AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿದ್ದಾಗಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ, ಇಂಡಿಗೋ ನಡುವೆ ಡಿಕ್ಕಿ

ಮುಂಬೈ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ಸಣ್ಣದರಲ್ಲಿ ತಪ್ಪಿದಂತಾಗಿದೆ. ಪ್ರಯಾಣಿಕರು ವಿಮಾನದಲ್ಲಿದ್ದಾಗಲೇ ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನಗಳ ರೆಕ್ಕೆಗಳು ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಗಳು ಉಂಟಾಗಿಲ್ಲ. ವಿಮಾನಕ್ಕೆ ಆಗಿರುವ ಹಾನಿಯ ಪ್ರಮಾಣ, ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಮತ್ತು ಯಾವುದೇ ಗಾಯಗಳ ಕುರಿತು ವಿವರಗಳು ತಿಳಿದುಬಂದಿಲ್ಲ.

ಪ್ರಯಾಣಿಕರಿದ್ದಾಗಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ, ಇಂಡಿಗೋ ನಡುವೆ ಡಿಕ್ಕಿ
Air India And IndigoImage Credit source: x
ಸುಷ್ಮಾ ಚಕ್ರೆ
|

Updated on: Feb 03, 2026 | 10:37 PM

Share

ಮುಂಬೈ, ಫೆಬ್ರವರಿ 3: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಯಾಣಿಕ ವಿಮಾನಗಳು ಡಿಕ್ಕಿ ಹೊಡೆದಿವೆ. ಈ ಘಟನೆಯ ಸಮಯದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರು ಕುಳಿತಿದ್ದರು. ಕೊಯಮತ್ತೂರಿಗೆ ಹೊರಡಲು ರೆಡಿಯಾಗಿ ರಿವರ್ಸ್​ ಹೋಗುತ್ತಿದ್ದ ಏರ್ ಇಂಡಿಯಾ (Air India) ವಿಮಾನ AI 2732 ಮತ್ತು ಹೈದರಾಬಾದ್‌ನಿಂದ ಬಂದ ನಂತರ ಟ್ಯಾಕ್ಸಿ ಮಾಡುತ್ತಿದ್ದ ಇಂಡಿಗೋ (Indigo)  ವಿಮಾನ 6E 791ಗಳ ನಡುವೆ ಡಿಕ್ಕಿ ಉಂಟಾಗಿದೆ.

ಸದ್ಯಕ್ಕೆ ಎರಡೂ ವಿಮಾನಗಳಿಗೆ ಹಾನಿಯಾದ ಪ್ರಮಾಣ, ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಮತ್ತು ಈ ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದರ ಕುರಿತು ವಿವರಗಳು ತಕ್ಷಣ ಲಭ್ಯವಾಗಿಲ್ಲ.

ಇದನ್ನೂ ಓದಿ: IndiGo Crisis: ಡಿಸೆಂಬರ್​ನಲ್ಲಿ ಉಂಟಾದ ವಿಮಾನಗಳ ಹಾರಾಟದ ತೊಂದರೆಗೆ ಇಂಡಿಗೋಗೆ 22 ಕೋಟಿ ರೂ. ದಂಡ!

ಎರಡು ವಿಮಾನಗಳ ನಡುವೆ ಈ ರೀತಿ ಡಿಕ್ಕಿ ಸಂಭವಿಸುವುದು ಬಹಳ ಅಪರೂಪವಾಗಿದ್ದರೂ ಪುಶ್‌ಬ್ಯಾಕ್ ಕಾರ್ಯಾಚರಣೆಗಳ ಸಮಯದಲ್ಲಿ ಅಥವಾ ವಿಮಾನಗಳು ಜನದಟ್ಟಣೆಯ ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ಚಲಿಸುವಾಗ ಟ್ಯಾಕ್ಸಿ ಮಾಡುವಾಗ ನೆಲದ ಡಿಕ್ಕಿಗಳು ಆಗಾಗ ಸಂಭವಿಸುತ್ತವೆ. ಅಂತಹ ಘಟನೆಗಳಲ್ಲಿ ಸಾಮಾನ್ಯವಾಗಿ ರೆಕ್ಕೆಯ ತುದಿಗೆ ಡಿಕ್ಕಿ ಉಂಟಾಗುತ್ತದೆ. ಕೆಲವೊಮ್ಮೆ ವಿಮಾನದ ಬಾಲಕ್ಕೂ ಡಿಕ್ಕಿ ಆಗುತ್ತದೆ.

ಇದನ್ನೂ ಓದಿ: ಹೈಜಾಕ್ ಬೆದರಿಕೆ: ಕುವೈತ್-ದೆಹಲಿ ಇಂಡಿಗೋ ವಿಮಾನ ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ

ಏರ್ ಇಂಡಿಯಾ ಮತ್ತು ಇಂಡಿಗೋ ಎರಡೂ ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಮುಂಬೈ ವಿಮಾನ ನಿಲ್ದಾಣವು ಭಾರತದ ಅತ್ಯಂತ ಜನನಿಬಿಡ ವಾಯುಯಾನ ಕೇಂದ್ರಗಳಲ್ಲಿ ಒಂದಾಗಿದ್ದು, ಅದರ ಎರಡು ರನ್‌ವೇಗಳಲ್ಲಿ ಪ್ರತಿದಿನ ನೂರಾರು ವಿಮಾನಗಳು ಹಾರಾಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು