ಮೋದಿ ಉಂಗುರದಿಂದ ಹಿಡಿದು ರಾಜನಾಥ್ ಸಿಂಗ್ ಹೊಂದಿರುವ ಪೈಪ್ಗನ್ವರೆಗೆ ಯಾವ್ಯಾವ ಸಚಿವರ ಆಸ್ತಿ ಎಷ್ಟೆಷ್ಟಿದೆ?
ಯಾವ ಸಚಿವರ ಆಸ್ತಿ(Asset) ಎಷ್ಟಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿರುತ್ತದೆ. ಹಲವರು ಕೇಂದ್ರ ಸಚಿವರ ಆಸ್ತಿಯನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಮಾರ್ಚ್ 31ರಂದು ಪ್ರಧಾನಿ ಕಚೇರಿಗೆ ಸಚಿವರು ಸಲ್ಲಿಸಿರುವ ಆಸ್ತಿ ಘೋಷಣೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಈ ಬಾರಿ ಹೊಸದಾಗಿ ಚರ, ಸ್ಥಿರ ಆಸ್ತಿ ಜತೆಗೆ ಕ್ರಿಪ್ಟೋ ಕರೆನ್ಸಿ ಹಾಗೂ ತಮ್ಮ ಬಳಿ ಇರುವ ಮರಗಳ ಲೆಕ್ಕಗಳನ್ನು ಕೊಟ್ಟಿದ್ದು ವಿಶೇಷವಾಗಿದೆ.

ನವದೆಹಲಿ, ಸೆಪ್ಟೆಂಬರ್ 12: ಯಾವ ಸಚಿವರ ಆಸ್ತಿ(Asset) ಎಷ್ಟಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿರುತ್ತದೆ. ಹಲವರು ಕೇಂದ್ರ ಸಚಿವರ ಆಸ್ತಿಯನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಮಾರ್ಚ್ 31ರಂದು ಪ್ರಧಾನಿ ಕಚೇರಿಗೆ ಸಚಿವರು ಸಲ್ಲಿಸಿರುವ ಆಸ್ತಿ ಘೋಷಣೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಈ ಬಾರಿ ಹೊಸದಾಗಿ ಚರ, ಸ್ಥಿರ ಆಸ್ತಿ ಜತೆಗೆ ಕ್ರಿಪ್ಟೋ ಕರೆನ್ಸಿ ಹಾಗೂ ತಮ್ಮ ಬಳಿ ಇರುವ ಮರಗಳ ಲೆಕ್ಕಗಳನ್ನು ಕೊಟ್ಟಿದ್ದು ವಿಶೇಷವಾಗಿದೆ.
ಪ್ರಧಾನಿ ಮೋದಿಯವರ ಒಟ್ಟು ಆಸ್ತಿ ಎಷ್ಟು?
ಪ್ರಧಾನಿ ಮೋದಿ ಓರ್ವ ಸರಳ ವ್ಯಕ್ತಿ, ಮೋದಿ ಅವರ ನಿವ್ವಳ ಆಸ್ತಿ 3,43,69,517 ರೂ. ಅವರು ಸಾಕಷ್ಟು ವರ್ಷಗಳಿಂದ ನಾಲ್ಕು ಉಂಗುರಗಳನ್ನು ಹೊಂದಿದ್ದಾರೆ.
ಇತರ ಮಂತ್ರಿಗಳ ಆಸ್ತಿ ಮೌಲ್ಯ ಎಷ್ಟು?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಟ್ಟು ನಿವ್ವಳ ಆಸ್ತಿ 65,57,13,399 ರೂ.ಗಳಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಒಟ್ಟು ಚರ ಆಸ್ತಿ 3,60,23,436 ರೂ.ಗಳಾಗಿದ್ದು, 1,47,30,580 ರೂ.ಗಳ ಕೃಷಿ ಭೂಮಿ ಮತ್ತು 1,87,50,000 ರೂ.ಗಳ ಮನೆಯನ್ನು ಹೊಂದಿದ್ದಾರೆ. ಹಾಗೆಯೇ ಅವರು ಒಂದು ರಿವಾಲ್ವರ್ ಮತ್ತು ಎರಡು ಪೈಪ್ ಗನ್‌ಗಳನ್ನು ಹೊಂದಿದ್ದಾರೆ.
ಮತ್ತಷ್ಟು ಓದಿ: ದೇಶದ ಶ್ರೀಮಂತ ಸಿಎಂಗಳು: ನಾಯ್ಡು ನಂ.1, ಸಿದ್ದರಾಮಯ್ಯ 3ನೇ ಸ್ಥಾನ, ಆಸ್ತಿ ಎಷ್ಟಿದೆ ಗೊತ್ತಾ?
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ವಸತಿ ಅಪಾರ್ಟ್‌ಮೆಂಟ್‌ಗಳ ಒಟ್ಟು ಮೌಲ್ಯ 4,95,20,000 ರೂ.ಗಳಾಗಿದ್ದು, ಅವರು ಮ್ಯೂಚುವಲ್ ಫಂಡ್‌ಗಳು ಮತ್ತು ಹೂಡಿಕೆಗಳಲ್ಲಿ 3,55,510 ರೂ.ಗಳನ್ನು ಹೊಂದಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆಲಂಗಾಣದಲ್ಲಿ 1,70,51,400 ರೂ.ಗಳ ವಸತಿ ಕಟ್ಟಡ ಮತ್ತು ರಾಜ್ಯದ ಕುಂಟ್ಲೂರ್ ಗ್ರಾಮದಲ್ಲಿ 17,08,800 ರೂ.ಗಳ ಕೃಷಿಯೇತರ ಭೂಮಿ ಹಾಗೂ ಬಜಾಜ್ ಚೇತಕ್ ಅನ್ನು ಹೊಂದಿದ್ದಾರೆ. ಅಲ್ಲದೆ, ಅವರು 11,65,878 ರೂ.ಗಳ ಬ್ಯಾಂಕ್ ಠೇವಣಿ, 3,34,322 ರೂ.ಗಳ ಪಿಪಿಎಫ್ ಮತ್ತು 19,61,243 ರೂ.ಗಳ ಮ್ಯೂಚುವಲ್ ಫಂಡ್‌ಗಳನ್ನು ಹೊಂದಿದ್ದಾರೆ.
ಹಣಕಾಸು ಸಚಿವರು 19 ವರ್ಷಗಳ ಗೃಹ ಸಾಲ ಮತ್ತು 10 ವರ್ಷಗಳ ಅಡಮಾನ ಸಾಲವನ್ನು ಸಹ ಹೊಂದಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಒಟ್ಟು ಮೌಲ್ಯ 10,38,36,845 ರೂ.ಗಳಾಗಿದ್ದರೆ, ಅವರ ಸಂಗಾತಿಯ ಒಟ್ಟು ಮೌಲ್ಯ 1,90,26,809 ರೂ.ಗಳಾಗಿದೆ.
ಕ್ರಿಪ್ಟೋ ಹೂಡಿಕೆಗಳು ಮತ್ತು ಸಾವಿರಾರು ಮರಗಳು
ಇತರ ಸಚಿವರ ಬಳಿ ಕೆಲವು ಆಸಕ್ತಿದಾಯಕ ಆಸ್ತಿಗಳಿವೆ. ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವ ಜಯಂತ್ ಚೌಧರಿ ಅವರು, 21.31 ಲಕ್ಷ ರೂ. ಮೌಲ್ಯದ ಕ್ರಿಪ್ಟೋ ಹೂಡಿಕೆಗಳನ್ನು ಹೊಂದಿದ್ದಾರೆ. ಕ್ರಿಪ್ಟೋ ಹೂಡಿಕೆಗಳನ್ನು ಘೋಷಿಸಿದ ಏಕೈಕ ಸಚಿವರು ಅವರು, ಮತ್ತು ಅವರ ಪತ್ನಿ ಚಾರು ಸಿಂಗ್ ಅವರ ಬಳಿ 22.41 ಲಕ್ಷ ರೂ. ಮೌಲ್ಯದ ಡಿಜಿಟಲ್ ಆಸ್ತಿ ಹಿಡುವಳಿ ಇದೆ. ನಂತರ 5,640 ಮರಗಳನ್ನು ಹೊಂದಿರುವ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಕೂಡ ಇದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




