AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಸಿಸ್ಟೆನ್ಸ್ ಫ್ರಂಟ್​ಗೆ ಹಣದ ಹರಿವು; ಮಲೇಷ್ಯಾದ ನಂಟು; ಎನ್​ಐಎ ತನಿಖೆಯಲ್ಲಿ ಹೊಸ ಸಾಕ್ಷ್ಯ

The Resistance Front funding: ಪಹಲ್ಗಾಂ ದಾಳಿಯ ಸಂಯೋಜಕ ಎನ್ನಲಾದ ದಿ ರೆಸಿಸ್ಟೆನ್ಸ್ ಫ್ರಂಟ್​ಗೆ ಮಲೇಷ್ಯಾದಿಂದ ಹವಾಲ ಮೂಲಕ ಫಂಡಿಂಗ್ ಬಂದಿರಬಹುದು. ಎನ್​ಐಎ ತನಿಖೆಯಲ್ಲಿ ಕೆಲ ಪ್ರಮುಖ ಸಾಕ್ಷ್ಯಾಧಾರಗಳು ಸಿಕ್ಕಿರುವುದು ಗೊತ್ತಾಗಿದೆ. ಟಿಆರ್​ಎಫ್ ಪಾಕ್ ಮೂಲಕ ಲಷ್ಕರೆ ತೈಯಬಾದ ಫ್ರಂಟ್ ಸಂಘಟನೆ ಎನ್ನಲಾಗಿದೆ.

ರೆಸಿಸ್ಟೆನ್ಸ್ ಫ್ರಂಟ್​ಗೆ ಹಣದ ಹರಿವು; ಮಲೇಷ್ಯಾದ ನಂಟು; ಎನ್​ಐಎ ತನಿಖೆಯಲ್ಲಿ ಹೊಸ ಸಾಕ್ಷ್ಯ
ಎನ್​ಐಎ ತನಿಖೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2025 | 1:06 PM

Share

ನವದೆಹಲಿ, ಸೆಪ್ಟೆಂಬರ್ 3: ಪಹಲ್ಗಾಂ ಉಗ್ರ ದಾಳಿ ಕೃತ್ಯದ ಹೊಣೆ ಹೊತ್ತಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಉಗ್ರ ಸಂಘಟನೆಗೆ ಯಾರಿಂದ ನೆರವು ಹರಿದುಬರುತ್ತಿದೆ ಎನ್ನುವುದಕ್ಕೆ ಹೊಸ ಪುರಾವೆ ಸಿಕ್ಕಿದೆ. ಮಲೇಷ್ಯಾದಿಂದ ಹವಾಲಾ ಮೂಲಕ ಟಿಆರ್​ಎಫ್​ಗೆ (TRF- The Resistance Front) ಹಣ ಹರಿದುಹೋಗುತ್ತಿರಬಹುದು ಎಂಬುದಕ್ಕೆ ಎನ್​ಐಎ ತನಿಖೆ ವೇಳೆ ಅನುಮಾನ ಮೂಡಿಸುವ ಸಾಕ್ಷ್ಯಾಧಾರಗಳು ಸಿಕ್ಕಿರುವುದು ಗೊತ್ತಾಗಿದೆ.

ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬುದು ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಉಗ್ರ ಸಂಘಟನೆ. 2024ರ ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ಸಂಭವಿಸಿದ್ದ ಉಗ್ರ ದಾಳಿ ಘಟನೆಯ ಹೊಣೆಯನ್ನು ಈ ಸಂಘಟನೆ ಮೊದಲು ಹೊತ್ತಿತ್ತು. ನಂತರ ಅದನ್ನು ನಿರಾಕರಿಸಿತು. ಇದು ಲಷ್ಕರೆ ತೊಯ್ಯಬಾದ ಇನ್ನೊಂದು ಮುಖ ಎಂದು ಹೇಳಲಾಗುತ್ತಿದೆ. ಭಾರತದ ತನಿಖಾ ಸಂಸ್ಥೆಯಾದ ಎನ್​ಐಎ ಈ ಟಿಆರ್​ಎಫ್ ಸಂಘಟನೆಯ ಜಾಲವನ್ನು ಬೇದಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಕಿಮ್, ಪುಟಿನ್ ಜೊತೆ ಜಿನ್​ಪಿಂಗ್; ಚೀನಾದಲ್ಲಿ ಬೃಹತ್ ಮಿಲಿಟರಿ ಪೆರೇಡ್; ಪಾಶ್ಚಿಮಾತ್ಯ ಶಕ್ತಿಗೆ ಖಡಕ್ ಸಂದೇಶ

ಟಿಆರ್​ಎಫ್​ನೊಂದಿಗೆ ಶಾಮೀಲಾಗಿದ್ದಾರೆನ್ನಲಾದ ಶ್ರೀನಗರದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್​ನಲ್ಲಿ 450ಕ್ಕೂ ಹೆಚ್ಚು ಸಂಪರ್ಕಗಳ ಜಾಡು ಹಿಡಿದಾಗ ಎನ್​ಐಎಗೆ ಕೆಲ ಪ್ರಬಲ ಸುಳಿವುಗಳು ಸಿಕ್ಕಿವೆ. ಈ ಕೆಲ ಕಾಂಟ್ಯಾಕ್ಟ್​ಗಳು ಹಿಂದಿನ ಕೆಲ ಭಯೋತ್ಪಾದನಾ ಕೃತ್ಯಗಳಲ್ಲಿ ಆರೋಪಿಗಳಾಗಿದ್ದಾರೆ. ಹಾಗೆಯೇ, ಮಲೇಷ್ಯಾ ಮೂಲಕ ಹವಾಲ ರೂಪದಲ್ಲಿ ಹಣ ಹರಿದುಬರುತ್ತಿರುವುದು, ಮತ್ತು ಈ ಹಣವನ್ನು ಟಿಆರ್​ಎಫ್​ಗೆ ಫಂಡಿಂಗ್ ಆಗಿ ಬಳಕೆ ಆಗುತ್ತಿರುವುದಕ್ಕೆ ಸಾಕ್ಷಿಗಳನ್ನು ಎನ್​ಐಎ ಪತ್ತೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ಹವಾಲಾ ಜಾಲದಲ್ಲಿ ಮಲೇಷ್ಯಾದ ನಿವಾಸಿ ಸಾಜದ್ ಅಹ್ಮದ್ ಮಿರ್ ಮತ್ತು ಯಾಸಿರ್ ಹಾಯತ್ ಅವರ ಹೆಸರು ಪ್ರಧಾನವಾಗಿ ಶಂಕೆ ಮೂಡಿಸಿವೆ. ಶ್ರೀನಗರದ ಹಯತ್ ಅವರು ಮಲೇಷ್ಯಾಗೆ ಹಲವು ಬಾರಿ ಹೋಗ ಬಂದಿದ್ದಾರೆ. ಮಲೇಷ್ಯಾ ನಿವಾಸಿ ಮಿರ್​ನ ನೆರವಿನಿಂದ ಹಯಾತ್ ಟಿಆರ್​ಎಫ್​ಗೆ ಶಫತ್ ವಾನಿ ಎಂಬಾತನ ಮೂಲಕ 9 ಲಕ್ಷ ರೂ ಫಂಡಿಂಗ್ ರವಾನಿಸಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನ 1 ಲಕ್ಷ ನಕಲಿ ಮತದಾರರಿಗೇಕೆ ನೋಟಿಸ್ ನೀಡಿಲ್ಲ? ಚುನಾವಣಾ ಆಯೋಗಕ್ಕೆ ಪವನ್ ಖೇರಾ ಪ್ರಶ್ನೆ

ಟಿಆರ್​ಎಫ್​ನ ಪ್ರಮುಖ ಆಪರೇಟಿವ್ ಆಗಿರುವ ಶಫತ್ ವಾನಿ ಯಾವುದೂ ಯೂನಿವರ್ಸಿಟಿ ಕಾನ್ಫರೆನ್ಸಲ್ಲಿ ಪಾಲ್ಗೊಳ್ಳಲು ಮಲೇಷ್ಯಾಗೆ ಭೇಟಿ ನೀಡಿದ್ದ ಎನ್ನಲಾಗಿದೆ.

ದಿ ರೆಸಿಸ್ಟೆನ್ಸ್ ಫ್ರಂಟ್ 2019ರಲ್ಲಿ ರಚನೆಯಾಗಿದ್ದು. ಜಮ್ಮು ಕಾಶ್ಮೀರದ ಸಂಘಟನೆ ಎಂದು ಬಿಂಬಿಸುವ ಕೆಲಸ ನಡೆದಿದೆ. ಇದು ಪಾಕಿಸ್ತಾನ ಮೂಲದ ಲಷ್ಕರೆ ತೈಯಬಾದ ಪ್ರಾಕ್ಸಿ ಸಂಘಟನೆ ಎನ್ನಲಾಗಿದೆ. ಪಹಲ್ಗಾಂ ಘಟನೆ ಬಳಿಕ ಟಿಆರ್​ಎಸ್ ಅನ್ನು ಅಮೆರಿಕ ಕೂಡ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!