ಕಾಂಗ್ರೆಸ್ ಜತೆ ಪ್ರಾದೇಶಿಕ ಪಕ್ಷಗಳು ವಿಲೀನ: ಶರದ್ ಪವಾರ್ ಏನಂದ್ರು?
ಸಣ್ಣ ಪಕ್ಷಗಳ ಜತೆ ಪ್ರಾದೇಶಿಕ ಪಕ್ಷಗಳ ವಿಲೀನ ವಿಚಾರ ಕುರಿತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ(Lok Sabha Election)ಯ ನಾಲ್ಕನೇ ಹಂತ ಮತದಾನಕ್ಕೂ ಮುನ್ನ ಮಹಾರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್ ಜತೆ ಪ್ರಾದೇಶಿಕ ಪಕ್ಷಗಳ ವಿಲೀನ ವಿಚಾರ ತೀವ್ರವಾಗಿ ಚರ್ಚೆಯಾಗುತ್ತಿದೆ. ಸಂದರ್ಶನವೊಂದರಲ್ಲಿ ಶರದ್ ಪವಾರ್ ಮುಂದಿನ ಕೆಲವು ವರ್ಷಗಳಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಲಬಹುದು ಎಂದು ಹೇಳಿದ್ದರು.
ಶರದ್ ಪವಾರ್ ಹೇಳಿಕೆಗೆ ಬಿಜೆಪಿ ಹಾಗೂ ಶಿವಸೇನೆ, ಎನ್ಸಿಪಿ ವಿರೋಧ ವ್ಯಕ್ತಪಡಿಸಿದರೆ, ಕಾಂಗ್ರೆಸ್, ಉದ್ಧವ್ ಠಾಕ್ರೆ ಬಣ ಮತ್ತು ಸುಪ್ರಿಯಾ ಸುಳೆ ಶರದ್ ಪವಾರ್(Sharad Pawar) ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಿಮ್ಮ ಪಕ್ಷವೂ ವಿಲೀನಗೊಳ್ಳುವುದೇ ಎಂದು ಕೇಳಿದಾಗ ಕಾಂಗ್ರೆಸ್ ಹಾಗೂ ನಮ್ಮ ಪಕ್ಷದ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಇವರೆಡೂ ನೆಹರೂ ಹಾಗೂ ಗಾಂಧಿ ಸಿದ್ಧಾಂತವನ್ನು ಅನುಸರಿಸುತ್ತವೆ ಎಂದು ಹೇಳಿದ್ದರು.
ಈ ಕುರಿತು ಪೃಥ್ವಿರಾಜ್ ಚವಾಣ್ ಮಾತನಾಡಿ, ಪವಾರ್ ಅವರು ಈ ಹೇಳಿಕೆ ನೀಡಿದಾಗ ನಾನು ಅಲ್ಲಿದ್ದೆ, ಎಲ್ಲವೂ ಜೂನ್ 4ರಂದು ಚುನಾವಣಾ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಜೂನ್ 4ರ ನಂತರ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಇರುತ್ತದೆ. ಅಧಿಕಾರದ ಲಾಭ ಪಡೆಯಲು ಕೆಲವು ಪಕ್ಷಗಳು ಇಂಡಿಯಾ ಬ್ಲಾಕ್ ಸೇರಬಹುದು ಅಥವಾ ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಳಬಹುದು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:Sharad Pawar: ಶರದ್ ಪವಾರ್ ಬಣಕ್ಕೆ ಹೊಸ ಹೆಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಶರದ್ಚಂದ್ರ ಪವಾರ್
ಆದರೆ ಇದೆಲ್ಲಾ ಹೇಳಿಕೆಗಳ ಬಳಿಕ ಶರದ್ ಪವಾರ್ ಉಲ್ಟಾ ಹೊಡೆದಿದ್ದು, ತಮ್ಮ ಪಕ್ಷ ಕಾಂಗ್ರೆಸ್ ಜತೆಗೆ ವಿಲೀನವಾಗುತ್ತೆ ಎಂದು ನಾನು ಎಂದೂ ಹೇಳಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದರು.
ಎನ್ಸಿಪಿ ಹಾಗೂ ಕಾಂಗ್ರೆಸ್ 2001ರಿಂದೀಚೆಗೆ ಜತೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸಚಿವ ಸಂಪುಟದಲ್ಲಿ ಕೂಡ ಜತೆಗಿದ್ದವು. ಜಂಟಿಯಾಗಿ ಚುನಾವಣೆ ಎದುರಿಸಿದ್ದವು ಎಂಬುದು ಗಮನಾರ್ಹ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ