AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ

ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆಗಳ ನಡುವೆ, ಮೋದಿ 3.0 ಸರ್ಕಾರದ ಅವಧಿಗೆ ಪ್ರತಿಭಟನೆಗಳನ್ನು ಭವಿಷ್ಯ ನುಡಿದಿದ್ದ ಅರವಿಂದ್ ಅವರ ಎರಡು ವರ್ಷಗಳ ಹಳೆಯ ಪೋಸ್ಟ್ ವೈರಲ್ ಆಗಿದೆ. ನೀಟ್ ಅಕ್ರಮ, ರೈತರು, ವೈದ್ಯರ ಹೋರಾಟಗಳು ನುಡಿದಂತೆ ನಡೆಯುತ್ತಿದ್ದು, ಇದು ರಾಜಕೀಯ ವೈಫಲ್ಯಗಳನ್ನು ಸೂಚಿಸುತ್ತದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಸಾಮಾನ್ಯ ಊಹೆ ಎನ್ನುತ್ತಿದ್ದಾರೆ. ಈ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ.

ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ
ಪ್ರತಿಭಟನೆ
ನಯನಾ ರಾಜೀವ್
|

Updated on: Jul 22, 2026 | 9:37 AM

Share

ನವದೆಹಲಿ, ಜುಲೈ 22: ದೇಶಾದ್ಯಂತ ಈಗ ನೀಟ್ ಪರೀಕ್ಷೆ(NEET Exam) ಸೋರಿಕೆ, ವಿದ್ಯಾರ್ಥಿಗಳ ಆಕ್ರೋಶ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಬರೋಬ್ಬರಿ ಎರಡು ವರ್ಷಗಳ ಹಿಂದೆ ಮಾಡಲಾಗಿದ್ದ ಪೋಸ್ಟ್​ ಈಗ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2024ರ ಜೂನ್ 8ರಂದು, ಅಂದರೆ ನರೇಂದ್ರ ಮೋದಿ ಅವರ 3.0 ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅರವಿಂದ್ ಎಂಬ ಎಕ್ಸ್​ ಬಳಕೆದಾರರು ಮೋದಿ ಆಡಳಿತಾವಧಿಯಲ್ಲಿ ದೇಶಾದ್ಯಂತ ನಡೆಯಬಹುದಾದ ಸರಣಿ ಪ್ರತಿಭಟನೆಗಳ ಬಗ್ಗೆ ಮುನ್ಸೂಚನೆ ನೀಡಿ ಪೋಸ್ಟ್​ ಒಂದನ್ನು ಮಾಡಿದ್ದರು.

ಅರವಿಂದ್ ಮಾಡಿದ್ದ ಎರಡು ವರ್ಷಗಳ ಹಳೆಯ ಪೋಸ್ಟ್​ನಲ್ಲೇನಿತ್ತು?

ಮೋದಿ 3.0 ಸರ್ಕಾರದ ಅವಧಿಯಲ್ಲಿ ನಡೆಯಲಿವೆ ಸಾಲು ಸಾಲು ಪ್ರತಿಭಟನೆಗಳು

ನೀಟ್ (NEET) ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳು

ಐಎಂಎ (IMA) ವೈದ್ಯರ ಪ್ರತಿಭಟನೆಗಳು

ರೈತರ ಭಾರಿ ಆಂದೋಲನ

ಮುಸ್ಲಿಂ ಸಮುದಾಯದ ನೇತೃತ್ವದ ಪ್ರತಿಭಟನೆಗಳು

ವಿದೇಶಗಳಲ್ಲಿ ಖಾಲಿಸ್ತಾನಿ ಬೆಂಬಲಿಗರ ಪ್ರತಿಭಟನೆಗಳು

ಮತ್ತಷ್ಟು ಓದಿ:

ಸೋನಮ್ ವಾಂಗ್ಚುಕ್ 3 ವಾರಗಳ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಷರತ್ತು ವಿಧಿಸಿದ ಪತ್ನಿ

ಪೋಸ್ಟ್ ವೈರಲ್ ಆಗಲು ಪ್ರಸ್ತುತ ಕಾರಣವೇನು?

ಮೇ 3 ರಂದು ನಡೆದಿದ್ದ 2026 ರ ನೀಟ್ (NEET-UG) ಪರೀಕ್ಷೆಗೆ ಸುಮಾರು 22.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅದಕ್ಕೆ ಹುಸಿ ಪ್ರಶ್ನೆಪತ್ರಿಕೆಗಳ ದಂಧೆ ಸಾಕ್ಷಿಯಾದ ಹಿನ್ನೆಲೆಯಲ್ಲಿ ಇಡೀ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಪ್ರಸ್ತುತ ಸಿಬಿಐ ತನಿಖೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರು ಬೀದಿಗಿಳಿದು ನಡೆಸುತ್ತಿರುವ ಪ್ರತಿಭಟನೆಗಳು ಪೋಲಿಸ್ ಘರ್ಷಣೆಗೂ ಕಾರಣವಾಗಿವೆ.

ಪೋಸ್ಟ್​

ಅರವಿಂದ್ ಅವರು 2024 ರಲ್ಲೇ ಉಲ್ಲೇಖಿಸಿದಂತೆ ನೀಟ್ ವಿವಾದ, ರೈತರ ಭಾರಿ ‘ದೆಹಲಿ ಚಲೋ’ ಆಂದೋಲನ ಹಾಗೂ ವೈದ್ಯರ ಪ್ರತಿಭಟನೆಗಳು ಒಂದೊಂದಾಗಿ ನಿಜವಾಗುತ್ತಿರುವುದನ್ನು ಕಂಡು ಅನೇಕ ನೆಟ್ಟಿಗರು ಇವರ ಮುನ್ಸೂಚನೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಇಬ್ಬಗೆಯ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಪ್ರಸ್ತುತ ದೇಶದಲ್ಲಿ ಯುವಜನರ ಆಕ್ರೋಶ, ಪರೀಕ್ಷಾ ಪಾರದರ್ಶಕತೆ ಕೊರತೆ ಮತ್ತು ವೈದ್ಯರ ಮೇಲಿನ ಹಿಂಸಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವ ಜನರು, ಈ ಭವಿಷ್ಯವಾಣಿಯು ರಾಜಕೀಯ ಹಾಗೂ ಸಾಂಸ್ಥಿಕ ವೈಫಲ್ಯಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದೆ ಎಂದು ಶ್ಲಾಘಿಸುತ್ತಿದ್ದಾರೆ.

ವಿಮರ್ಶಕರ ವಾದ: ಮತ್ತೊಂದೆಡೆ, ಈ ಭವಿಷ್ಯವಾಣಿಯನ್ನು ಸಾಮಾನ್ಯ ಪ್ರವೃತ್ತಿ ಎಂದಿರುವ ವಿಮರ್ಶಕರು, 2024 ರ ಕಾಲಘಟ್ಟದಲ್ಲೂ ನೀಟ್ ಅಕ್ರಮಗಳು, ರೈತರ ಸಮಸ್ಯೆಗಳು ಹಾಗೂ ವೈದ್ಯರ ಪ್ರತಿಭಟನೆಗಳು ಸಾಮಾನ್ಯವಾಗಿದ್ದವು. ಹೀಗಾಗಿ ಇದು ಯಾವುದೇ ದೈವಿಕ ಭವಿಷ್ಯವಲ್ಲ, ಬದಲಿಗೆ ಸನ್ನಿವೇಶದ ಸಹಜ ಊಹೆ ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?