಣಾಗೆ NIA ಕಚೇರಿಯಲ್ಲಿ ಭಾರಿ ಭದ್ರತೆ: 24/7 ಪೊಲೀಸ್ ಸೇರಿ ಸಿಸಿಟಿವಿ ಕಣ್ಗಾವಲು
ಮುಂಬೈನಲ್ಲಿ 2008ರಂದು ಉಗ್ರರ ದಾಳಿಯ ರೂವಾರಿ ಆಗಿರುವ ರಾಣಾನನ್ನು ಸೂಕ್ತ ಭದ್ರತೆಯೊಂದಿಗೆ ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ಕಚೇರಿಯ ನೆಲಮಡಿಯಲ್ಲಿ ಆತ್ಮಹತ್ಯೆ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಸದ್ಯ ರಾಣಾನನ್ನು 18 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ದೆಹಲಿ, ಏಪ್ರಿಲ್ 12: ಭಾರತಕ್ಕೆ ಬಂದಿಳಿದಿರುವ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವುರ್ ರಾಣಾನನ್ನು (Tahawwur Rana) ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮೊನ್ನೆಯಷ್ಟೇ ಕೋರ್ಟ್ಗೆ ಹಾಜರು ಪಡಿಸಲಾಗಿದ್ದು, ಜಡ್ಜ್ 18 ದಿನಗಳ ಕಾಲ ರಾಣಾನನ್ನು NIA ಕಸ್ಟಡಿಗೆ ನೀಡಿ ಆದೇಶಿಸಿತ್ತು. ಸದ್ಯ ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಧಾನ ಕಚೇರಿಯ ನೆಲ ಮಹಡಿಯಲ್ಲಿರುವ 14×14 ಅಡಿ ಸೆಲ್‌ನಲ್ಲಿ ಇರಿಸಲಾಗಿದ್ದು, ತಮಗೆ ತಾವೇ ಹಾನಿ ಮಾಡಿಕೊಳ್ಳದಂತೆ ಆತ್ಮಹತ್ಯೆ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಜೊತೆಗೆ 24 ಗಂಟೆ ಪೊಲೀಸ್ ಸೇರಿದಂತೆ ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ವರದಿ ಆಗಿದೆ.
ರಾಣಾನನ್ನು ಬರೋಬ್ಬರಿ 17 ವರ್ಷಗಳ ಬಳಿಕ ಭಾರತಕ್ಕೆ ಕರೆತರಲಾಗಿದೆ. ಎನ್ಐಎ ಅಧಿಕಾರಿಗಳು ಕೋಳ ತೊಡಿಸಿ ಆತನನ್ನು ಎಳೆದು ತಂದಿದ್ದಾರೆ. ತಹವ್ವುರ್ ರಾಣಾ ಪಾಕ್ ಮೂಲತಃ ಪಾಕಿಸ್ತಾನ ಮೂಲದವನಾಗಿದ್ದಾನೆ. ಸದ್ಯ ಈತನನ್ನು ಲೋಧಿ ರಸ್ತೆಯಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯ ನೆಲ ಮಹಡಿಯಲ್ಲಿ ಸೂಕ್ತ ಭದ್ರತೆಯಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಬಂಧನ
ಸದ್ಯ ರಾಣಾನನ ವಿಚಾರಣೆ ನಡೆಸುತ್ತಿರುವ ಎನ್ಐಎ ತಂಡ ಇತ್ತ ಪಾಕಿಸ್ತಾನ ಆರ್ಮಿಯಲ್ಲಿ ವೈದ್ಯನಾಗಿ ಸಲ್ಲಿಸಿದ ಸೇವೆಯಿಂದ ಹಿಡಿದು, ಮುಂಬೈ ದಾಳಿಯ ಸುಪಾರಿ ಕೊಟಿದ್ದು ಯಾರು ಮತ್ತು ಹೇಗೆ ಕೊಟ್ಟರು, ಪಾಕಿಸ್ತಾನದ ಐಎಸ್ಐ ಜತೆ ಸಂಪರ್ಕದಲ್ಲಿದ್ದನಾ? ಅಥವಾ ಇತನೇ ಐಎಸ್‌ಎ ಎಜೆಂಟ್‌ನಾ? ಇತನ ಜತೆ ಭಾರತದಲ್ಲಿ ಸಂಪರ್ಕದಲ್ಲಿದ್ದವರು ಯಾರು ಯಾರು? ಸ್ಲಿಪರ್ ಸೆಲ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದವರು ಯಾರು? ಇನ್ನೂ ಈ ಸ್ಲೀಪರ್ ಸೆಲ್‌ಗಳು ಆ್ಯಕ್ಟಿವ್ ಆಗಿವೆಯಾ? ಎಂಬ ಹತ್ತು ಹಲವಾರು ಪ್ರಶ್ನೆಗಳು ಮತ್ತು ಆಯಾಮಗಳ ಮೇಲೆ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಅಮೆರಿಕದಿಂದ ಭಾರತಕ್ಕೆ ಬಂದಿಳಿದ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾ
ಮುಂಬೈನಲ್ಲಿ 2008ರಂದು ಉಗ್ರರ ದಾಳಿಯ ರೂವಾರಿ ಆಗಿರುವ ರಾಣಾಗೆ ಎನ್ಐಎ ವಿಚಾರಣೆ ನಡೆಸಿ ಸತ್ಯ ಕಕ್ಕಿಸುತ್ತಿದೆ. 26/11ರಂದು 166ಕ್ಕೂ ಹೆಚ್ಚು ಅಮಾಯಕ ಪ್ರಾಣ ತೆಗೆದಿದ್ದ ರಾಣಾ ಮತ್ತಷ್ಟು ಸ್ಪೋಟಕ ಸಂಗತಿ ಬಾಯಿ ಬಿಡುವ ಸಾಧ್ಯತೆ ಇದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಇನ್ನು ಮುಂಬೈ ದಾಳಿ ಮಾಸ್ಟರ್ ಮೈಂಡ್ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆದುಕೊಂಡು ಬಂದಿರುವುದು ಸದ್ಯ ಕೇಂದ್ರ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬೆಳವಣಿಗೆಗಳಿಂದ ಪ್ರಧಾನಿ ಮೋದಿ ಸರ್ಕಾರ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದೆ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.