AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈಯಲ್ಲಿ ಉಚಿತ ಆಕ್ಸಿಜನ್ ಪೂರೈಕೆ ಯೋಜನೆ ಆರಂಭಿಸುವುದಕ್ಕಾಗಿ ಎಸ್​ಯುವಿ ಮಾರಿದ ಶಹನವಾಜ್ ಶೇಖ್

Shahnawaz Shaikh: ಮಲಾಡ್ ಪ್ರದೇಶದಲ್ಲಿರುವ ಮಲ್ವನಿ ಓಣಿಯ ಹೀರೋ ಆಗಿದ್ದಾರೆ ಶಹನವಾಜ್ ಶೇಖ್. ಯೂನಿಟಿ ಅಂಡ್ ಡಿಗ್ನಿಟಿ ಫೌಂಡೇಷನ್ ಎಂಬ ಸಂಸ್ಥೆಯ ಮೂಲಕ ಶೇಖ್ ಉಚಿತ ಆಕ್ಸಿಜನ್ ಪೂರೈಸುತ್ತಿದ್ದಾರೆ.  ಆಕ್ಸಿಜನ್ ಅಗತ್ಯವಿರುವ ಜನರಿಗೆ ಆಕ್ಸಿಜನ್ ಖರೀದಿಸಿ ಕೊಡುವುದಕ್ಕಾಗಿ ಶೇಖ್ ತನ್ನ ಬಳಿ ಇದ್ದ ಫೋರ್ಡ್ ಎಂಡೀವರ್ ಕಾರು ಮಾರಿದ್ದರು.

ಮುಂಬೈಯಲ್ಲಿ ಉಚಿತ ಆಕ್ಸಿಜನ್ ಪೂರೈಕೆ ಯೋಜನೆ ಆರಂಭಿಸುವುದಕ್ಕಾಗಿ ಎಸ್​ಯುವಿ ಮಾರಿದ ಶಹನವಾಜ್ ಶೇಖ್
ಶಹನವಾಜ್ ಶೇಖ್
ರಶ್ಮಿ ಕಲ್ಲಕಟ್ಟ
|

Updated on: Apr 22, 2021 | 7:11 PM

Share

ಮುಂಬೈ: ಕೊವಿಡ್ ರೋಗದಿಂದ ದೇಶಕ್ಕೆ ದೇಶವೇ ತತ್ತರಿಸುತ್ತಿದ್ದು, ಜನರು ಆಕ್ಸಿಜನ್ ಸಿಗದೆ ಸಂಕಷ್ಟಕ್ಕೀಡಾಗಿದ್ದಾರೆ. ಹಲವಾರು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದಿದ್ದು, ಜನರು  ತಮ್ಮ ಕುಟುಂಬದವರ ಸ್ನೇಹಿತರ ಜೀವ ಉಳಿಸುವುದಕ್ಕಾಗಿ ಅಲೆಯುತ್ತಿದ್ದಾರೆ.  ಈ ಎಲ್ಲ  ನೋವಿನ ಘಟನೆಗಳ ನಡುವೆಯೇ  ಮುಂಬೈಯ ಈ ವ್ಯಕ್ತಿ ಜೀವ ರಕ್ಷಕ ಆಕ್ಸಿಜನ್ ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ. ಇವರ ಹೆಸರು ಶಹನವಾಜ್ ಶೇಖ್. ಉಚಿತ ಆಕ್ಸಿಜನ್ ಪೂರೈಕೆ ಯೋಜನೆಗಾಗಿ ಶಹನವಾಜ್ ಕಳೆದ ವರ್ಷ ತಮ್ಮ ಬಳಿ ಇದ್ದ ಎಸ್​ಯುವಿ ಮಾರಿದ್ದರು. ಇದೀಗ ಕೊವಿಡ್ ಸಂಕಷ್ಟ ಕಾಲದಲ್ಲಿ ಶಹನವಾಜ್ ಉಚಿತವಾಗಿ ಆಕ್ಸಿಜನ್ ಪೂರೈಸುವ ಕಾಯಕ ಮುಂದುವರಸಿದ್ದಾರೆ.

ಇಲ್ಲಿನ ಮಲಾಡ್ ಪ್ರದೇಶದಲ್ಲಿರುವ ಮಲ್ವನಿ ಓಣಿಯ ಹೀರೋ ಆಗಿದ್ದಾರೆ ಶಹನವಾಜ್ ಶೇಖ್. ಯೂನಿಟಿ ಅಂಡ್ ಡಿಗ್ನಿಟಿ ಫೌಂಡೇಷನ್ ಎಂಬ ಸಂಸ್ಥೆಯ ಮೂಲಕ ಶೇಖ್ ಉಚಿತ ಆಕ್ಸಿಜನ್ ಪೂರೈಸುತ್ತಿದ್ದಾರೆ.  ಆಕ್ಸಿಜನ್ ಅಗತ್ಯವಿರುವ ಜನರಿಗೆ ಆಕ್ಸಿಜನ್ ಖರೀದಿಸಿ ಕೊಡುವುದಕ್ಕಾಗಿ ಶೇಖ್ ತನ್ನ ಬಳಿ ಇದ್ದ ಫೋರ್ಡ್ ಎಂಡೀವರ್ ಕಾರು ಮಾರಿದ್ದರು. ಶೇಖ್ ಅವರ ಈ ಸಹಾಯ ಮನೋಭಾವ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಪಡೆದಿತ್ತು. ಕಳೆದ ವರ್ಷ ನಾವು ಈ ಯೋಜನೆ ಪ್ರಾರಂಭಿಸಿ ಸುಮಾರು 5,000 ರಿಂದ 6,000 ಜನರಿಗೆ ಆಮ್ಲಜನಕವನ್ನು ಒದಗಿಸಿದ್ದೇವೆ. ಈ ವರ್ಷ ನಗರದಲ್ಲಿ ಆಮ್ಲಜನಕದ ಕೊರತೆಯಿದೆ. ನಾವು ಮೊದಲು 50 ಕರೆಗಳನ್ನು ಮಾತ್ರ ಸ್ವೀಕರಿಸುತ್ತಿದ್ದೆವು ಈಗ ನಮಗೆ 500 ರಿಂದ 600 ಕರೆಗಳು ಬರುತ್ತವೆ ಎಂದು ಎನ್​ಡಿಟಿವಿ ಜತೆ ಮಾತನಾಡಿದ ಶೇಖ್ ಹೇಳಿದ್ದಾರೆ.

ಕೊವಿಡ್​ನ ಮೊದಲ ಅಲೆ ಕಾಣಿಸಿಕೊಂಡಾಗ ಅಗತ್ಯವಿರುವವರಿಗೆ ಆಮ್ಲಜನಕವನ್ನು ಉಚಿತವಾಗಿ ಪೂರೈಸುವ ಶೇಖ್ ಅವರ ಈ ಯೋಜನೆ ಆರಂಭವಾಗಿತ್ತು. ಶೇಖ್ ಅವರ ಸ್ನೇಹಿತನ ಸೋದರಸಂಬಂಧಿ ಕೊವಿಡ್ -19 ರಿಂದ ನಿಧನರಾಗಿದ್ದರು. ಸಮಯಕ್ಕೆ ಸರಿಯಾಗಿ ಅವರಿಗೆ ಆಮ್ಲಜನಕದ ಸಿಕ್ಕಿದ್ದರೆ ಅವರ ಜೀವವನ್ನು ಉಳಿಸಬಹುದಾಗಿತ್ತು ಎಂದು ತಿಳಿದಾಗ ಅತೀವ ಬೇಸರವಾಗಿತ್ತು. ಈ ಘಟನೆಯ ನಂತರ ಕೊವಿಡ್ ರೋಗಿಗಳಿಗೆ ಔಷಧಿ ಮತ್ತು ಆಮ್ಲಜನಕ ಸಿಲಿಂಡರ್ ಖರೀದಿಸಲು ಎಸ್​ಯು​ವಿ ಮಾರಿದೆ  ಅಂತಾರೆ ಇವರು.

ಶೇಖ್ ಅವರ ಈ ಕಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಪ್ರಶಂಸೆ ಮತ್ತು ಗೌರವವನ್ನು ಗಳಿಸುತ್ತಿದೆ. ಶಹನಾವಾಜ್ ಶೇಖ್ ಮತ್ತು ಅವರ ತಂಡದಂತಹ ಜನರು ನಿಜವಾದ ನಾಯಕರು ಎಂದು ಐಎಫ್ಎಸ್ ಅಧಿಕಾರಿ ಸುಧಾ ರಾಮೆನ್ ಬರೆದಿದ್ದಾರೆ.

ಕೊವಿಡ್ ರೋಗಿಗಳಿಗೆ ಸಹಾಯ ಮಾಡುತ್ತಿರುವ ಶಹನಾವಾಜ್ ಶೇಖ್‌ಗೆ ಶ್ಲಾಘನೆ ಎಂದು ಐಎಫ್‌ಎಸ್ ಸೀತಾನ್ಶು ಪಾಂಡೆ ಟ್ವೀಟ್ ಮಾಡಿದ್ದಾರೆ.

ಈ ಮೊದಲು, ಹಣದ ಕೊರತೆಯಿಂದಾಗಿ ನಮಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನಾನು ಈ ಹಿಂದೆ ಮಾರಿದ ಎಸ್​ಯುವಿಯನ್ನು ಮತ್ತೆ ಖರೀದಿಸಬಹುದು ಎಂದು ನಾನು ಭಾವಿಸಿದೆವು, ಇದೀಗ ಮುಖ್ಯವಾದುದು ಇತರರಿಗೆ ಸಹಾಯ ಮಾಡುವುದು. ನಾನು ನನ್ನ ಎಸ್ ಯುವಿ ಮತ್ತು ಇತರ ಕೆಲವು ವಸ್ತುಗಳನ್ನು ಮಾರಾಟ ಮಾಡಿದೆ. ಅದರಿಂದಲೇ ನಾವು ಇತರರಿಗೆ ಸಹಾಯ ಮಾಡಲು ಸಾಧ್ಯವಾಯಿತು ಅಂತಾರೆ ಶಹನವಾಜ್ ಶೇಖ್.

ಇದನ್ನೂ ಓದಿ: ಜೀವ ಪಣಕ್ಕಿಟ್ಟು ಮಗುವಿನ ಪ್ರಾಣ ಉಳಿಸಿದ, ಅದೇ ಪುಟಾಣಿಗೆ ಬಹುಮಾನದ ಅರ್ಧ ಹಣ ಕೊಟ್ಟ ರೈಲ್ವೆ ಉದ್ಯೋಗಿ: ಉದಾತ್ತ ಮನಸ್ಸಿಗೆ ನೆಟ್ಟಿಗರು ಫಿದಾ

(Mumbai Shahnawaz Shaikh sold his SUV last year to start an free oxygen supply scheme turning out to be a lifesaver for many)

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?