AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬರಿ ಬದಲು ಹೊಸ ಮಸೀದಿ: ನಿರ್ಮಾಣದ ಹೊಣೆ ಹೊತ್ತ ಬಿಜೆಪಿ ನಾಯಕ

ರಾಮಮಂದಿರ ನಿರ್ಮಾಣ ಪೂರ್ಣಗೊಳುತ್ತಿರುವ ವೇಳೆಯಲ್ಲಿ ವಿವಾದಿತ ಬಾಬರಿ ಮಸೀದಿಗೆ ನೀಡಿದ ಸ್ಥಳದಲ್ಲಿ ಹೊಸದಾಗಿ ಮಸೀದಿ ನಿರ್ಮಾಣದ ಹೊಣೆಯನ್ನು ಬಿಜೆಪಿ ನಾಯಕನಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್​​​​​​ ಆದೇಶದ ನಂತರ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ. ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳವನ್ನು ನೀಡಲಾಗಿತ್ತು.

ಬಾಬರಿ ಬದಲು ಹೊಸ ಮಸೀದಿ: ನಿರ್ಮಾಣದ ಹೊಣೆ ಹೊತ್ತ ಬಿಜೆಪಿ ನಾಯಕ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Dec 18, 2023 | 3:01 PM

Share

ದೆಹಲಿ, ಡಿ.18: ರಾಮಮಂದಿರ (Ram Mandir) ನಿರ್ಮಾಣ ಪೂರ್ಣಗೊಳುತ್ತಿರುವ ವೇಳೆಯಲ್ಲಿ ವಿವಾದಿತ ಬಾಬರಿ ಮಸೀದಿಗೆ (Babri mosque) ನೀಡಿದ ಸ್ಥಳದಲ್ಲಿ ಹೊಸದಾಗಿ ಮಸೀದಿ ನಿರ್ಮಾಣದ ಹೊಣೆಯನ್ನು ಬಿಜೆಪಿ ನಾಯಕನಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್​​​​​​ ಆದೇಶದ ನಂತರ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ. ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳವನ್ನು ನೀಡಲಾಗಿತ್ತು. ಇದೀಗ ಬಾಬರಿ ಮಸೀದಿಯ ನಿರ್ಮಾಣದ ಜವಾಬ್ದಾರಿಯನ್ನು ಮುಂಬೈನ ಹಾಜಿ ಅರಾಫತ್ ಶೇಖ್ ಅವರಿಗೆ ನೀಡಲಾಗಿದೆ. ಹಾಜಿ ಅರಾಫತ್ ಶೇಖ್ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರು.

ಇವರು ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸೇರಿಸಿಕೊಂಡಿದ್ದಾರೆ. ಹಾಗೂ ಇಸ್ಲಾಂ ಧರ್ಮಕ್ಕೆ ಇವರ ಕೊಡುಗೆ ಮಹತ್ತರವಾದ್ದದು. ಬಾಬರಿ ಮಸೀದಿಯನ್ನು ಅಯೋಧ್ಯೆಯ ಧನ್ನಿಪುರಗೆ ಸ್ಥಳಾಂತರಿಸಿದ ನಂತರ 2023 ಅಕ್ಟೋಬರ್​​ನಲ್ಲಿ ಈ ಮಸೀದಿಗೆ ಪ್ರವಾದಿ ‘ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ’ ಎಂದು ಹೆಸರಿಸಲು ಅಖಿಲ ಭಾರತ ರಬ್ತಾ-ಎ-ಮಸ್ಜಿದ್ ಸೂಚಿಸಿತ್ತು.

ಇದೀಗ ಉತ್ತರ ಪ್ರದೇಶ ಸುನ್ನಿ ಮಂಡಳಿಯ ಅಧ್ಯಕ್ಷ ಜಾಫರ್ ಫಾರೂಕಿ ಅವರು ಹಾಜಿ ಅರಾಫತ್ ಅವರನ್ನು ಮಸೀದಿ ನಿರ್ಮಾಣದ ಮೇಲ್ವಿಚಾರಣೆಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಅಬ್ದುಲ್ಲಾ ಇಬ್ನ್ ಕಮರ್, ಡಾ. ಅಬಿದ್ ಸೈಯದ್, ಮೌಲಾನಾ ಮುಹಮ್ಮದ್ ಮದನಿ ಅಬ್ದುಲ್ ರಬ್ ಅವರ ಉಪಸ್ಥಿತಿಯಲ್ಲಿ ಇವರನ್ನು ನೇಮಕ ಮಾಡಲಾಗಿದೆ.

ಮಸೀದಿ ನಿರ್ಮಾಣ ಹೊಣೆಯನ್ನು ನನಗೆ ನೀಡಿರುವುದು, ತುಂಬಾ ಖುಷಿ ಇದೆ. ಈ ಕಾರ್ಯಕ್ಕೆ ನನ್ನ ಕೈಯಲಾದ ಸಹಾಯವನ್ನು ಮಾಡುತ್ತೇನೆ ಹಾಗೂ ವಿಶ್ವಕ್ಕೆ ಮಾದರಿಯಾಗುವಂತೆ ಇದರ ಅಭಿವೃದ್ಧಿಯನ್ನು ಮಾಡುವೆ, ಇದರ ಜತೆಗೆ ಮುಸ್ಲಿಂ ಸಮುದಾಯದ ಅಭಿವೃದ್ಧಿ ಕೂಡ ನಡೆಯುತ್ತದೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆಯಲ್ಲಿ ಇತ್ತು. ಇದೀಗ ಈ ಸಮಸ್ಯೆಯನ್ನು ಪರಿಹಾರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಬಾಬರಿ ಮಸೀದಿ ಧ್ವಂಸಕ್ಕೆ 29 ವರ್ಷ, 1992 ಡಿಸೆಂಬರ್ 6ರಂದು ಅಲ್ಲಿ ನಡೆದದ್ದೇನು?

ಇದು ದೇವರ ಇಚ್ಛೆ, ನಾನು ಖಂಡಿತವಾಗಿಯೂ ಈ ಮಸೀದಿಯನ್ನು ಪೂರ್ಣಗೊಳಿಸುತ್ತೇನೆ. ಈ ಉದಾತ್ತ ಕಾರ್ಯದಲ್ಲಿ, ನಾನು ದೇಶದ ಎಲ್ಲಾ ಧರ್ಮ ಮತ್ತು ಪ್ರತಿಯೊಂದು ಪ್ರದೇಶದ ಎಲ್ಲಾ ಧಾರ್ಮಿಕ ವಿದ್ವಾಂಸರು, ಧಾರ್ಮಿಕ ಮುಖಂಡರು, ಇಸ್ಲಾಮಿಕ್ ವಿದ್ವಾಂಸರ ಸಹಾಯವನ್ನು ತೆಗೆದುಕೊಳ್ಳುತ್ತೇನೆ. ಎಲ್ಲಾ ಶರಿಯತ್ ಅಂಶಗಳನ್ನು ಪಾಲಿಸಿ ಇದರ ನಿರ್ಮಾಣವನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?