ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ, ಮೆಟ್ರೊ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ

| Updated By: ರಶ್ಮಿ ಕಲ್ಲಕಟ್ಟ

Updated on: Mar 06, 2022 | 1:44 PM

Narendra Modi ಎಂಐಟಿ ಮೈದಾನದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದಕ್ಕಾಗಿ ಅವರು ಗಾರ್ವೇರ್ ಕಾಲೇಜಿನಿಂದ ಆನಂದನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೊದಲ್ಲೇ ಪ್ರಯಾಣಿಸಿದರು.  ಶಾಲಾ ಮಕ್ಕಳೊಂದಿಗೆ ಮೆಟ್ರೊ ಸವಾರಿ ಮಾಡುತ್ತಿರುವ ಚಿತ್ರಗಳನ್ನೂ ಮೋದಿ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ, ಮೆಟ್ರೊ ರೈಲು ಯೋಜನೆಗೆ  ಪ್ರಧಾನಿ ಮೋದಿ ಚಾಲನೆ
ಪುಣೆಯಲ್ಲಿ ಪ್ರಧಾನಿ ಮೋದಿ ಮೆಟ್ರೊ ರೈಲು ಪಯಣ
Follow us on

ಪುಣೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಮಹಾರಾಷ್ಟ್ರದ ಪುಣೆಯಲ್ಲಿ ಮಹಾನ್ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) 9.5 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ  32.2 ಕಿಮೀ  ಮೆಟ್ರೊ ರೈಲು ಯೋಜನೆಯಲ್ಲಿ 12 ಕಿಮೀ ಹಿರಿದಾಗಿಸಿದ  ಮೆಟ್ರೊ ಮಾರ್ಗಕ್ಕೆ ಚಾಲನೆ ನೀಡಿದರು. ಎಂಐಟಿ ಮೈದಾನದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದಕ್ಕಾಗಿ ಅವರು ಗಾರ್ವೇರ್ ಕಾಲೇಜಿನಿಂದ ಆನಂದನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೊದಲ್ಲೇ ಪ್ರಯಾಣಿಸಿದರು.  ಶಾಲಾ ಮಕ್ಕಳೊಂದಿಗೆ ಮೆಟ್ರೊ ಸವಾರಿ ಮಾಡುತ್ತಿರುವ ಚಿತ್ರಗಳನ್ನೂ ಮೋದಿ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.  ಪುಣೆ ನಗರ ಸಂಚಾರಕ್ಕಾಗಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಮೆಟ್ರೊ ಯೋಜನೆಗೆ ಡಿಸೆಂಬರ್ 24, 2016 ರಂದು ಮೋದಿಯವರೇ ಅಡಿಗಲ್ಲು ಹಾಕಿದ್ದರು. ಈ ಯೋಜನೆಯನ್ನು ಒಟ್ಟು ₹11,400 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪುಣೆ ಮೆಟ್ರೊ ಅಲ್ಯೂಮಿನಿಯಂ ಬಾಡಿ ಕೋಚ್‌ಗಳನ್ನು ಹೊಂದಿರುವ ದೇಶದ ಮೊದಲ ಯೋಜನೆಯಾಗಿದೆ. ಇದನ್ನು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತದೆ.


ಪುಣೆ ಮೆಟ್ರೊದ ಶಂಕುಸ್ಥಾಪನೆಗೆ ನೀವು ನನ್ನನ್ನು ಕರೆದಿದ್ದೀರಿ. ಈಗ ಅದನ್ನು ಅರ್ಪಿಸಲು ನನಗೆ ಅವಕಾಶ ನೀಡಿರುವುದು ನನ್ನ ಅದೃಷ್ಟ. ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು ಎಂಬ ಸಂದೇಶವೂ ಇದರಲ್ಲಿದೆ ಎಂದು ಎಂಐಟಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ಪುಣೆಯಲ್ಲಿ ಮುಲಾ-ಮುತಾ ನದಿ ಯೋಜನೆಗಳ ಪುನರುಜ್ಜೀವನ ಮತ್ತು ಮಾಲಿನ್ಯ ನಿವಾರಣೆ ಯೋಡನೆಗೆ ಅಡಿಪಾಯ ಹಾಕಿದರು. ₹1080 ಕೋಟಿಗೂ ಹೆಚ್ಚು ವೆಚ್ಚದ ಈ ಯೋಜನೆಯಡಿ ನದಿಯ 9 ಕಿ.ಮೀ ವ್ಯಾಪ್ತಿಯಲ್ಲಿ ಕಾಯಕಲ್ಪ ಮಾಡಲಾಗುವುದು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಿವಾಜಿ ಪ್ರತಿಮೆಯು ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಬೆಳೆಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಯುದ್ಧ ಯಾರಿಗೂ ಬೇಕಾಗಿಲ್ಲ ಎಂಬುದನ್ನು ವ್ಲಾದಿಮಿರ್​ ಪುಟಿನ್​ಗೆ ಅರ್ಥ ಮಾಡಿಸಿ; ಪ್ರಧಾನಿ ಮೋದಿಗೆ ಉಕ್ರೇನ್​ ವಿದೇಶಾಂಗ ಸಚಿವರ ಮನವಿ

Published On - 1:27 pm, Sun, 6 March 22