AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ವಾಜೆ ಪ್ರಕರಣ: ಪ್ರತಿ ತಿಂಗಳು ಲಂಚ ಸ್ವೀಕರಿಸುತ್ತಿದ್ದ ಬಗ್ಗೆ ಎನ್​ಐಎಗೆ ಸಿಕ್ತು ಮಹತ್ವದ ದಾಖಲೆಗಳು

ಅಗತ್ಯವಿದ್ದರೆ, ಉನ್ನತ ತನಿಖೆಗಾಗಿ ದಾಖಲೆಗಳನ್ನು ಆದಾಯ ತೆರಿಗೆ ಅಥವಾ ಸಿಬಿಐ ಅಧಿಕಾರಿಗಳ ಬಳಿಯೂ ಹಂಚಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.

ಸಚಿನ್ ವಾಜೆ ಪ್ರಕರಣ: ಪ್ರತಿ ತಿಂಗಳು ಲಂಚ ಸ್ವೀಕರಿಸುತ್ತಿದ್ದ ಬಗ್ಗೆ ಎನ್​ಐಎಗೆ ಸಿಕ್ತು ಮಹತ್ವದ ದಾಖಲೆಗಳು
ಸಚಿನ್ ವಾಜೆ
TV9 Web
| Updated By: ganapathi bhat|

Updated on:Apr 05, 2022 | 12:49 PM

Share

ದೆಹಲಿ: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಉದ್ಯಮಿ ಮನ್​ಸುಖ್ ಹಿರೇನ್ ಪ್ರಕರಣಕ್ಕೆ ಸಂಬಂಧಿಸಿ ಅಚ್ಚರಿಯ ಬೆಳವಣಿಗೆಗಳು ಘಟಿಸಿದ್ದವು. ಶಿವಸೇನೆ-ಎನ್​ಸಿಪಿ-ಬಿಜೆಪಿ, ಪೊಲೀಸ್ ಅಧಿಕಾರಿಗಳಾದ ಸಚಿನ್ ವಾಜೆ, ಪರಮ್​ವೀರ್ ಸಿಂಗ್ ಮುಂತಾದವರ ಹಿಂದಿನ ಘಟನೆಗಳು ಈ ಪ್ರಕರಣದ ಬೆನ್ನಲ್ಲಿ ಹಂತಹಂತವಾಗಿ ಪದರ ಕಳಚಿಕೊಳ್ಳುವಂತಾಗಿತ್ತು. ಈ ಕೇಸ್​ಗೆ ಸಂಬಂಧಿಸಿ ಹೊಸ ತನಿಖಾ ಮಾಹಿತಿಯೊಂದು ಇದೀಗ ಬಹಿರಂಗವಾಗಿದೆ.

ಸದ್ಯ ಗೃಹ ರಕ್ಷಕ ದಳದ ಪೊಲೀಸ್ ಅಧಿಕಾರಿ ಆಗಿರುವ ಹಾಗೂ ಈ ಹಿಂದೆ ಮುಂಬೈ ಪೊಲೀಸ್ ಅಧಿಕಾರಿಯಾಗಿದ್ದ ಪರಮ್​ವೀರ್ ಸಿಂಗ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ತಿಂಗಳಿಗೆ ಮುಂಬೈ ನಗರದ ಬಾರ್, ಪಬ್​ಗಳಿಂದ 100 ಕೋಟಿ ಲಂಚ ಸಂಗ್ರಹಿಸುವಂತೆ ಈಗ ಅಮಾನತು ಆಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಗುರಿ ನೀಡಿದ್ದರು ಎಂದು ಆರೋಪಿಸಿದ್ದರು.

ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ಹೇಳುವಂತೆ, ಹಣ ಪಾವತಿಯ ದಾಖಲೆಗಳು ಲಂಚದ ಹಣ ಆಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಗುರುವಾರ ದಕ್ಷಿಣ ಮುಂಬೈನ ಗಿರ್​ಗಾಂವ್​ನ ಕ್ಲಬ್ ಒಂದಕ್ಕೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದ ಎನ್​ಐಎ ಈ ಮಾಹಿತಿ ಬಹಿರಂಗಪಡಿಸಿದೆ.

ಕ್ಲಬ್​ನಿಂದ ಎನ್​ಐಎ ವಶಪಡಿಸಿಕೊಂಡಿರುವ ದಾಖಲೆಯು, ಕಚೇರಿಯ ಹೆಸರು ಹಾಗೂ ಸಿಬ್ಬಂದಿಯ ಹೆಸರು ಮತ್ತು ಸ್ಥಾನವನ್ನು ಹಾಗೂ ಅವರ ಹೆಸರಿನ ಬಳಿ ಪಡೆದ ಹಣದ ವಿವರಗಳನ್ನು ತೋರಿಸುತ್ತದೆ ಎಂದು ತಿಳಿದುಬಂದಿದೆ. ಇದೇ ದಾಖಲೆಯು ಪ್ರತಿ ತಿಂಗಳುಗಳಲ್ಲಿ ಕಂಡುಬಂದಿರುವುದರಿಂದ ಅದು ಲಂಚದ ಮೊತ್ತವಾಗಿರಬಹುದು ಎಂದು ತನಿಖಾ ತಂಡ ಅಂದಾಜಿಸಿದೆ.

ಅಗತ್ಯವಿದ್ದರೆ, ಉನ್ನತ ತನಿಖೆಗಾಗಿ ದಾಖಲೆಗಳನ್ನು ಆದಾಯ ತೆರಿಗೆ ಅಥವಾ ಸಿಬಿಐ ಅಧಿಕಾರಿಗಳ ಬಳಿಯೂ ಹಂಚಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ಸದ್ಯ ಸಚಿನ್ ವಾಜೆ ಅಮಾನತು ಆಗಿದ್ದು, ತನಿಖೆ ಎದುರಿಸುತ್ತಿದ್ದಾರೆ. ಜತೆಗೆ ನರೇಶ್ ಗೋರ್ ಹಾಗೂ ವಿನಾಯಕ್ ಶಿಂಧೆ ಕೂಡ ಎನ್​ಐಎ ತನಿಖೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಸಸ್ಪೆಂಡ್ ಆಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸಿದ 8 ದುಬಾರಿ, ಐಷಾರಾಮಿ ಕಾರುಗಳು ಯಾವುವು?

ಇದನ್ನೂ ಓದಿ: ಮೀಠೀ ನದಿಗೆ ಸಚಿನ್ ವಾಜೆಯನ್ನು ಕರೆದೊಯ್ದ ಎನ್​ಐಎ: ಹಾರ್ಡ್​ಡಿಸ್ಕ್, ವಾಹನದ ನಂಬರ್​ ಪ್ಲೇಟ್ ಪತ್ತೆ

Published On - 11:23 pm, Sun, 4 April 21

ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ರೈಸಿಂಗ್ ಸ್ಟಾರ್ ಏಷ್ಯಾಕಪ್; ಕತಾರ್​ಗೆ ಹಾರಿದ ಭಾರತ ಯುವ ಪಡೆ
ರೈಸಿಂಗ್ ಸ್ಟಾರ್ ಏಷ್ಯಾಕಪ್; ಕತಾರ್​ಗೆ ಹಾರಿದ ಭಾರತ ಯುವ ಪಡೆ
ಇಸ್ಲಾಂ ಧರ್ಮಕ್ಕೆ ಕಳಂಕ ತರಬೇಡಿ; ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮನವಿ
ಇಸ್ಲಾಂ ಧರ್ಮಕ್ಕೆ ಕಳಂಕ ತರಬೇಡಿ; ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮನವಿ