AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈ ವಿಮಾನ ನಿಲ್ದಾಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಇಂಡಿಗೋ ವಿಮಾನದೊಳಗೆ ಸಿಲುಕಿಕೊಂಡ ಪ್ರಯಾಣಿಕರು

ಚೆನ್ನೈನಿಂದ ಸಿಂಗಾಪುರಕ್ಕೆ ಹೋಗುವ ಇಂಡಿಗೋ ವಿಮಾನದಲ್ಲಿ ವಿಳಂಬ ಉಂಟಾಗಿದ್ದು, ಮಂಗಳವಾರ ಸುಮಾರು 5 ಗಂಟೆಗಳ ಕಾಲ ಪ್ರಯಾಣಿಕರು ವಿಮಾನದೊಳಗೆ ಕುಳಿತುಕೊಳ್ಳಬೇಕಾಯಿತು. ಇದು ಪ್ರಯಾಣಿಕರಲ್ಲಿ ಹತಾಶೆಯನ್ನು ಉಂಟುಮಾಡಿತು. ಪ್ರಯಣಿಕರು ವಿಮಾನಯಾನ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಇಂಡಿಗೋ ವಿಮಾನದೊಳಗೆ ಸಿಲುಕಿಕೊಂಡ ಪ್ರಯಾಣಿಕರು
Indigo
ಸುಷ್ಮಾ ಚಕ್ರೆ
|

Updated on:Feb 25, 2026 | 7:26 PM

Share

ಚೆನ್ನೈ, ಫೆಬ್ರವರಿ 25: ಇಂಡಿಗೋ ವಿಮಾನವು ಚೆನ್ನೈನಿಂದ ಸಿಂಗಾಪುರಕ್ಕೆ ಹೊರಡುವ ಮೊದಲು 200ಕ್ಕೂ ಹೆಚ್ಚು ಪ್ರಯಾಣಿಕರು ಇಂಡಿಗೋ (IndiGo) ವಿಮಾನದೊಳಗೆ 5 ಗಂಟೆಗಳ ಕಾಲ ಕಾಯುವಂತಾಯಿತು. ವಿಮಾನ ಹತ್ತಿದ ನಂತರ ಸುಮಾರು 5 ಗಂಟೆಗಳ ಕಾಲ ಅಂದರೆ ಚೆನ್ನೈನಿಂದ ಸಿಂಗಾಪುರ ತಲುಪುವ ಸಮಯಕ್ಕಿಂತ ಹೆಚ್ಚು ಕಾಲ ವಿಮಾನದೊಳಗೆ ಕುಳಿತು ಕಾಯುವಂತಾಯಿತು. ಇದರಿಂದ ಹತಾಶೆಗೊಂಡ ಪ್ರಯಾಣಿಕರು ಅಸಮಾಧಾನ ಹೊರಹಾಕಿದರು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಯ ಮೇಲೆ ಕೋಪ ವ್ಯಕ್ತಪಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ

ಈ ಘಟನೆ ನಡೆದ ನಂತರ ಇಂಡಿಗೋ ಸ್ಪಷ್ಟನೆಯನ್ನೂ ನೀಡಿದೆ. ಕ್ಯಾಬಿನ್ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರುವುದನ್ನು ಪೈಲಟ್ ಗಮನಿಸಿ ಎಂಜಿನಿಯರಿಂಗ್ ತಂಡಕ್ಕೆ ಎಚ್ಚರಿಕೆ ನೀಡಿದ್ದರಿಂದ ವಿಳಂಬ ಸಂಭವಿಸಿದೆ ಎಂದು ಇಂಡಿಗೋ ವಿವರಿಸಿದೆ. ಈ ವೇಳೆ ಕಾಕ್‌ಪಿಟ್ ಸಿಬ್ಬಂದಿ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೆಷನ್‌ಗಳನ್ನು (ಎಫ್‌ಡಿಟಿಎಲ್) ಮೀರಿದ್ದರು. ಹೀಗಾಗಿ, ಬದಲಿ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕಿತ್ತು. ಇದು ವಿಮಾನ ಹಾರಾಟದ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Wed, 25 February 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More