ನಿಮ್ಮ ಕೈಯಲ್ಲಿ ಇರುವುದು ನ್ಯಾಯವನ್ನು ಎತ್ತಿ ಹಿಡಿಯುವ ಅಸ್ತ್ರವೋ! ಅಥವಾ ತಲೆ ಬಾಚಿಕೊಳ್ಳುವ ಶಕ್ತಿಯೋ ಎಂಬರ್ಥದಲ್ಲಿ ಪುಣೆಯ ಕೋರ್ಟ್ (Pune District Court) ನೋಟಿಸ್ ಬೋರ್ಡ್ನಲ್ಲಿ ತನ್ನ ಮಹಿಳಾ ವಕೀಲರಿಗೆ (Women Advocates) ಕಿವಿಮಾತು ಹೇಳಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಿರಿಯ ವಕೀಲೆ ಮತ್ತು ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಅವರು ಟ್ವಿಟ್ಟರ್‌ನಲ್ಲಿ ನೋಟಿಸ್ ಬೋರ್ಡ್ನಲ್ಲಿರುವ ಈ ಆಜ್ಞಾಪನಾ ಬರಹವನ್ನು ಹಂಚಿಕೊಂಡಿದ್ದಾರೆ. “ಮಹಿಳಾ ವಕೀಲರು ತೆರೆದ ನ್ಯಾಯಾಲಯದಲ್ಲಿ ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುತ್ತಿರುವುದು ಪದೇ ಪದೇ ಗಮನಕ್ಕೆ ಬರುತ್ತಿದೆ. ಇದರಿಂದ ನ್ಯಾಯಾಲಯದ ಕಾರ್ಯಚಟುವಟಿಕೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ, ಮಹಿಳಾ ವಕೀಲರು ಇಂತಹ ಚಟುವಟಿಕೆಯಿಂದ ದೂರವಿರಲು ಈ ಮೂಲಕ ಸೂಚಿಸಲಾಗಿದೆ ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ. ಅಕ್ಟೋಬರ್ 20 ರಂದು ಈ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಕಮೆಂಟ್ ಮಾಡಿರುವ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ತಮ್ಮ ಟ್ವಿಟ್ಟರ್‌ನಲ್ಲಿ (Twitter) “ವಾವ್ ಈಗ ನೋಡಿ! ಮಹಿಳಾ ವಕೀಲರಿಂದ ಯಾರು ವಿಚಲಿತರಾಗಿದ್ದಾರೆ ಮತ್ತು ಏಕೆ!” ಎಂದು ಬರೆದಿದ್ದಾರೆ:
ಬಾರ್ ಅಂಡ್ ಬೆಂಚ್ ವರದಿ ಮಾಡಿರುವ ಪ್ರಕಾರ ನೋಟಿಸ್ ಬಗ್ಗೆ ವ್ಯಾಪಕವಾಗಿ ಟೀಕೆಗಳು ಬಂದ ನಂತರ ನೋಟಿಸ್ ಅನ್ನು ಹಿಂಪಡೆಯಲಾಗಿದೆ. ಈ ನೋಟಿಸ್ ಕೇವಲ ನ್ಯಾಯಾಲಯದ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಉದ್ದೇಶವನ್ನು ಹೊಂದಿತ್ತು ಮತ್ತು ಯಾರದೇ ಭಾವನೆಗಳಿಗೆ ಧಕ್ಕೆ ತರುವುದಲ್ಲ ಎಂದು ಕೋರ್ಟ್ ಮೂಲಗಳು ತಿಳಿಸಿವೆ.
“ಇದು ನಿಜವೇ!!! ಅಷ್ಟು ಸುಲಭವಾಗಿ ವಿಚಲಿತರಾಗುವ ಸಾಮರ್ಥ್ಯವಿರುವ ವ್ಯಕ್ತಿಗಳು ನ್ಯಾಯ ವಿತರಣಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರಬೇಕೇ?” ಎಂದು ಟ್ವಿಟರ್ ಬಳಕೆದಾರರು ಕೇಳಿದ್ದಾರೆ. “ಪುರುಷ ವಕೀಲರು ಮುಕ್ತ ನ್ಯಾಯಾಲಯದಲ್ಲಿ ಮಹಿಳಾ ವಕೀಲರನ್ನು (ಹಿರಿಯ ವಕೀಲರು ಸೇರಿದಂತೆ) ಬೆದರಿಸುವ ಬಗ್ಗೆ ಚಕಾರ ಎತ್ತುವುದಿಲ್ಲ. ಅದೇ ಮಹಿಳಾ ವಕೀಲರು ನ್ಯಾಯಾಲಯದಲ್ಲಿ ತಲೆಗೂದಲನ್ನು ಸರಿಪಡಿಸಿಕೊಳ್ಳುವುದು ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ ಎನ್ನುತ್ತಾರೆ” ಎಂದು ಮತ್ತೊಬ್ಬರು ಟ್ವೀಟ್ ಕಿಡಿಕಾರಿದ್ದಾರೆ.
ನ್ಯಾಯಮೂರ್ತಿ ಪೀಠವು ಕೇವಲ “ಸರ್‌ಗಳಿಗೆ” ಮೀಸಲು ಅಲ್ಲ ಅಲ್ಲವೇ!?
ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ, ನ್ಯಾಯಮೂರ್ತಿ ರೇಖಾ ಪಾಲಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗ ಅವರನ್ನು “ಸರ್” ಎಂದು ಪದೇ ಪದೇ ಉಲ್ಲೇಖಿಸಲಾಯಿತು. ಆದರೆ, ಜಸ್ಟಿಸ್ ಪಾಲಿ ಅವರು ತಮ್ಮ ಬಗ್ಗೆ ಹೀಗೆ ಉಲ್ಲೇಖಿಸಿದ ವಕೀಲರನ್ನು ತಕ್ಷಣವೇ ಬಾಯಿ ಮುಚ್ಚಿಸಿದರು. “ನಾನು ಸರ್ ಅಲ್ಲ. ಅದು ನಿಮಗೆ ಅರ್ಥವಾದೀತು ಎಂದು ನಾನು ಭಾವಿಸುತ್ತೇನೆ” ಎಂದು ನ್ಯಾಯಮೂರ್ತಿ ಪಾಲಿ ಸೌಮ್ಯವಾಗಿಯೇ ಪ್ರತಿಕ್ರಿಯಿಸಿದ್ದರು.
ಎಚ್ಚೆತ್ತ ವಕೀಲರುರೇನೂ ತಕ್ಷಣ ಕ್ಷಮೆಯಾಚಿಸಿದರು. ಆದರೆ ಅವರ ಕ್ಷಮೆಯಾಚನೆ ಮತ್ತು ವಿವರಣೆ ನೆಟಿಜನ್‌ಗಳಿಗೆ ಸರಿಹೊಂದಲಿಲ್ಲ. ವ್ಯಾಪಕ ಆಕ್ರೋಶಗಳು/ ವಿವರಣೆಗಳು ಕೇಳಿಬಂದವು. ” ಅವರು ಕುಳಿತಿದ್ದ ಕುರ್ಚಿಯ (ನ್ಯಾಯಮೂರ್ತಿ ಸ್ಥಾನ) ಕಾರಣ ಹಾಗೆ ಸರ್ ಎಂದು ಸಂಭೋದಿಸಿರಬಹುದು” ಎಂದು ಕೆಲವರು ಸಮರ್ಥಿಸಿಕೊಳ್ಳಲು ಮುಂದಾದರು. ಆದರೆ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜಸ್ಟೀಸ್ ಪಾಲಿ ಅವರು ವಾಗ್ದಾಳಿ ನಡೆಸಿದರು. ಪೀಠವು ಕೇವಲ “ಸರ್‌ಗಳಿಗೆ” ಮೀಸಲು ಎಂದು ಅಭಿಪ್ರಾಯಪಟ್ಟು ವಿವರಣೆ ನೀಡಿದಂತಿದೆ. ಇದು ವಿಷಯವನ್ನು ಇನ್ನಷ್ಟು ಹದಗೆಡಿಸಿದೆ ಎಂದು ಕಿಡಿಕಾರಿದರು. ಕಿರಿಯ ಸದಸ್ಯರು ಹೀಗೆ ತಾರತಮ್ಯ ಮಾಡುವುದನ್ನು ನಿಲ್ಲಿಸದಿದ್ದರೆ ಮುಂಬರುವ ಪೀಳಿಗೆಗೆ ಯಾವ ಭರವಸೆ/ ಏನು ಸಂದೇಶವನ್ನು ರವಾನಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ನ್ಯಾ. ರೇಖಾ ಮಾರ್ಮಿಕವಾಗಿ ಹೇಳಿದರು.
ಈ ಕುರಿತಾದ ಕೆಲವು ಟ್ವೀಟ್ಗಳು ಇಲ್ಲಿವೆ:
Wow now look ! Who is distracted by women advocates and why ! pic.twitter.com/XTT4iIcCbx
— Indira Jaising (@IJaising) October 23, 2022
No one, absolutely no one:
What people in Indian courts imagine when we fix our hair after that chaotic autoride to court with 5 files: https://t.co/mkgmZWz0hL pic.twitter.com/ZpDTQjR10e
— Priyangee প্রিয়াঙ্গী (@PinguicVerse) October 24, 2022
Published On - 11:54 am, Tue, 25 October 22