ಕೊರೊನಾ ಸೋಂಕಿನ ಲಕ್ಷಣಗಳು ವೈರಲ್ ಜ್ವರದ ಮಾದರಿಯಲ್ಲಿವೆ: ದೆಹಲಿ ಆರೋಗ್ಯ ಸಚಿವ
ಕೊರೊನಾ ವೈರಸ್ನ ಹೊಸ ತಳಿ JN.1 ಆತಂಕ ಹುಟ್ಟಿಸುತ್ತಿದೆ. ಸಿಂಗಾಪುರ, ಹಾಂಕಾಂಗ್‌ನಲ್ಲಿ ತಲ್ಲಣ ಎಬ್ಬಿಸಿರುವ ಕೊರೊನಾ ಹೊಸ ತಳಿ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಭಯ ಇಲ್ಲದಿದ್ದರೂ ಜನರು ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಔಷಧಗಳು, ಬೆಡ್ಗಳು, ಆಕ್ಸಿಜನ್ ಹಾಗೂ ಇನ್ನಿತರೆ ವೈದ್ಯಕೀಯ ಉಪಕರಣಗಳನ್ನು ಸಿದ್ಧವಿಟ್ಟುಕೊಳ್ಳುವಂತೆ ಸೂಚಿಸಿದ್ದೇವೆ. ಎಂಥಾ ತುರ್ತು ಪರಿಸ್ಥಿತಿ ಉದ್ಭವವಾದರೂ ಗಾಬರಿಗೊಳ್ಳದಂತೆ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.

ನವದೆಹಲಿ, ಮೇ 27: ಇತ್ತೀಚೆಗೆ ಸಿಂಗಾಪುರ ಹಾಗೂ ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ(Corona) ಸೋಂಕಿನ ಹೊಸ ತಳಿಯ ಲಕ್ಷಗಳು ವೈರಲ್ ಜ್ವರದ ಮಾದರಿಯಲ್ಲಿವೆ ಎಂದು ದೆಹಲಿ ಆರೋಗ್ಯ ಸಚಿವ ಪಂಕಜ್ ಸಿಂಗ್ ಹೇಳಿದ್ದಾರೆ. ನಗರದಲ್ಲಿ ಕಂಡುಬಂದಿರುವ ಪ್ರಕರಣಗಳನ್ನು ಗಮನಿಸಿದರೆ ಲಕ್ಷಣಗಳು ಸೌಮ್ಯವಾಗಿವೆ ಎಂದು ಹೇಳಿದ್ದಾರೆ. ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ, ಕೊರೊನಾ ಸೋಂಕಿತರಲ್ಲಿ ನೆಗಡಿ, ಜ್ವರ, ಕೆಮ್ಮು, ಕಫದಂತಹ ಲಕ್ಷಣಗಳು ಕಂಡುಬಂದಿವೆ. ದೆಹಲಿಯಲ್ಲಿ ಇದುವರೆಗೆ 104 ಪ್ರಕರಣಗಳು ಕಂಡುಬಂದಿವೆ, ದೇಶದಲ್ಲಿ 1000ಪ್ರಕರಣಗಳು ವರದಿಯಾಗಿವೆ.
ಕೊರೊನಾ ವೈರಸ್ನ ಹೊಸ ತಳಿ JN.1 ಆತಂಕ ಹುಟ್ಟಿಸುತ್ತಿದೆ. ಸಿಂಗಾಪುರ, ಹಾಂಕಾಂಗ್‌ನಲ್ಲಿ ತಲ್ಲಣ ಎಬ್ಬಿಸಿರುವ ಕೊರೊನಾ ಹೊಸ ತಳಿ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಭಯ ಇಲ್ಲದಿದ್ದರೂ ಜನರು ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು ಎಂದು ಸೂಚನೆ ನೀಡಿದ್ದಾರೆ.
ಆದರೆ ಆಸ್ಪತ್ರೆಯಲ್ಲಿ ಔಷಧಗಳು, ಬೆಡ್ಗಳು, ಆಕ್ಸಿಜನ್ ಹಾಗೂ ಇನ್ನಿತರೆ ವೈದ್ಯಕೀಯ ಉಪಕರಣಗಳನ್ನು ಸಿದ್ಧವಿಟ್ಟುಕೊಳ್ಳುವಂತೆ ಸೂಚಿಸಿದ್ದೇವೆ. ಎಂಥಾ ತುರ್ತು ಪರಿಸ್ಥಿತಿ ಉದ್ಭವವಾದರೂ ಗಾಬರಿಗೊಳ್ಳದಂತೆ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.
ಮತ್ತಷ್ಟು ಓದಿ: ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು: ಮೇ ತಿಂಗಳಲ್ಲಿ ಒಟ್ಟು 33 ಪ್ರಕರಣ
ಕಳೆದ ಒಂದು ವಾರದಲ್ಲಿ (ಮೇ 19 ರ ನಂತರ), ಕೇರಳದಲ್ಲಿ ಅತಿ ಹೆಚ್ಚು 335 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 153, ದೆಹಲಿಯಲ್ಲಿ 99, ಗುಜರಾತ್‌ನಲ್ಲಿ 76 ಮತ್ತು ಕರ್ನಾಟಕದಲ್ಲಿ 34 ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಮೇ 26 ರಂದು ಬೆಳಗ್ಗೆ 8:00 ಗಂಟೆಗೆ ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 1009 ಆಗಿದೆ.
ಕೇರಳದಲ್ಲಿ ಅತಿ ಹೆಚ್ಚು 403 ಕೊರೊನಾ ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 209 ಮತ್ತು ದೆಹಲಿಯಲ್ಲಿ 104 ಪ್ರಕರಣಗಳು ದಾಖಲಾಗಿವೆ. ಈ ನಗರಗಳ ನಂತರ ಗುಜರಾತ್ ಇದ್ದು, ಅಲ್ಲಿ 83 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 47, ಉತ್ತರ ಪ್ರದೇಶದಲ್ಲಿ 15 ಮತ್ತು ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳು ವರದಿಯಾಗಿವೆ. ಕೇಂದ್ರ ಸರ್ಕಾರಿ ಸಂಸ್ಥೆ ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಇನ್ಸಾಕಾಗ್) ನ ಇತ್ತೀಚಿನ ಮಾಹಿತಿಯ ಪ್ರಕಾರ, ಹೊಸ ಕರೋನಾ ಸೋಂಕುಗಳ ಹೆಚ್ಚಳದ ನಡುವೆ ಎರಡು ಹೊಸ ರೂಪಾಂತರಗಳ ಪ್ರಕರಣಗಳು ವರದಿಯಾಗಿವೆ.
ಕರ್ನಾಟಕದಲ್ಲಿ ಈ ಮೂಲಕ ಈ ವರ್ಷದ ಒಟ್ಟಾರೆ ಪ್ರಕರಣಗಳ ಸಂಖ್ಯೆಯು 98 ಆಗಿದೆ. ಸದ್ಯ 47 ಸಕ್ರಿಯ ಪ್ರಕರಣಗಳಿವೆ.ಕೊರೊನಾ ಪರೀಕ್ಷೆ ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ದಿನಕ್ಕೆ 200 ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಉಸಿರಾಟ ಸಮಸ್ಯೆ ಇರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಒಂದು ತಿಂಗಳಿಗಾಗುವಷ್ಟು ಟೆಸ್ಟ್ ಕಿಟ್ ತೆಗೆದಿಡುವಂತೆ ಎಲ್ಲಆಸ್ಪತ್ರೆಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ – 19 ಟೆಸ್ಟಿಂಗ್ ಗೆ ಅಗತ್ಯ ಟೆಸ್ಟಿಂಗ್ ಕಿಟ್ ಗಳ ಲಭ್ಯತೆಯಿದೆ. ತೀವ್ರ ಉಸಿರಾಟ ಸಮಸ್ಯೆ ಪ್ರಕರಣಗಳಲ್ಲಿ ಇಂದಿನಿಂದ ಟೆಸ್ಟಿಂಗ್ ನಡೆಸಲು ಸೂಚಿಸಲಾಗಿದೆ. ಸದ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದ VRDL ಟೆಸ್ಟಿಂಗ್ ಸೌಲಭ್ಯ ಇರುವ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Tue, 27 May 25








